ಸ್ಟಾಫ್​ ಸೆಲೆಕ್ಷನ್​ ಕಮಿಷನ್​ನಿಂದ 20,000 ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

ಸ್ಟಾಫ್​ ಸೆಲೆಕ್ಷನ್​ ಕಮಿಷನ್​ನಿಂದ (Staff Selection Commission) 20,000 ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಗ್ರೂಪ್​ ಬಿ ಮತ್ತು ಸಿ ಹುದ್ದೆಗಳ ಭರ್ತಿಗೆ ಎಸ್​ಎಸ್​ಸಿ ಸಿಜಿಎಲ್ (SSC CGL)​ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಕೇಂದ್ರ ಸರ್ಕಾರದ ವಿವಿಧ ಇಲಾಖೆ, ಸಚಿವಾಲಯ ಸೇರಿದಂತೆ ಆಡಳಿತದ ವಿವಿಧ ಹುದ್ದೆಗಳ ಭರ್ತಿಗೆ ಈ ಪ್ರಕ್ರಿಯೆ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್​ 8 ಆಗಿದೆ.
ಸಂಸ್ಥೆಯ ಹೆಸರು – ಸ್ಟಾಫ್ ಸೆಲೆಕ್ಷನ್ ಕಮಿಷನ್ ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ ಎಕ್ಸಾಮಿನೇಷನ್
ಹುದ್ದೆಗಳು-ಗ್ರೂಪ್​ ಬಿ ಮತ್ತು ಸಿ ಗ್ರೇಡ್‌
ಹುದ್ದೆಗಳ ಸಂಖ್ಯೆ – 20,000
ಉದ್ಯೋಗ ವ್ಯಾಪ್ತಿ-ಅಖಿಲ ಭಾರತ ಮಟ್ಟ
ಮಾಸಿಕ ವೇತನ- 44900ರಿಂದ 142400 ರೂ.ಗಳು

ಶೈಕ್ಷಣಿಕ ಅರ್ಹತೆ: ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಯಾವುದೇ ವಿಷಯದಲ್ಲಿ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ: ಅಧಿಕೃತ ಅಧಿಸೂಚನೆ ಅನುಸಾರ ಅಭ್ಯರ್ಥಿಯು ಕನಿಷ್ಟ 18ರಿಂದ ಗರಿಷ್ಟ 32 ವರ್ಷ ವಯೋಮಿತಿಯನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆ: ಪರಿಶಿಷ್ಟ ಜಾತಿ ಹಾಗೂ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳು
ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷಗಳು.

ಪ್ರಮುಖ ಸುದ್ದಿ :-   ವೀಡಿಯೊ..| ರಾಷ್ಟ್ರದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಆದ್ಯತೆ ; ಮನಮೋಹನ ಸಿಂಗ್ ಹಳೆಯ ವೀಡಿಯೊ ಮೂಲಕ ಕಾಂಗ್ರೆಸ್ಸಿಗೆ ತಿರುಗೇಟು ನೀಡಿದ ಬಿಜೆಪಿ

ಅರ್ಜಿ ಶುಲ್ಕ:
ಮಹಿಳೆಯರು, ಪ.ಜಾ, ಪ.ಪಂ ಮತ್ತು ವಿಕಲಚೇತನ ಅಭ್ಯರ್ಥಿಗಳು: ಶುಲ್ಕ ವಿನಾಯಿತಿ
ಎಲ್ಲಾ ಇತರ ಅಭ್ಯರ್ಥಿಗಳು: 100 ರೂ.
ಪಾವತಿ ವಿಧಾನ: ಆನ್‌ಲೈನ್ ಅಥವಾ ಚಲನ್

ಆಯ್ಕೆ ಪ್ರಕ್ರಿಯೆ:
ಶ್ರೇಣಿ-I, II ಮತ್ತು ಶ್ರೇಣಿ-III ಪರೀಕ್ಷೆಗಳು, ಕೌಶಲ್ಯ ಪರೀಕ್ಷೆ

ಈ ದಿನಾಂಕಗಳನ್ನು ಗಮನಿಸಿ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 17 ಸೆಪ್ಟೆಂಬರ್​​ 2022
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಆಫ್‌ಲೈನ್ ಚಲನ್‌ ರಚನೆ: 08 ಅಕ್ಟೋಬರ್​ 2022
ಆನ್‌ಲೈನ್ ಶುಲ್ಕ ಪಾವತಿಗೆ ಕೊನೆಯ ದಿನಾಂಕ: 09 ಅಕ್ಟೋಬರ್ 2022
ಚಲನ್ ಮೂಲಕ ಪಾವತಿಗೆ ಕೊನೆಯ ದಿನಾಂಕ: 10 ಅಕ್ಟೋಬರ್​​ 2022
ಪ್ರಮುಖ ಲಿಂಕ್‌ಗಳು
ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್‌ ಮಾಡಿ ನೋಡಬಹುದು-notice_CGLE_17092022
ಅಧಿಕೃತ ವೆಬ್‌ಸೈಟ್: ssc.nic.in

 

3 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement