ಸುಕೇಶ ಚಂದ್ರಶೇಖರ 200 ಕೋಟಿ ಹಗರಣ : 8 ಗಂಟೆಗಳ ಕಾಲ ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡೀಸ್ ವಿಚಾರಣೆ ನಡೆಸಿದ ಪೊಲೀಸರು

ನವದೆಹಲಿ: ಸುಕೇಶ್ ಚಂದ್ರಶೇಖರ್‌ಗೆ ಸಂಬಂಧಿಸಿದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್‌ ಆರ್ಥಿಕ ಅಪರಾಧಗಳ ವಿಭಾಗದ ಮುಂದೆ ವಿಚಾರಣೆಗೆ ಬುಧವಾರ ಹಾಜರಾಗಿದ್ದ ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ಪಿಂಕಿ ಇರಾನಿ ನೀಡಿದ ಉತ್ತರದಲ್ಲಿ ದೆಹಲಿ ಪೊಲೀಸರಿಗೆ ಅಸಮಂಜಸತೆ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ. ಹಿರಿಯ ಅಧಿಕಾರಿಗಳು ಜಾಕ್ವೆಲಿನ್ ಅವರ ಹೇಳಿಕೆಗಳನ್ನು ತಮ್ಮಲ್ಲಿ ಚರ್ಚಿಸಿದ ನಂತರ ನಟಿಯನ್ನು ಮತ್ತೆ ಕರೆಸಬಹುದಾಗಿದೆ ಎಂದು ಮೂಲಗಳು ಹೇಳಿವೆ.
ನಟಿ ಜಾಕ್ವೆಲಿನ್ ಫರ್ನಾಂಡಿಸ್ ಮೂರನೇ ಬಾರಿಗೆ ಸಮನ್ಸ್ ನೀಡಿದ ನಂತರ ವಿಚಾರಣೆಗೆ ಬುಧವಾರ ಹಾಜರಾದರು. ಸುಕೇಶ್ ಚಂದ್ರಶೇಖರ್‌ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಸುಮಾರು ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು. ಅವರೊಂದಿಗೆ ಪಿಂಕಿ ಇರಾನಿ ಕೂಡ ಇದ್ದರು, ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ಸುಕೇಶ್ ಚಂದ್ರಶೇಖರ್‌ ಅವರಿಗೆ ಪರಿಚಯಿಸುವ ಕಾರ್ಯವನ್ನು ಪಿಂಕಿ ಇರಾನಿಗೆ ವಹಿಸಲಾಗಿತ್ತು ಮತ್ತು ಈ ಕೆಲಸಕ್ಕಾಗಿ ಕೋಟ್ಯಂತರ ರೂಪಾಯಿಗಳನ್ನು ಪಾವತಿಸಲಾಗಿದೆ ಎಂದು ಆರೋಪಿಸಲಾಗಿದೆ.

ಮೊದಲ ಸುತ್ತಿನ ವಿಚಾರಣೆಯ ಸಮಯದಲ್ಲಿ, ದೆಹಲಿ ಪೊಲೀಸರು ಅವರ ಉತ್ತರದಲ್ಲಿ ಅಸಂಗತತೆಯನ್ನು ಕಂಡುಕೊಂಡರು ಮತ್ತು ಹೀಗಾಗಿ ಮತ್ತೆ ಇಬ್ಬರನ್ನೂ ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಆರಂಭದಲ್ಲಿ, ಪಿಂಕಿ ಇರಾನಿ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಅವರ ಹೇಳಿಕೆಗಳನ್ನು ಪ್ರತ್ಯೇಕವಾಗಿ ದಾಖಲಿಸಲಾಯಿತು, ನಂತರ ಅವರನ್ನು ಪರಸ್ಪರ ಎದುರು ಕೂಡ್ರಿಸಿ ಒಟ್ಟಿಗೆ ಪ್ರಶ್ನಿಸಲಾಯಿತು.
ಈ ತಿಂಗಳ ಆರಂಭದಲ್ಲಿ, ಈ ಪ್ರಕರಣದಲ್ಲಿ ಮತ್ತೊಬ್ಬ ಬಾಲಿವುಡ್ ನಟಿ ನೋರಾ ಫತೇಹಿ ಅವರನ್ನು ಏಜೆನ್ಸಿಯು ಆರರಿಂದ ಏಳು ಗಂಟೆಗಳ ಕಾಲ ವಿಚಾರಣೆ ನಡೆಸಿತು ಮತ್ತು ಅವರ ಹೇಳಿಕೆಯನ್ನು ದಾಖಲಿಸಿಕೊಂಡಿತು.

ಪ್ರಮುಖ ಸುದ್ದಿ :-   ಪುತ್ತೂರು | ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ ಪ್ರಕರಣ ; ಬಿಜೆಪಿ ಮುಖಂಡನ ಪುತ್ರ ಅರೆಸ್ಟ್‌

ಜಾರಿ ನಿರ್ದೇಶನಾಲಯದ ಪ್ರಕಾರ, ನೋರಾ ಫತೇಹಿ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಅವರು ಸುಕೇಶ ಚಂದ್ರಶೇಖರ ಅವರ ಅಪರಾಧದ ಆದಾಯದಿಂದ ಐಷಾರಾಮಿ ಕಾರುಗಳು ಮತ್ತು ಇತರ ದುಬಾರಿ ಉಡುಗೊರೆಗಳನ್ನು ಪಡೆದಿದ್ದಾರೆ.
ಪ್ರಸ್ತುತ ಜೈಲಿನಲ್ಲಿರುವ ಸುಕೇಶ ಚಂದ್ರಶೇಖರ್ ಅವರು ಮಾಜಿ ಫೋರ್ಟಿಸ್ ಹೆಲ್ತ್‌ಕೇರ್ ಪ್ರವರ್ತಕ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಅವರಂತಹ ವಿವಿಧ ಉನ್ನತ ವ್ಯಕ್ತಿಗಳನ್ನು ವಂಚಿಸಿದ ಆರೋಪ ಹೊತ್ತಿದ್ದಾರೆ.
ಆಗಸ್ಟ್ 17 ರಂದು, ಸುಕೇಶ ಚಂದ್ರಶೇಖರ್ ಅವರಿಗೆ ಸಂಬಂಧಿಸಿದ ಬಹುಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ಆರೋಪಿ ಎಂದು ಹೆಸರಿಸಿ ಇ.ಡಿ. ಚಾರ್ಜ್ ಶೀಟ್ ಸಲ್ಲಿಸಿತ್ತು.
ನಟ ಸುಕೇಶ್ ಚಂದ್ರಶೇಖರ್ ಅವರು 7 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಭರಣಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ. ಅವರು ನಟಿ ಮತ್ತು ಅವರ ಕುಟುಂಬ ಸದಸ್ಯರಿಗೆ ಹಲವಾರು ದುಬಾರಿ ಕಾರುಗಳು, ದುಬಾರಿ ಬ್ಯಾಗ್‌ಗಳು, ಬಟ್ಟೆಗಳು, ಶೂಗಳು ಮತ್ತು ದುಬಾರಿ ವಾಚ್‌ಗಳನ್ನು ಉಡುಗೊರೆಯಾಗಿ ನೀಡಿದ್ದರು.

ಈ ಹಿಂದೆ ಇ.ಡಿ.ಗೆ ನೀಡಿದ ಹೇಳಿಕೆಯಲ್ಲಿ, ಜಾಕ್ವೆಲಿನ್, ಸುಕೇಶ್ ತನ್ನನ್ನು ಸನ್ ಟಿವಿಯ ಮಾಲೀಕ ಮತ್ತು ಚೆನ್ನೈನ ಪ್ರಭಾವಿ ರಾಜಕೀಯ ಕುಟುಂಬದ ಸದಸ್ಯ ಎಂದು ಪರಿಚಯಿಸಿಕೊಂಡಿದ್ದ ಎಂದು ಹೇಳಿದ್ದರು. ಸುಕೇಶ್ ಚಂದ್ರಶೇಖರ್ ಅವರಿಂದ ಪ್ರತಿ ವಾರ ಸೀಮಿತ ಆವೃತ್ತಿಯ ಸುಗಂಧ ದ್ರವ್ಯಗಳು, ಪ್ರತಿ ದಿನ ಹೂವುಗಳು, ಡಿಸೈನರ್ ಬ್ಯಾಗ್‌ಗಳು, ಡೈಮಂಡ್ ಕಿವಿಯೋಲೆಗಳು ಮತ್ತು ಮಿನಿ ಕೂಪರ್ ಅನ್ನು ಸ್ವೀಕರಿಸಿದ್ದೇನೆ ಎಂದು ಜಾಕ್ವೆಲಿನ್ ದಾಖಲೆಯಲ್ಲಿ ಹೇಳಿದ್ದರು.
ತನ್ನ ಚಿಕ್ಕಪ್ಪ ಹೃದಯ ಸ್ತಂಭನದಿಂದ ನಿಧನರಾದರು ಎಂದು ತಿಳಿಸಿದ ನಂತರ ಮತ್ತು ಚೆನ್ನೈನಲ್ಲಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸಿದ ನಂತರ ಜೂನ್‌ನಲ್ಲಿ ತಾನು ಮೊದಲ ಬಾರಿಗೆ ಸುಕೇಶ್ ಅವರನ್ನು ಭೇಟಿಯಾಗಿದ್ದೇನೆ ಎಂದು ಜಾಕ್ವೆಲಿನ್ ಹೇಳಿದ್ದರು.

ಪ್ರಮುಖ ಸುದ್ದಿ :-   ಪರೀಕ್ಷೆಯಲ್ಲಿ ಫೇಲ್‌ ಆದ್ರೂ 2 ವರ್ಷ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆದ ಮಹಿಳೆ..! ಸಬ್-ಇನ್ಸ್‌ಪೆಕ್ಟರ್ ಆಗಿ‌ ಪೋಸ್‌...!!

2 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement