ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವೀಡಿಯೊ ಹಂಚಿಕೆ: 19 ರಾಜ್ಯಗಳಲ್ಲಿ ಸಿಬಿಐ ದಾಳಿ

ನವದೆಹಲಿ: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ (ಸಿಎಸ್‌ಎಎಂ) ಸಂಬಂಧಿಸಿದ ಆಡಿಯೊ, ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುತ್ತಿದ್ದ ಆರೋಪದಡಿ ದೇಶದ 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ 56 ಸ್ಥಳಗಳ ಸಿಬಿಐ ಅಧಿಕಾರಿಗಳು ಶನಿವಾರ ದಾಳಿ ನಡೆಸಿದ್ದಾರೆ.
ಆಪರೇಷನ್ ‘ಮೇಘ ಚಕ್ರ’ದ ಭಾಗವಾಗಿ ಈ ಶೋಧ ನಡೆಸಲಾಗುತ್ತಿದೆ. ಕ್ಲೌಡ್ ಸ್ಟೋರೇಜ್ ಬಳಸಿಕೊಂಡು ಇಂಟರ್ನೆಟ್‌ನಲ್ಲಿ ಸಿಎಸ್‌ಎಎಂ ದಂಧೆ ನಡೆಸುತ್ತಿದ್ದ ಪೆಡ್ಲರ್‌ಗಳ ವಿರುದ್ಧ ಕಳೆದ ವರ್ಷ ನಡೆದ ಆಪರೇಷನ್ ಕಾರ್ಬನ್ ದಾಳಿ ಸಮಯದಲ್ಲಿ ಪಡೆದ ಗುಪ್ತಚರ ಮಾಹಿತಿ ಮತ್ತು ಸಿಂಗಾಪುರದ ಇಂಟರ್‌ಪೋಲ್ ಮಾಹಿತಿ ಆಧರಿಸಿ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ. ಅಪ್ರಾಪ್ತರ ಲೈಂಗಿಕ ಚಟುವಟಿಕೆಗಳ ಆಡಿಯೊ-ದೃಶ್ಯಗಳನ್ನು ಪ್ರಸಾರ ಮಾಡಲು ಪೆಡ್ಲರ್‌ಗಳು ಬಳಸುವ ಕ್ಲೌಡ್ ಸ್ಟೋರೇಜ್ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ.

ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ, ದೆಹಲಿ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಛತ್ತೀಸ್‌ಗಢ, ಮಹಾರಾಷ್ಟ್ರ, ಗುಜರಾತ್, ಗೋವಾ, ಕರ್ನಾಟಕ, ತೆಲಂಗಾಣ ಮತ್ತು ತಮಿಳುನಾಡು ಸೇರಿದಂತೆ ಇತರ ರಾಜ್ಯಗಳಲ್ಲಿ ಶನಿವಾರ ದಾಳಿ ನಡೆಸಲಾಗಿದೆ.ಆರೋಪಿ ಭಾರತೀಯರನ್ನು ಹೊರತುಪಡಿಸಿ, ಇತರ ಶಂಕಿತರು ಪಾಕಿಸ್ತಾನ (36), ಕೆನಡಾ (35), ಅಮೆರಿಕ (35), ಬಾಂಗ್ಲಾದೇಶ (31), ಶ್ರೀಲಂಕಾ (30), ನೈಜೀರಿಯಾ (28), ಅಜರ್‌ಬೈಜಾನ್ (27) ದೇಶಗಳವರು. ), ಯೆಮೆನ್ (24), ಮಲೇಷ್ಯಾ (22), ಸೌದಿ ಅರೇಬಿಯಾ (19), ಇಂಡೋನೇಷ್ಯಾ, (19), ಈಜಿಪ್ಟ್ (21), ಯುನೈಟೆಡ್ ಅರಬ್ ಎಮಿರೇಟ್ಸ್ (19), ಯುನೈಟೆಡ್ ಕಿಂಗ್‌ಡಮ್ (17), ದಕ್ಷಿಣ ಆಫ್ರಿಕಾ (15), ನೇಪಾಳ ( 15), ಅಲ್ಜೀರಿಯಾ (17), ಇರಾಕ್ (14), ಅಫ್ಘಾನಿಸ್ತಾನ (12), ಕೀನ್ಯಾ (12), ಮತ್ತು ಓಮನ್ (12) ದೇಶಗಳಿಗೆ ಸೇರಿದ್ದಾರೆ ಎಂದು ವರದಿಗಳು ತಿಳಿಸಿವೆ.
ಅಂತಾರಾಷ್ಟ್ರೀಯ ಮಕ್ಕಳ ಲೈಂಗಿಕ ಶೋಷಣೆ (ICSE) ಚಿತ್ರ ಮತ್ತು ವೀಡಿಯೋ ಡೇಟಾಬೇಸ್ ಹೊಂದಿರುವ ಇಂಟರ್‌ಪೋಲ್‌ಗೆ ಸಿಬಿಐ ನೋಡಲ್ ಏಜೆನ್ಸಿಯಾಗಿದೆ, ಇದು ಸದಸ್ಯ ರಾಷ್ಟ್ರಗಳ ತನಿಖಾಧಿಕಾರಿಗಳಿಗೆ ಮಕ್ಕಳ ಲೈಂಗಿಕ ದೌರ್ಜನ್ಯ ಪ್ರಕರಣಗಳ ಡೇಟಾವನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಮಕ್ಕಳ ಅಶ್ಲೀಲ ವಸ್ತುಗಳ ಚಲಾವಣೆಯಲ್ಲಿರುವ ಪ್ರಕರಣಗಳ ಮೇಲೆ ನಿಗಾ ಇಡಲು ಇರುವ ಕಾರ್ಯವಿಧಾನದ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ಸುಪ್ರೀಂಕೋರ್ಟ್ ಕಳೆದ ವಾರ ಕೇಂದ್ರವನ್ನು ಕೇಳಿದ ನಂತರ ಈ ದಾಳಿಗಳು ನಡೆದಿವೆ.

ಪ್ರಮುಖ ಸುದ್ದಿ :-   ಪಾಟ್ನಾ ರೈಲ್ವೆ ನಿಲ್ದಾಣದ ಸಮೀಪದ ಹೊಟೇಲ್‌ ನಲ್ಲಿ ಬೆಂಕಿ ಅವಘಡ : 6 ಮಂದಿ ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement