ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಶಶಿ ತರೂರ್, ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಕ್ರಮಬದ್ಧ- ಕೆ.ಎನ್. ತ್ರಿಪಾಠಿ ಔಟ್

ನವದೆಹಲಿ: ಜಾರ್ಖಂಡ್‌ನ ಮಾಜಿ ಸಚಿವ ಕೆ.ಎನ್. ತ್ರಿಪಾಠಿ ಅವರ ಅರ್ಜಿ ಇಂದು, ಶನಿವಾರ ತಿರಸ್ಕೃತಗೊಂಡ ನಂತರ ಕಾಂಗ್ರೆಸ್ ಪಕ್ಷದ ಉನ್ನತ ಹುದ್ದೆಗಾಗಿ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ನಡುವೆ ಹೋರಾಟ ಈಗ ನಡೆಯಲಿದೆ.
ಅಭ್ಯರ್ಥಿಗಳು ಸಲ್ಲಿಸಿರುವ ನಾಮಪತ್ರಗಳನ್ನು ಕೂಲಂಕುಷವಾಗಿ ಪರಿಶೀಲಿಸಲಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಚುನಾವಣಾಧಿಕಾರಿ ಮಧುಸೂದನ್ ಮಿಸ್ತ್ರಿ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸ್ವೀಕರಿಸಿದ 20 ನಮೂನೆಗಳಲ್ಲಿ ನಾಲ್ಕು ಫಾರ್ಮ್‌ಗಳನ್ನು ಸಹಿಗಳಲ್ಲಿನ ವ್ಯತ್ಯಾಸಗಳಿಂದ ತಿರಸ್ಕರಿಸಲಾಗಿದೆ. ಸಹಿಗಳ ಪುನರಾವರ್ತನೆ ಮತ್ತು ಸಹಿಗಳು ಹೊಂದಿಕೆಯಾಗದ ಕಾರಣ ಜಾರ್ಖಂಡ್ ಅಭ್ಯರ್ಥಿಯ ಫಾರ್ಮ್ ಅನ್ನು ಸಹ ತಿರಸ್ಕರಿಸಲಾಗಿದೆ ಎಂದು ಅವರು ಹೇಳಿದರು.
ಮಲಿಕಾರ್ಜುನ್ ಖರ್ಗೆ ಮತ್ತು ಶಶಿ ತರೂರ್ ಇಬ್ಬರು ಅಭ್ಯರ್ಥಿಗಳು ಈಗ ಕಣದಲ್ಲಿ ಉಳಿದಿದ್ದಾರೆ. ಅಕ್ಟೋಬರ್ 8, ಉಮೇದುವಾರಿಕೆ ಹಿಂಪಡೆಯಲು ದಿನಾಂಕವಾಗಿದೆ. ಆ ದಿನ ಚಿತ್ರಣ ಸ್ಪಷ್ಟವಾಗುತ್ತದೆ – ಯಾರೂ ಹಿಂತೆಗೆದುಕೊಳ್ಳದಿದ್ದರೆ, ನಂತರ ಮತದಾನ ಪ್ರಕ್ರಿಯೆ ನಡೆಯುತ್ತದೆ, ”ಎಂದು ಮಿಸ್ತ್ರಿ ತಿಳಿಸಿದರು.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement