ಭಯೋತ್ಪಾದಕ ಸಂಘಟನೆ ಐಸಿಸ್‌ ಜೊತೆ ನಂಟು; ಇಬ್ಬರ ಬಂಧನ

ಶಿವಮೊಗ್ಗ: ನಿಷೇಧಿತ ಭಯೋತ್ಪಾದಕ ಸಂಘಟನೆ ಐಸಿಸ್‌ ಜೊತೆ ನಂಟು ಹೊಂದಿದ ಆರೋಪದ ಮೇಲೆ ಶಿವಮೊಗ್ಗ ಪೊಲೀಸರ ವಿಶೇಷ ತನಿಖಾ ತಂಡವು ಇಬ್ಬರನ್ನು ಬಂಧಿಸಿದ್ದು, ಮೂರನೆಯವನಿಗಾಗಿ ಶೋಧ ಕಾರ್ಯಾಚರಣೆ ನಡೆಸಿದೆ.
ಬಂಧಿತರನ್ನು ಶಿವಮೊಗ್ಗದ ಸಿದ್ದೇಶ್ವರ ನಗರದ 21 ವರ್ಷದ ಸಯ್ಯದ್‌ ಯಾಸೀನ್‌ ಹಾಗೂ ಮಂಗಳೂರಿನ 22 ವರ್ಷದ ಮಾಜ್ ಮುನೀರ್‌ ಅಹಮ್ಮದ್‌ ಎಂದು ಗುರುತಿಸಲಾಗಿದೆ.

ತೀರ್ಥಹಳ್ಳಿಯ ಸೊಪ್ಪುಗುಡ್ಡೆ ನಿವಾಸಿ ಶಾರೀಕ್‌ ಎಂಬಾತ ಆತನ ಸಹಚರರಾದ ಮಾಜ್‌ ಮುನೀರ್‌ ಅಹಮ್ಮದ್ ಹಾಗೂ ಸಯ್ಯದ್‌ ಯಾಸೀನ್‌ ನಿಷೇಧಿತ ಭಯೋತ್ಪಾದಕ ಸಂಘಟನೆಯ ನಂಟನ್ನು ಹೊಂದಿರುವ ಕಾರಣಕ್ಕೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಾಜ್ ಮುನೀರ್‌ ಅಹಮ್ಮದ್‌, ಸಯ್ಯದ್‌ ಯಾಸೀನ್‌ ಎಂಬಿಬ್ಬರು ದಸ್ತಗಿರಿ ಮಾಡಿದ್ದು, ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸೆಪ್ಟೆಂಬರ್‌ 29ರ ವರೆಗೆ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ.

ಪ್ರಮುಖ ಸುದ್ದಿ :-   ಬೇಡ್ತಿ–ವರದಾ ನದಿ ಜೋಡಣೆ ಯೋಜನೆ ಜವಾಬ್ದಾರಿ ರಾಜ್ಯ ಸರ್ಕಾರದ್ದು ; ಡಿಪಿಆರ್‌ ರೂಪಿಸೋದು ಅಂದ್ರೆ ಯೋಜನೆ ಅಂತಿಮ ಎಂದಲ್ಲ : ಕೇಂದ್ರ ಸಚಿವ

1 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement