ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಆರ್ಎಸ್ಎಸ್ ಕಾರ್ಯಕರ್ತನ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ನಾಲ್ಕೂ ಚಕ್ರದ ಗಾಳಿ ಬಿಟ್ಟು ಕಾರಿನ ಮೇಲೆ ಕಿಲ್ ಯು, ಜಿಹಾದಿ ಎಂದು ಬರೆಯಲಾಗಿದೆ ಎಂದು ವರದಿಯಾಗಿದೆ.
ಕಡೂರಿನ ಲಕ್ಷ್ಮೀಶ ನಗರದ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ನಾಲ್ಕು ಚಕ್ರದ ಗಾಳಿ ತೆಗೆದ ದುಷ್ಕರ್ಮಿಗಳು ಬಳಿಕ ಈ ರೀತಿ ಬರೆದಿದ್ದಾರೆ. ಕಿಲ್ ಯು, ಜಿಹಾದ್ ಎಂದು ಬರೆದಿದ್ದು ಅಶ್ಲೀಲ ಪದಗಳ ಬಳಕೆ ಮಾಡಲಾಗಿದೆ ಎಂದು ಹೇಳಲಾಗಿದೆ. ಡಾ.ಶಶಿಧರ್ ವೃತ್ತಿಯಲ್ಲಿ ಬಿಸಿನೆಸ್ಮೆನ್ ಆಗಿದ್ದು, ಆರ್ಎಸ್ಎಸ್ ಕೆಲಸ-ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಧರ್ಮ ಜಾಗರಣ ವಿಭಾಗದ ಸಹ ಸಂಚಾಲಕರಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಆ ಜಾಗದಲ್ಲಿ ಬೇರೆ ಅನೇಕ ಕಾರುಗಳಿದ್ದರೂ ಅವರ ಕಾರಿನ ಮೇಲೇ ಈ ರೀತಿ ಬರೆದಿರುವುದರ ಉದ್ದೇಶವೇನು ಎಂಬುದು ಈಗ ಚರ್ಚೆಯ ವಿಷಯವಾಗಿದೆ. ಈ ಕುರಿತು ಕಡೂರು ಠಾಣೆಯಲ್ಲಿ ಡಾ. ಶಶಿಧರ ಪ್ರಕರಣ ದಾಖಲಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿಂದೂ ಕಾರ್ಯಕರ್ತರ ಮೇಲೆ ನಡೆಯುವ ಈ ರೀತಿ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು. ಹಾಗೂ ಪೊಲೀಸರು ಸೂಕ್ತ ಕ್ರಮಕೈಗೊಳ್ಳಬೇಕೆಂದು ಡಾ.ಶಶಿಧರ ಆಗ್ರಹಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಹೋಗಿ-ಬರುವ ಮಾರ್ಗದಲ್ಲಿನ ಎಲ್ಲ ಸಿಸಿಟಿವಿ ಫುಟೇಜ್ಗಳನ್ನ ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಇದಕ್ಕಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ ಎನ್ನಲಾಗಿದೆ
ನಿಮ್ಮ ಕಾಮೆಂಟ್ ಬರೆಯಿರಿ