3484 ಪೊಲೀಸ್ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ: ಎಸ್‌ಎಸ್‌ಎಲ್‌ಸಿ ಆದವರು ಅರ್ಜಿ ಸಲ್ಲಿಸಬಹುದು

ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿಗೆ ಅರ್ಜಿ ಸಲ್ಲಿಸುವುದು ಸೆಪ್ಟೆಂಬರ್‌ನಿಂದ ಆರಂಭವಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯ 3484 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್‌ಗಳ (CAR/ DAR)ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.. ಸೆಪ್ಟೆಂಬರ್ 19 ರಿಂದ ಅರ್ಜಿಸಲ್ಲಿಕೆ ಆರಂಭವಾಗಿದೆ.
ಕರ್ನಾಟಕ ಪೊಲೀಸ್ ನೇಮಕಾತಿಯಲ್ಲಿ ಆಸಕ್ತಿ ಹೊಂದಿರುವ ಎಲ್ಲರೂ ಅಧಿಕೃತ ವೆಬ್‌ಸೈಟ್ ಅಂದರೆ ksp-recruitment.in ನಲ್ಲಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 31 ಅಕ್ಟೋಬರ್ 2022. ಅಭ್ಯರ್ಥಿಗಳು 03 ನವೆಂಬರ್ 2022 ರವರೆಗೆ ಶುಲ್ಕ ಸಲ್ಲಿಸಬಹುದಾಗುದೆ.

ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (CAR/ DAR) ಹುದ್ದೆಗಳು- 3484
ವಿದ್ಯಾರ್ಹತೆ- 10ನೇ ತರಗತಿ ಅಥವಾ ತತ್ಸಮಾನ
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ 19 ಸೆಪ್ಟೆಂಬರ್ 2022
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ 31 ಅಕ್ಟೋಬರ್ 2022
ಪರೀಕ್ಷೆಯ ದಿನಾಂಕ ಘೋಷಿಸಬೇಕಿದೆ.
ಅರ್ಜಿ ಸಲ್ಲಿಕೆ-ಇಲ್ಲಿ ಕ್ಲಿಕ್ ಮಾಡಿhttps://ksp-recruitment.in/
ಅಧಿಕೃತ ವೆಬ್‌ಸೈಟ್-ಇಲ್ಲಿ ಕ್ಲಿಕ್ ಮಾಡಿhttps://ksp.karnataka.gov.in/
KSP ಕಾನ್ಸ್ಟೇಬಲ್ ವಯಸ್ಸಿನ ಮಿತಿ
ಕನಿಷ್ಠ ವಯಸ್ಸಿನ ಮಿತಿ: ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿ: 18ರಿಂದ 25 ವರ್ಷಗಳು
ಪರಿಶಿಷ್ಟ ಜಾತಿ ಹಾಗೂ ಇತರ ಹಿಂದುಳಿದ ವರ್ಗ (OBC)ಗಾಗಿ ಗರಿಷ್ಠ ವಯೋ ಮಿತಿ: 27 ವರ್ಷಗಳು
ಕರ್ನಾಟಕದ ಬುಡಕಟ್ಟು ಜನಾಂಗದವರಿಗೆ ಗರಿಷ್ಠ ವಯೋ ಮಿತಿ: 30 ವರ್ಷಗಳು

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

ಅರ್ಜಿ ಸಲ್ಲಿಸುವುದು ಹೇಗೆ?
ಪೊಲೀಸರ ಅಧಿಕೃತ ವೆಬ್‌ಸೈಟ್‌ಗೆ ಹೋಗಿ – https://ksp.karnataka.gov.in/ ಅಥವಾ https://ksp-recruitment.in/
ಅಪ್ಲಿಕೇಶನ್ ಲಿಂಕ್ ಅನ್ನು ಕ್ಲಿಕ್ ಮಾಡಿ. ನಿಮ್ಮ ವಿವರಗಳನ್ನು ನಮೂದಿಸಿ ಅರ್ಜಿ ನಮೂನೆಯ ಪ್ರಿಂಟ್ ಔಟ್ ತೆಗೆದುಕೊಳ್ಳಿ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement