ಹಿಜಾಬ್ ವಿರೋಧಿ ಪ್ರತಿಭಟನೆಯಲ್ಲಿ ಕೊಲ್ಲಲ್ಪಟ್ಟ ಇರಾನ್ ವ್ಯಕ್ತಿಯ ಸಮಾಧಿ ಮೇಲೆ ತನ್ನ ಕೂದಲು ಕತ್ತರಿಸಿ ಇಟ್ಟ ಸಹೋದರಿ | ವೀಕ್ಷಿಸಿ

ನವದೆಹಲಿ: ಇರಾನ್‌ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆಗಳು ತೀವ್ರಗೊಂಡಿದ್ದು, 41 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಮತ್ತು 700 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ, ಪೊಲೀಸರು ಪ್ರತಿಭಟನೆಯ ದಮನ ಮಾಡುವಾಗ ಸಾವಿಗೀಡಾಡ ಜವಾದ್‌ ಹೇದರಿ ಎಂಬ ವ್ಯಕ್ತಿಯ ಅಂತ್ಯಕ್ರಿಯೆಯ ವೀಡಿಯೊವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ, ಪ್ರತಿಭಟನಾರ್ಥವಾಗಿ ಜವಾದ್ ಹೇದರಿ ಸಮಾಧಿಯ ಮೇಲೆ ಆತನ ಸಹೋದರಿ ಕೂದಲು ಕತ್ತರಿಸಿರುವುದನ್ನು ವೀಡಿಯೊ ತೋರಿಸುತ್ತದೆ.
22 ವರ್ಷದ ಮಹ್ಸಾ ಅಮಿನಿಯ ಸಾವಿನ ನಂತರ ಇರಾನ್‌ನಲ್ಲಿ ಹಿಜಾಬ್‌ ವಿರೋಧಿ ಪ್ರತಿಭಟನೆಗಳು ಹೆಚ್ಚಾಗಿವೆ. “ಸರಿಯಾದ ರೀತಿಯಲ್ಲಿ” ಹಿಜಾಬ್ ಅನ್ನು ಧರಿಸದಿದ್ದಕ್ಕಾಗಿ ಇರಾನ್‌ನ ನೈತಿಕತೆಯ ಪೋಲೀಸರಿಂದ ಆಕೆಯನ್ನು ಬಂಧಿಸಲಾಯಿತು ಮತ್ತು ಕಸ್ಟಡಿಯಲ್ಲಿದ್ದಾಗ ಸಾವಿಗೀಡಾದರು. ಇದರ ನಂತರ ದೇಶಾದ್ಯಂತ ಭುಗಿಲೆದ್ದ ಪ್ರತಿಭಟನೆಯಲ್ಲಿ ೫೦ಕ್ಕೂ ಹೆಚ್ಚು ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ ಎಂದು ಅನಧಿಕೃತ ಮೂಲಗಳು ಹೇಳುತ್ತವೆ.

ವೀಡಿಯೊದಲ್ಲಿ, ವಿಚಲಿತರಾದ ಮಹಿಳೆಯರು ಸಮಾಧಿಯ ಮೇಲೆ ಹೂಗಳನ್ನು ಎಸೆಯುತ್ತಿರುವುದನ್ನು ಕಾಣಬಹುದು, ಮಹಿಳೆಯೊಬ್ಬರು ಜಾವದ್ ಹೇದರಿ ಅವರ ಸಹೋದರಿ ಎಂದು ಗುರುತಿಸಲಾಗಿದ್ದು, ಅವರ ಸಮಾಧಿಯ ಮೇಲೆ ಕೂದಲು ಕತ್ತರಿಸಿದ್ದಾರೆ. ಶೋಕತಪ್ತ ಸ್ತ್ರೀಯರ ಗುಂಪೊಂದು ಅವಳ ಹಿಂದೆ ನಿಂತಿದ್ದು, ಅವಳು ಹೂ-ಮುಚ್ಚಿದ ಸಮಾಧಿಯ ಮೇಲೆ ಕೂದಲನ್ನು ಇಡುತ್ತಾಳೆ.
ಇರಾನಿನ ಪತ್ರಕರ್ತ ಮತ್ತು ಕಾರ್ಯಕರ್ತ ಮಾಸಿಹ್ ಅಲಿನೆಜಾದ್ ಅವರು ತಮ್ಮ ಕೂದಲನ್ನು ಕತ್ತರಿಸುವ ಮೂಲಕ, “ಇರಾನಿಯನ್ ಮಹಿಳೆಯರು ತಮ್ಮ ದುಃಖ ಮತ್ತು ಕೋಪವನ್ನು ತೋರಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
ಹಿಜಾಬ್ ಅನ್ನು ಸರಿಯಾದ ರೀತಿಯಲ್ಲಿ ಧರಿಸದ ಆರೋಪದ ಮೇಲೆ ಇರಾನ್‌ನ ಕುಖ್ಯಾತ ನೈತಿಕತೆಯ ಪೊಲೀಸರು ಬಂಧಿಸಿದ ನಂತರ ಮಹ್ಸಾ ಅಮಿನಿ ನಿಧನರಾದರು. ಆಕೆಯ ಸಾವಿನ ನಂತರ, ಜಾಗತಿಕವಾಗಿ ವ್ಯಾಪಕ ಪ್ರತಿಭಟನೆಗಳು ಭುಗಿಲೆದ್ದವು.

ತೀರಾ ಇತ್ತೀಚೆಗೆ, ಫ್ರೆಂಚ್ ಪೊಲೀಸರು ನಿನ್ನೆ ಅಶ್ರುವಾಯು ಬಳಸಿದರು ಮತ್ತು ಪ್ಯಾರಿಸ್‌ನಲ್ಲಿ ನೂರಾರು ಜನರು ಟೆಹ್ರಾನ್‌ನ ರಾಯಭಾರ ಕಚೇರಿಗೆ ಮೆರವಣಿಗೆ ಮಾಡುವುದನ್ನು ತಡೆಯಲು ಗಲಭೆ ವಿರೋಧಿ ತಂತ್ರಗಳನ್ನು ಬಳಸಿದ್ದಾರೆ ಎಂದು AFP ವರದಿಗಾರರು ಮತ್ತು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಲಂಡನ್‌ನಲ್ಲಿ, ಇರಾನ್‌ನ ರಾಯಭಾರ ಕಚೇರಿ ಬ್ಯಾರಿಕೇಡ್‌ ತಡೆಗಳನ್ನು ಭೇದಿಸಲು ಪ್ರಯತ್ನಿಸುತ್ತಿರುವ ಪ್ರತಿಭಟನಾಕಾರರನ್ನು ಅಧಿಕಾರಿಗಳು ತಡೆದಿದ್ದಾರೆ. ಪೊಲೀಸರು ಹಲವಾರು ಜನರನ್ನು ಬಂಧಿಸಿದ್ದಾರೆ.
ವಿಶೇಷವಾಗಿ ಆಡಳಿತವು WhatsApp, Skype, LinkedIn ಮತ್ತು Instagram ನಂತಹ ಸಂವಹನ ವೇದಿಕೆಗಳನ್ನು ನಿರ್ಬಂಧಿಸಿದ ನಂತರ ಇರಾನ್‌ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆಗಳ ಮೇಲೆ ಸರ್ಕಾರದ ದಮನವು ವ್ಯಾಪಕವಾಗಿ ಟೀಕಿಸಲ್ಪಟ್ಟಿದೆ.

ಪ್ರಮುಖ ಸುದ್ದಿ :-   ಉತ್ತಮ ಪ್ರತಿಕ್ರಿಯೆ, ಜನರು ದಾಖಲೆ ಸಂಖ್ಯೆಯಲ್ಲಿ ಎನ್‌ಡಿಎಗೆ ಮತ ಹಾಕಿದ್ದಾರೆ : ಲೋಕಸಭೆ ಚುನಾವಣೆ 1ನೇ ಹಂತದ ಮತದಾನದ ಬಗ್ಗೆ ಪ್ರಧಾನಿ ಮೋದಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement