ಗುಜರಾತ್ ಕರಾವಳಿ ಬಳಿ ಪಾಕ್ ಬೋಟ್‌ನಲ್ಲಿದ್ದ 200 ಕೋಟಿ ರೂ.ಮೌಲ್ಯದ ಡ್ರಗ್ಸ್ ವಶ, ಪಂಜಾಬ್ ಜೈಲಿನಿಂದ ಇದಕ್ಕೆ ಆರ್ಡರ್‌: ಮೂಲಗಳು

ಗಾಂಧಿನಗರ: ಜಂಟಿ ಕಾರ್ಯಾಚರಣೆಯಲ್ಲಿ, ಭಾರತೀಯ ಕರಾವಳಿ ಕಾವಲು ಪಡೆ ಮತ್ತು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬುಧವಾರ ಪಾಕಿಸ್ತಾನದ ಬೋಟ್‌ ಅನ್ನು ಆರು ಮೈಲುಗಳಷ್ಟು ದೂರದ ಭಾರತೀಯ ಸಮುದ್ರದೊಳಗೆ ವಶಕ್ಕೆ ಪಡೆದಿದೆ. ದೋಣಿಯಲ್ಲಿ 40 ಕೆಜಿಯಷ್ಟು ಡ್ರಗ್ಸ್ ತುಂಬಿದ್ದು, ಇದರ ಅಂತಾಋಾಷ್ಟ್ರೀಯ ಮಾರುಕಟ್ಟೆಯ ಮೌಲ್ಯ ಸುಮಾರು 200 ಕೋಟಿ ರೂ.ಗಳಾಗಿದೆ.
ಪಂಜಾಬ್‌ನ ಜೈಲಿನಿಂದ ಡ್ರಗ್ಸ್ ಆರ್ಡರ್ ಮಾಡಲಾಗಿದೆ ಎಂದು ಗುಜರಾತ್ ಎಟಿಎಸ್‌ನ ಉನ್ನತ ಮೂಲಗಳು ತಿಳಿಸಿವೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.ಕಾರ್ಯಾಚರಣೆಯಲ್ಲಿ ತೊಡಗಿದ್ದ ಕೋಸ್ಟ್ ಗಾರ್ಡ್ ನ ಎರಡು ಫಾಸ್ಟ್ ಅಟ್ಯಾಕ್ ಬೋಟ್ ಗಳು ಗುಜರಾತ್‌ನ ಜಖೌ ಕರಾವಳಿಯಿಂದ 33 ನಾಟಿಕಲ್ ಮೈಲು ದೂರದಲ್ಲಿ ಪಾಕಿಸ್ತಾನದ ಅಲ್ ತಯ್ಯಾಸಾ ಬೋಟನ್ನು ವಶಕ್ಕೆ ಪಡೆದಿದೆ. ಹೆಚ್ಚಿನ ತನಿಖೆಗಾಗಿ ಬೋಟ್‌ನಲ್ಲಿದ್ದ ಆರು ಸಿಬ್ಬಂದಿಯನ್ನು ಜಖೌಗೆ ಕರೆತರಲಾಗುತ್ತಿದೆ.

ಪಂಜಾಬ್ ಜೈಲಿನೊಳಗಿದ್ದ ವಿದೇಶಿ ಪ್ರಜೆಯೊಬ್ಬರು ಪಾಕಿಸ್ತಾನದಿಂದ ಮಾದಕ ದ್ರವ್ಯ ಕಳುಹಿಸಲು ಆರ್ಡರ್‌ ಮಾಡಿದ್ದ ಎಂದು ಗುಜರಾತ್ ಎಟಿಎಸ್ ಮೂಲಗಳು ತಿಳಿಸಿವೆ. ಪಾಕಿಸ್ತಾನದಿಂದ ಬಂದ ಈ ಡ್ರಗ್ಸ್‌ ಗುಜರಾತ್‌ಗೆ ಪ್ರಯಾಣಿಸುತ್ತಿದ್ದು ನಂತರ ಪಂಜಾಬ್‌ಗೆ ಕೊಂಡೊಯ್ಯಲಾಗುತ್ತಿತ್ತು.
ವಿದೇಶಿ ಪ್ರಜೆಯ ಹೆಸರು ಮತ್ತು ಇತರ ಎಲ್ಲ ವಿವರಗಳನ್ನು ಪಂಜಾಬ್ ಪೊಲೀಸರಿಗೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ ಎಂದು ಇಂಡಿಯಾ ಟುಡೇಗೆ ವರದಿ ತಿಳಿಸಿದೆ. ಕೋಸ್ಟ್ ಗಾರ್ಡ್ ಮತ್ತು ರಾಜ್ಯ ಎಟಿಎಸ್ ಈ ಹಿಂದೆ ಗುಜರಾತ್ ಕರಾವಳಿಯಲ್ಲಿ ಮಾದಕವಸ್ತು ಕಳ್ಳಸಾಗಣೆಯ ಇಂತಹ ಪ್ರಯತ್ನಗಳನ್ನು ವಿಫಲಗೊಳಿಸಿದೆ.
ಅಕ್ಟೋಬರ್ 2021 ರಲ್ಲಿ, ಗುಜರಾತ್‌ನ ಮುಂದ್ರಾ ಬಂದರಿನಿಂದ 2,988 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಯಿತು, ಇದು 21,000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದು ಗುಜರಾತ್ ಕರಾವಳಿಯ ಬಳಿ ಅತಿ ಹೆಚ್ಚು ಡ್ರಗ್ಸ್ ಸಾಗಾಟವಾಗಿತ್ತು.
ಕಳೆದ ತಿಂಗಳು, ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಗುಜರಾತ್‌ನ ಕಚ್ ಜಿಲ್ಲೆಯ ಭಾರತ-ಪಾಕ್ ಗಡಿಯ ಸಮೀಪವಿರುವ ತೊರೆಯಿಂದ ಎರಡು ಪಾಕಿಸ್ತಾನಿ ಮೀನುಗಾರಿಕೆ ದೋಣಿಗಳನ್ನು ವಶಪಡಿಸಿಕೊಂಡಿತ್ತು.

ಪ್ರಮುಖ ಸುದ್ದಿ :-   ಅಮೆರಿಕ ಮಾದರಿಯಲ್ಲಿ ಭಾರತದಲ್ಲೂ 50% ಉತ್ತರಾಧಿಕಾರ ತೆರಿಗೆ : ಸ್ಯಾಮ್ ಪಿತ್ರೊಡಾ ಹೇಳಿಕೆಯಿಂದ ವಿವಾದ ; ಬಿಜೆಪಿ ವಾಗ್ದಾಳಿ, ಇದು ನಮ್ಮ ಕಲ್ಪನೆಯಲ್ಲ ಎಂದ ಕಾಂಗ್ರೆಸ್

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement