ರಾಜ್ಯ ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ ಸಾಲುಮರದ ವೀರಾಚಾರಿ ಆತ್ಮಹತ್ಯೆಗೆ ಶರಣು

ದಾವಣಗೆರೆ: ಸಾಲುಮರದ ವೀರಾಚಾರಿ ಎಂದೇ ಪ್ರಸಿದ್ಧಿ ಪಡೆದ ಪರಿಸರ ಪ್ರೇಮಿ ಮಿಟ್ಲಕಟ್ಟೆ ವೀರಾಚಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಜ್ಯ ಪ್ರಶಸ್ತಿ ಪುರಸ್ಕೃತ, ಸಾಲುಮರದ ವೀರಾಚಾರಿ ಸೋಮವಾರ ಮಧ್ಯರಾತ್ರಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 3,000ಕ್ಕೂ ಹೆಚ್ಚು ಮರಗಳನ್ನು ಬೆಳೆಸಿ ದಾವಣಗೆರೆ ಜಿಲ್ಲೆಗೆ ವೀರಾಚಾರಿ ಚಿರಪರಿಚಿತರಾಗಿದ್ದರು.
ಮಿಟ್ಲಗಟ್ಟೆ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಬಡವರಿಗೆ ಸೂಕ್ತವಾಗಿ ಅಕ್ಕಿ ವಿತರಣೆಯಾಗುತ್ತಿಲ್ಲ ಎಂದು ನ್ಯಾಯಬೆಲೆ ಅಕ್ರಮದ ವಿರುದ್ಧ ನಿರಂತರವಾಗಿ ಕಳೆದ ಒಂದು ವರ್ಷದಿಂದ ವೀರಾಚಾರಿ ಹೋರಾಟ ನಡೆಸುತ್ತಿದ್ದರು.

ನ್ಯಾಯಬೆಲೆ ಅಂಗಡಿಯನ್ನು ಬೇರೆಯವರಿಗೆ ವಹಿಸಬೇಕು ಅವರ ಒತ್ತಾಯವಾಗಿತ್ತು. ಆದರೆ, ಅದು ಈಡೇರಲಿಲ್ಲ ಎಂಬ ಕಾರಣಕ್ಕೆ ಮನನೊಂದು ಸೋಮವಾರ ತಡರಾತ್ರಿ ಗ್ರಾಮದ ಮಧ್ಯದಲ್ಲಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಿಟ್ಲಕಟ್ಟೆ ಗ್ರಾಮದ ಯಾರು ಕೂಡ ಬರದಂತೆ ರಸ್ತೆಗಳನ್ನು ಗ್ರಾಮಸ್ಥರು ಬಂದ್ ಮಾಡಿದ್ದಾರೆ. ಜಿಲ್ಲಾಧಿಕಾರಿ ಆಹಾರ ಇಲಾಖೆ ಅಧಿಕಾರಿಗಳು ಬರುವರೆಗೂ ಶವವನ್ನು ಕುಣಿಕೆಯಿಂದ ಕೆಳಗಿಸದಂತೆ ಪಟ್ಟುಹಿಡಿದಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement