ಹಾವುಗಳು ಸ್ನೀಕಿ ಜೀವಿಗಳು ಎಂದು ಹೇಳಬೇಕಾಗಿಲ್ಲ. ಅವರು ಯಾವುದೇ ಜಾಗಕ್ಕೂ ಕುಶಲತೆಯಿಂದ ಸೇರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ ಮತ್ತು ತುಂಬಾ ಜಾಣತನದಿಂದ ಅಡಗಿಕುಳಿತಿರುತ್ತವೆ.
ಇಂಥದ್ದೇ ಒಂದು ಘಟನೆಯೊಂದರಲ್ಲಿ ಶಾಲಾ ಬಾಲಕಿಯ ಬ್ಯಾಗ್‌ನೊಳಗೆ ಸುತ್ತಿಕೊಂಡಿದ್ದ ಬೃಹತ್ ನಾಗರಹಾವು ಸಿಕ್ಕಿಬಿದ್ದಿದೆ. ಮಧ್ಯಪ್ರದೇಶದ ಶಾಜಾಪುರದ ಬದೋನಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಉಮಾ ರಜಕ್ ಎಂಬ 10ನೇ ತರಗತಿಯ ಬಾಲಕಿಗೆ ತನ್ನ ಬ್ಯಾಗ್‌ನಲ್ಲಿ ಏನೋ ಚಲಿಸುತ್ತಿರುವ ಅನುಭವವಾಯಿತು. ಒಮ್ಮೆಗೇ ಗಾಬರಿಯಾದ ಅವಳು ಅದನ್ನು ತಕ್ಷಣವೇ ತನ್ನ ಶಿಕ್ಷಕರ ಗಮನಕ್ಕೆ ತಂದಿದ್ದಾಳೆ. ಆದರೆ ಆ ವಿದ್ಯಾರ್ಥಿನಿಗೆ ತನ್ನ ಬ್ಯಾಗ್‌ನಲ್ಲಿ ಭಾರೀ ವಿಷ ಸರ್ಪ ಸೇರಿದೆ ಎಂದು ತಿಳಿದಿರಲಿಲ್ಲ.
ತಕ್ಷಣವೇ ಶಿಕ್ಷಕರು ಬ್ಯಾಗ್ ಒಳಗೆ ಏನಿದೆ ಎಂದು ನೋಡಲು ಮುಂದಾದರು. ಅವರು ಬ್ಯಾಗ್ ಬಿಚ್ಚಿ ಅದರೊಳಗೆ ಕೋಲು ಹಾಕಿ ನೋಡಿದಾಗ ಅದರೊಳಗೆ ಹಾವು ಸೇರಿಕೊಂಡಿರುವುದು ಗೊತ್ತಾಗಿದೆ. ತಕ್ಷಣವೇ ಅವರು ಬ್ಯಾಗನ್ನು ಕ್ಲಾಸ್ ರೂಮಿನ ಹೊರಗೆ ಒಯ್ದಿದ್ದಾರೆ. ನಂತರ ಬ್ಯಾಗ್ ಜಿಪ್ ಬಿಚ್ಚಿ ಎಲ್ಲಾ ಪುಸ್ತಕಗಳನ್ನು ಕೆಳಕ್ಕೆ ಬೀಳಿಸಿದ್ದಾರೆ. ಆದರೂ ಸೇರಿಕೊಂಡ ಸರ್ಪ ಒಳಗೆ ಗಪ್‌ಚುಪ್ ಆಗಿ ಇತ್ತು. ನಂತರ ಅವರು ಬ್ಯಾಗನ್ನು ಕೊಡಹಿದರು. ನಂತರ ಭಾರೀ ಕಪ್ಪಾದ ವಿಷ ಸರ್ಪ ಬ್ಯಾಗಿನಿಂದ ಹೊರಬಿದ್ದಿದೆ. ಕಪ್ಪು ನಾಗರ ನೋಡಿ ಅಲ್ಲಿದ್ದವರು ಗಾಬರಿಯಾಗಿದ್ದಾರೆ.
ಅದೃಷ್ಟವಶಾತ್, ನಾಗರ ಹಾವು ಅವರ ಮೇಲೆ ದಾಳಿ ಮಾಡದ ಕಾರಣ ಶಿಕ್ಷಕ ಮತ್ತು ಬಾಲಕಿ ಇಬ್ಬರೂ ಗಾಯಗೊಳ್ಳದೆ ಪಾರಾಗಿದ್ದಾರೆ. ಗಮನಾರ್ಹವಾಗಿ, ಈ ಕಪ್ಪು ನಾಗರಹಾವಿನ ವಿಷವು ಕೇವಲ ಒಂದು ಕಡಿತದಿಂದ 20 ಜನರನ್ನು ಕೊಲ್ಲುವಷ್ಟು ಶಕ್ತಿಶಾಲಿಯಾಗಿದೆಯಂತೆ. ಸೆಪ್ಟೆಂಬರ್‌ನಲ್ಲಿ, ಕೇರಳದ ಕೊಟ್ಟಾಯಂನ ಅರ್ಪೂಕರ ನಿವಾಸಿಯೊಬ್ಬರ ಕಾರಿನಲ್ಲಿ ಸುಮಾರು ಒಂದು ತಿಂಗಳ ಕಾಲ ಕಿಂಗ್ ಕೋಬ್ರಾ ಹಾವು ಮನೆ ಮಾಡಿಕೊಂಡಿರುವುದು ಕಂಡುಬಂದಿತ್ತು. ಜೊತೆಗೆ ಅದು ಕುಟುಂಬದೊಂದಿಗೆ ಸುಮಾರು 200 ಕಿಮೀ ಪ್ರಯಾಣ ಸಹ ಮಾಡಿತ್ತು. ಆದರೂ ಅದು ಇರುವುದು ಯಾರಿಗೂ ಅರಿವಿಗೆ ಬಂದಿರಲಿಲ್ಲ.
ನಿಮ್ಮ ಕಾಮೆಂಟ್ ಬರೆಯಿರಿ