ಬ್ಯಾಂಕ್​ ಆಫ್​ ಬರೋಡದಲ್ಲಿ 346 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಬ್ಯಾಂಕ್​ ಆಫ್​ ಬರೋಡಾದಲ್ಲಿ (Bank Of Baroda) 346 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ರಿಲೇಶನ್​ಶಿಪ್​ ಮ್ಯಾನೇಜರ್, ಇ-ವೆಲ್ತ್​​ ರಿಲೇಶನ್​ಶಿಪ್​ ಮ್ಯಾನೇಜರ್​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಈ ಹುದ್ದೆಗಳು ಸಂಪೂರ್ಣ ತಾತ್ಕಾಲಿಕವಾಗಿದ್ದು, ಒಪ್ಪಂದದ ಆಧಾರದ ಮೇಲೆ ನೇಮಕಾತಿ ನಡೆಯಲಿದೆ ಎಂದು ತಿಳಿಸಲಾಗಿದೆ.
ಆಸಕ್ತ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು,ಅರ್ಜಿ ಸಲ್ಲಿಕೆಗೆ ಕೊನೆಯ ಅಕ್ಟೋಬರ್​ 20.
ಹುದ್ದೆಯ ಹೆಸರು: ಸೀನಿಯರ್ ರಿಲೇಶನ್‌ಶಿಪ್ ಮ್ಯಾನೇಜರ್, ಇ-ವೆಲ್ತ್ ರಿಲೇಶನ್‌ಶಿಪ್ ಮ್ಯಾನೇಜರ್
ಒಟ್ಟು ಹುದ್ದೆಗಳ ಸಂಖ್ಯೆ: 346
ಉದ್ಯೋಗ ಸ್ಥಳ: ಅಖಿಲ ಭಾರತ
ಸಂಬಳ: ಬ್ಯಾಂಕ್‌ ಆಫ್‌ ಬರೋಡಾ ನಿಯಮಗಳ ಪ್ರಕಾರ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 30 ಸೆಪ್ಟೆಂಬರ್​ 2022
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20 ಅಕ್ಟೋಬರ್ 2022

ಹಿರಿಯ ಸಂಬಂಧ ವ್ಯವಸ್ಥಾಪಕ ಹುದ್ದೆಗಳ ಸಂಖ್ಯೆ-320, ವಿದ್ಯಾರ್ಹತೆ-ಪದವಿ, ವಯೋಮತಿ ಕನಿಷ್ಠ 24- ಗರಿಷ್ಠ 40 ವರ್ಷ
ಇ-ವೆಲ್ತ್ ರಿಲೇಶನ್‌ಶಿಪ್ ಮ್ಯಾನೇಜರ್ ಹುದ್ದೆಗಳ ಸಂಖ್ಯೆ- 24, ವಿದ್ಯಾರ್ಹತೆ-ಪದವಿ ವಯೋಮಿತಿ- ಕನಿಷ್ಠ 23- ಗರಿಷ್ಟ 35 ವರ್ಷ
ಗ್ರೂಪ್​ ಸೇಲ್ಸ್​ ಮುಖ್ಯಸ್ಥರ ಹುದ್ದೆ- 01, ವಿದ್ಯಾರ್ಹತೆ-ಪದವಿ, ವಯೋಮಿತಿ ಕನಿಷ್ಠ 31-ಗರಿಷ್ಠ 45 ವರ್ಷ
ಆಪರೇಷನ್ಸ್ ಹೆಡ್-ವೆಲ್ತ್ -01, ವಿದ್ಯಾರ್ಹತೆ-ಎಂಬಿಎ, ವಯೋಮಿತಿ-ಕನಿಷ್ಠ 35- ಗರಿಷ್ಠ 50 ವರ್ಷ
ವಯೋಮಿತಿ ಸಡಿಲಿಕೆ: ಪರಿಶಿಷ್ಟ ಜಾತಿ ಹಾಗೂ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳು ಹಾಗೂ
ಅರ್ಜಿ ಶುಲ್ಕ: ಪ.ಜಾ, ಪ.ಪಂ ಮತ್ತು ಮಹಿಳಾ ಅಭ್ಯರ್ಥಿಗಳಿಗೆ 100 ರೂ. ಹಾಗೂ ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 600 ರೂ.
ಪಾವತಿ ವಿಧಾನ: ಆನ್‌ಲೈನ್
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ, ಗುಂಪು ಚರ್ಚೆ ಮತ್ತು ವೈಯಕ್ತಿಕ ಸಂದರ್ಶನ
ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ ನೋಡಬಹುದುBOB-detailed-advertisement-30-09-2022-29-12
ಅಧಿಕೃತ ವೆಬ್‌ಸೈಟ್: http://bankofbaroda.in

ಪ್ರಮುಖ ಸುದ್ದಿ :-   ಅಕ್ರಮ ಹಣ ವರ್ಗಾವಣೆ ಪ್ರಕರಣ : ಕೇಜ್ರಿವಾಲಗೆ ದೆಹಲಿ ಹೈಕೋರ್ಟ್‌ ನಿಂದ ಸಿಗದ ಜಾಮೀನು

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement