ಇಂಡಿಯನ್​ ಆಯಿಲ್​ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ 1535​ ಅಪ್ರೆಂಟಿಸ್​ ಹುದ್ದೆಗೆ ಅರ್ಜಿ ಆಹ್ವಾನ; ಐಟಿಐ, ಡಿಪ್ಲೊಮಾ ಆದವರಿಗೂ ಅವಕಾಶ

ಇಂಡಿಯನ್​ ಆಯಿಲ್​ ಕಾರ್ಪೊರೇಷನ್ ಲಿಮಿಟೆಡ್‌(IOCL)​​ನಲ್ಲಿ ವಿವಿಧ ಟ್ರೇಡ್​ ಮತ್ತು ಟೆಕ್ನಿಷಿಯನ್​ ಅಪ್ರೆಂಟಿಸ್ 1535 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಐಟಿಐ, ಡಿಪ್ಲೊಮಾ ಮತ್ತು ಪದವೀಧರರೂ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್​ 23 ಆಗಿದ್ದು, ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಒಂದು ವರ್ಷದ ಅವಧಿಗೆ ಈ ನೇಮಕಾತಿಗಳು ನಡೆಯಲಿದೆ. ಈ ನೇಮಕಾತಿಗೆ ಸಂಬಂಧಿಸಿದೆ.
ಸಂಸ್ಥೆ- ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL)
ಹುದ್ದೆ ಹೆಸರು-ಟ್ರೇಡ್ ಮತ್ತು ಟೆಕ್ನಿಷಿಯನ್ ಅಪ್ರೆಂಟಿಸ್
ಒಟ್ಟು ಹುದ್ದೆಗಳ ಸಂಖ್ಯೆ- 1535
ಉದ್ಯೋಗ ಸ್ಥಳ–ಅಖಿಲ ಭಾರತ
ಸಂಬಳ-ಸ್ಟೈಪೆಂಡ್
ಶೈಕ್ಷಣಿಕ ಅರ್ಹತೆ: ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಐಟಿಐ, ಡಿಪ್ಲೊಮಾ ಹಾಗೂ ಬಿಎ, ಬಿಎಸ್ಸಿ, ಬಿಕಾಂ ಪದವಿ ಪಡೆದಿರಬೇಕು.
ವಯೋಮಿತಿ: ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 24 ವರ್ಷಗಳಾಗಿರಬೇಕು.
ವಯೋಮಿತಿ ಸಡಿಲಿಕೆ: ಪರಿಶಿಷ್ಟ ಜಾತಿ ಹಾಗೂ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳು ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷಗಳು
ಅರ್ಜಿ ಶುಲ್ಕವಿಲ್ಲ
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 24 ಸೆಪ್ಟೆಂಬರ್​ 2022
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23 ಅಕ್ಟೋಬರ್ 2022
ಮಹತ್ವದ ಲಿಂಕ್‌ಗಳು:
ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ ನೋಡಬಹುದು-IOCL Notification
ಅಧಿಕೃತ ವೆಬ್‌ಸೈಟ್:http://iocl.com

ಪ್ರಮುಖ ಸುದ್ದಿ :-   ರಾಯಬರೇಲಿಯಿಂದ ಅಕ್ಕನ ವಿರುದ್ಧ ಸ್ಪರ್ಧಿಸಲು ಬಿಜೆಪಿ ನೀಡಿದ್ದ ಆಫರ್‌ ತಿರಸ್ಕರಿಸಿದರೇ ವರುಣ್‌ ಗಾಂಧಿ..?

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement