70 ವರ್ಷಗಳ ನಂತರ ಭಾರತದ ನೆಲಕ್ಕೆ ಕಾಲಿಟ್ಟ ಏಶಿಯಾಟಿಕ್‌ ಚಿರತೆಗಳನ್ನು ಕುನೊ ರಾಷ್ಟ್ರೀಯ ಉದ್ಯಾನವನದ ಕಾಡಿಗೆ ಬಿಟ್ಟ ಪ್ರಧಾನಿ ಮೋದಿ | ವೀಕ್ಷಿಸಿ

ಭಾರತದಲ್ಲಿ ಅಳಿದು ಹೋಗಿ 70 ವರ್ಷಗಳ ನಂತರ, ಚಿರತೆಗಳು ಭಾರತದ ನೆಲಕ್ಕೆ ಮರಳಿವೆ. ಮಧ್ಯಪ್ರದೇಶದ ಕುನೊ-ಪಾಲ್ಪುರ್ ರಾಷ್ಟ್ರೀಯ ಉದ್ಯಾನವನದಲ್ಲಿ (ಕೆಪಿಎನ್‌ಪಿ) ಎಂಟು ಏಷಿಯಾಟಿಕ್‌ ಚಿರತೆಗಳನ್ನು ಶನಿವಾರ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು “ಐತಿಹಾಸಿಕ ದಿನ” ಎಂದು ಬಣ್ಣಿಸಿದ್ದಾರೆ.
ಭಾರತವು ಹಿಂದೆ ಏಷ್ಯಾಟಿಕ್ ಚಿರತೆಗಳಿಗೆ ನೆಲೆಯಾಗಿತ್ತು, ಆದರೆ 1952 ರ ವೇಳೆಗೆ ಈ ಪ್ರಭೇದವು ದೇಶೀಯವಾಗಿ ಅಳಿವಿನಂಚಿನಲ್ಲಿದೆ ಎಂದು ಘೋಷಿಸಲಾಯಿತು. ನಮೀಬಿಯಾದಿಂದ ಎಂಟು ದೊಡ್ಡ ಬೆಕ್ಕುಗಳ ಆಗಮನವು ಇತಿಹಾಸದಲ್ಲಿ ಅತಿದೊಡ್ಡ ವನ್ಯಜೀವಿ ಸ್ಥಳಾಂತರ ಯೋಜನೆಯಾಗಿದೆ. ಸ್ಥಳಾಂತರ ಯೋಜನೆಯಲ್ಲಿ ಸಹಾಯ ಮಾಡುವ ಪಶುವೈದ್ಯ ಸಿಬ್ಬಂದಿಗೆ ಪ್ರವೇಶವನ್ನು ಅನುಮತಿಸುವ ವಿಶೇಷ ಪಂಜರಗಳನ್ನು ಅಳವಡಿಸಿದ ಹುಲಿ ಮುಖದ ವಿಮಾನವು ಶನಿವಾರ ಬೆಳಿಗ್ಗೆ ಗ್ವಾಲಿಯರ್‌ನಲ್ಲಿ ಇಳಿಯಿತು ಮತ್ತು ಚಿರತೆಗಳನ್ನು ಹೆಲಿಕಾಪ್ಟರ್‌ನಲ್ಲಿ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಈ ಏಷಿಯಾಟಿಕ್‌ ಚಿರತೆಗಳನ್ನು ಕರೆದೊಯ್ಯಲಾಯಿತು.

ಪ್ರಧಾನಿ ಮೋದಿ ಅವರು ಫೆಡೋರಾ ಟೋಪಿಯನ್ನು ಧರಿಸಿ, ಇಂದು,ಶನಿವಾರ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಗಳನ್ನು ಬಿಡುಗಡೆ ಮಾಡಿದರು. ವೃತ್ತಿಪರ ಕ್ಯಾಮರಾದಲ್ಲಿ ದೊಡ್ಡ ಬೆಕ್ಕುಗಳ ಛಾಯಾಚಿತ್ರವನ್ನೂ ತೆಗೆದರು. ವೀಡಿಯೊದಲ್ಲಿ, ಪ್ರಧಾನ ಮಂತ್ರಿ ಅವರು ಆವರಣದ ನಂಬರ್ ಒಂದರಿಂದ ಎರಡು ಚಿರತೆಗಳನ್ನು ಬಿಡುಗಡೆ ಮಾಡಿದರು ಮತ್ತು ಅದರ ನಂತರ, ಎರಡನೇ ಆವರಣದಿಂದ ಇನ್ನೊಂದನ್ನು ಬಿಟ್ಟಿದ್ದಾರೆ.
ಚಿರತೆಗಳೊಂದಿಗೆ ಹುಲಿ ಮುಖದ ವಿಮಾನವು ಗ್ವಾಲಿಯರ್‌ನ ಮಹಾರಾಜಪುರ ವಾಯುನೆಲೆಗೆ ಇಂದು ಶನಿವಾರ ಬೆಳಿಗ್ಗೆ ಆಗಮಿಸಿತು. ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಏರ್ ಫೋರ್ಸ್ ಹೆಲಿಕಾಪ್ಟರ್‌ಗೆ ಚಿರತೆಗಳನ್ನು ಸಾಗಿಸುತ್ತಿದ್ದಂತೆ ವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡಿದರು, ಅದು ಅವುಗಳನ್ನು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಒಯ್ದಿತು.
ಆರೋಗ್ಯ, ಕಾಡು ಸ್ವಭಾವ, ಬೇಟೆಯ ಕೌಶಲ್ಯ ಮತ್ತು ತಳಿಶಾಸ್ತ್ರವನ್ನು ಕೊಡುಗೆ ನೀಡುವ ಸಾಮರ್ಥ್ಯದ ಮೌಲ್ಯಮಾಪನದ ಆಧಾರದ ಮೇಲೆ ಆಯ್ಕೆ ಮಾಡಲಾದ ಈ ಚಿರತೆಗಳನ್ನು ಮುಂದಿನ 24 ಗಂಟೆಗಳ ಕಾಲ ಮೇಲ್ವಿಚಾರಣೆ ಮಾಡಲಾಗುತ್ತದೆ. ಉಪಗ್ರಹದ ಮೂಲಕ ತಮ್ಮ ಸ್ಥಳಗಳನ್ನು ಮೇಲ್ವಿಚಾರಣೆ ಮಾಡಲು ಎಲ್ಲಾ ಚಿರತೆಗಳಿಗೆ ರೇಡಿಯೋ ಕಾಲರ್‌ಗಳನ್ನು ಅಳವಡಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ದಶಕಗಳ ಹಿಂದೆ, ಭಾರತದಲ್ಲಿ ಈ ಜೀವವೈವಿಧ್ಯದ ಹಳೆಯ ಕೊಂಡಿ ಮುರಿದುಹೋಗಿತ್ತು ಮತ್ತು ಅಳಿದುಹೋಗಿತ್ತು, ಇಂದು ಅದನ್ನು ಮರಳಿ ತರುವ ಪ್ರಯತ್ನ ಇದಾಗಿದೆ. ಈ ಚಿರತೆಗಳ ಜೊತೆಗೆ, ಪ್ರಕೃತಿಯನ್ನು ಪ್ರೀತಿಸುವ ಪ್ರಜ್ಞೆ ಎಚ್ಚೆತ್ತುಕೊಂಡಿದೆ. ಇಂದು, ಚಿರತೆಗಳು ದಶಕಗಳ ನಂತರ ನಮ್ಮ ಭೂಮಿಗೆ ಮರಳಿವೆ. ಈ ಐತಿಹಾಸಿಕ ದಿನದಂದು, ನಾನು ಎಲ್ಲಾ ಭಾರತೀಯರನ್ನು ಅಭಿನಂದಿಸುತ್ತೇನೆ ಮತ್ತು ನಮೀಬಿಯಾ ಸರ್ಕಾರಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ಅವರ ಸಹಾಯವಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಉತ್ತಮ ಪ್ರತಿಕ್ರಿಯೆ, ಜನರು ದಾಖಲೆ ಸಂಖ್ಯೆಯಲ್ಲಿ ಎನ್‌ಡಿಎಗೆ ಮತ ಹಾಕಿದ್ದಾರೆ : ಲೋಕಸಭೆ ಚುನಾವಣೆ 1ನೇ ಹಂತದ ಮತದಾನದ ಬಗ್ಗೆ ಪ್ರಧಾನಿ ಮೋದಿ

ಪ್ರವಾಸಿಗರು ಮತ್ತು ಉತ್ಸಾಹಿಗಳು ಕಾಡಿನಲ್ಲಿ ಚಿರತೆಗಳನ್ನು ನೋಡುವ ಮೊದಲು ಕೆಲವು ತಿಂಗಳು ಕಾಯಬೇಕಾಗುತ್ತದೆ; ಪ್ರಾಣಿಗಳು ತಮ್ಮ ಹೊಸ ವಾಸ್ಥಾನಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ.
ನಮೀಬಿಯಾದಿಂದ ಬಂದ ಎಂಟು ಚಿರತೆಗಳಲ್ಲಿ ಆರು ಹೆಣ್ಣು ಚಿರತೆ ಮತ್ತು ಎರಡು ಗಂಡು ಚಿರತೆ ತಂಡವಾಗಿ ಬೇಟೆಯಾಡುತ್ತಿದ್ದವು.
1947 ರಲ್ಲಿ ಮಹಾರಾಜ ರಾಮಾನುಜ್ ಪ್ರತಾಪ್ ಸಿಂಗ್ ದೇವು ಈ ಜಾತಿಯ ಕೊನೆಯ ಸಂತತಿಯನ್ನು ಹೊಡೆದ ನಂತರ 1952 ರಲ್ಲಿ ಏಷಿಯಾಟಿಕ್ ಚಿರತೆ ಭಾರತದಲ್ಲಿ ನಿರ್ನಾಮವಾಗಿದೆ ಎಂದು ಘೋಷಿಸಲಾಯಿತು. ಖಂಡಾಂತರ ಸ್ಥಳಾಂತರ ಯೋಜನೆಯ ಭಾಗವಾಗಿ ಈ ದೊಡ್ಡ ಬೆಕ್ಕುಗಳನ್ನು ನಮೀಬಿಯಾದಿಂದ ಭಾರತಕ್ಕೆ ತರಲಾಯಿತು.

ಚಿರತೆಗಳಿಗೆ ಉತ್ತಮ ಬೇಟೆಯ ನೆಲೆಗಾಗಿ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ಪರಿಚಯಿಸಲು ಕುನೊ ರಾಷ್ಟ್ರೀಯ ಉದ್ಯಾನವನ್ನು ಅತ್ಯುತ್ತಮ ಸ್ಥಳವಾಗಿ ಆಯ್ಕೆ ಮಾಡಲಾಗಿದೆ. ಉದ್ಯಾನವನವು ಚಿಂಕಾರಾ, ಮಚ್ಚೆಯುಳ್ಳ ಜಿಂಕೆ ಮತ್ತು ಕೃಷ್ಣಮೃಗಗಳ ಉತ್ತಮ ಸಂಖ್ಯೆ ಹೊಂದಿದೆ, ಚಿರತೆಗಳು ಬೇಟೆಯಾಡಬಹುದು ಮತ್ತು ಕಾಡಿನಲ್ಲಿ ಬೆಳೆಯಬಹುದು. ಇಲ್ಲಿ, ದೊಡ್ಡ ಬೆಕ್ಕುಗಳಿಗೆ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ, ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಮತ್ತು ಕಾಡಿನಲ್ಲಿರುವ ಇತರ ದೊಡ್ಡ ಪರಭಕ್ಷಕಗಳನ್ನು ದೂರ ಸ್ಥಳಾಂತರಿಸಲಾಗಿದೆ.

ಪ್ರಮುಖ ಸುದ್ದಿ :-   ಕಾರು ಅಡ್ಡ ಹಾಕಿ ನಟಿ ಹರ್ಷಿಕಾ ಪೂಣಚ್ಚ ದಂಪತಿಗೆ ಕಿರುಕುಳ : "ನಾವು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿದ್ದೇವೆಯೇ ಎಂದು ನಟಿ ಪ್ರಶ್ನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement