ಬೆಳಗಾವಿ: ಬೈಕ್ ಮೇಲೆ ಹೊರಟಿದ್ದ ಯುವಕನ ಮೇಲೆ ಮರ ಬಿದ್ದು ಸಾವು

ಬೆಳಗಾವಿ : ಬೈಕ್ ಮೇಲೆ ಹೊರಟಿದ್ದ ಯುವಕನ ಮೇಲೆ ಮರಬಿದ್ದ ಪರಿಣಾಮ ಆತ ಮೃತಪಟ್ಟ ಘಟನೆ ಮಂಗಳವಾರ ಬೆಳಗಾವಿ ನಗರದ ಸಂಗೊಳ್ಳಿ ರಾಯಣ್ಣ ವೃತ್ತದ ಆರ್ ಟಿಒ ಕಚೇರಿ ಬಳಿ ನಡೆದಿದೆ.
ಇಬ್ಬರು ಯುವಕರು ಸಂಗೊಳ್ಳಿ ರಾಯಣ್ಣ ವೃತ್ತದಿಂದ ಚನ್ನಮ್ಮ ವೃತ್ತದ ಕಡೆ ಬೈಕಿನಲ್ಲಿ ಹೊರಟಿದ್ದರು. ಈ ಸಂದರ್ಭದಲ್ಲಿ ಮರ ಬೈಕ್ ಮೇಲೆ ಬಿದ್ದ ಪರಿಣಾಮ ಬೆಳಗಾವಿ ತಾಲೂಕು ಸಿದ್ದನಹಳ್ಳಿ ಗ್ರಾಮದ ಗ್ರಾಮದ 22 ವರ್ಷದ ರಾಕೇಶ ಸುಲಧಾಳ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಬ್ಬ ಯುವಕ ಆಂಜನೇಯ ನಗರದ ನೇಮಿರಾಜ ಭೂಪಾಲ ಮರೆಪ್ಪನವರ ಎಂಬವರು ಗಂಭೀರ ಗಾಯಗೊಂಡಿದ್ದಾನೆ.
2 ದ್ವಿಚಕ್ರವಾಹನಗಳು ಜಖಂಗೊಂಡಿವೆ. ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ತಲೆಯ ಮೇಲೆ ಮರ ಬಿದ್ದಿದ್ದರಿಂದ ರಾಕೇಶ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ..

3 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ವಾಯುಭಾರ ಕುಸಿತ : ಕರ್ನಾಟಕದಲ್ಲಿ ಮೇ 24ರ ವರೆಗೆ ಭಾರಿ ಮಳೆ ಮುನ್ನೆಚ್ಚರಿಕೆ ; 15 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ನಿಮ್ಮ ಕಾಮೆಂಟ್ ಬರೆಯಿರಿ

advertisement