ರಾಮಾಯಣ ಧಾರಾವಾಹಿಯ ಶ್ರೀರಾಮನ ಪಾತ್ರಧಾರಿ ಅರುಣ್ ಗೋವಿಲ್‌ಗೆ ಸಾಷ್ಟಾಂಗ ನಮಸ್ಕಾರ ಮಾಡಿ ಪುಳಕಿತಳಾದ ಮಹಿಳೆ..| ವೀಕ್ಷಿಸಿ

ನವದೆಹಲಿ: 90ರ ದಶಕದಲ್ಲಿ ಇಡೀ ಭಾರತದ ಮನೆಮಾತಾಗಿದ್ದ, ರಾಮಾನಂದ ಸಾಗರ್ ನಿರ್ಮಾಣದ ‘ರಾಮಾಯಣ’ ಧಾರಾವಾಹಿಯಲ್ಲಿ ಶ್ರೀರಾಮನ ಪಾತ್ರ ನಿರ್ವಹಿಸಿದ್ದ ಅರುಣ್ ಗೋವಿಲ್ ಇತ್ತೀಚೆಗೆ ವಿಮಾನ ನಿಲ್ದಾಣವೊಂದರಲ್ಲಿ ಇದ್ದಾಗ, ಅವರ ಬಳಿಗೆ ಆಗಮಿಸಿದ ದಂಪತಿ ಅವರಿಗೆ ನಮಸ್ಕರಿಸಿದ್ದಾರೆ.  ಮಹಿಳೆಯೊಬ್ಬರು ಅವರಿಗೆ ಶಿರಸಾಷ್ಟಾಂಗ ನಮಸ್ಕಾರ ಮಾಡಿರುವ ವೀಡಿಯೊ ವೈರಲ್‌ ಆಗಿದೆ.

ರಾಮಾಯಣ ಧಾರಾವಾಹಿ ಶ್ರೀರಾಮನ ಪಾತ್ರದಿಂದ ಅಪಾರ ಜನಪ್ರಿಯತೆ ಪಡೆದಿದ್ದ ನಟ ಅರುಣ್‌ ಗೋವಿಲ್‌ ಅವರಿಗೆ ಈಗಲೂ ಅಂಥ ಅಭಿಮಾನಿಗಳಿದ್ದಾರೆ. ಮರ್ಯಾದಾ ಪುರುಷೋತ್ತಮ ಶ್ರೀರಾಮನನ್ನು ನಟ ಅರುಣ್ ಗೋವಿಲ್ ಮೂಲಕ ಕಂಡಿದ್ದ ಜನರಿಗೆ ಧಾರವಾಹಿ ಮುಗಿದು ಮೂವತ್ತೈದಕ್ಕೂ ಹೆಚ್ಚು ವರ್ಷಗಳು ಕಳೆದರೂ ಗೋವಿಲ್ ಬಗ್ಗೆ ಒಂದು ರೀತಿಯ ಭಕ್ತಿಭಾವ ಈಗಲೂ ಇದೆ ಎಂಬುದಕ್ಕೆ ಈ ವಿದ್ಯಮಾನವೇ ಸಾಕ್ಷಿಯಾಗಿದೆ.

ಆ ಮಹಿಳೆ ವಿಮಾನ ನಿಲ್ದಾಣದಲ್ಲಿ ಅರುಣ್‌ ಗೋವಿಲ್‌ ಅವರನ್ನು ಕಂಡ ತಕ್ಷಣ ಆ ಮಹಿಳೆ ನಮಸ್ಕರಿಸಿದ್ದಾಳೆ. ಘಟನೆಯಿಂದ ಒಂದುಕ್ಷಣ ಅವಾಕ್ಕಾದರೂ ಅರುಣ್‌ ಗೋವಿಲ್‌ ಅವರು ತಮ್ಮಲ್ಲಿದ್ದ ಶ್ರೀರಾಮ ಹೆಸರು ಮುದ್ರಿತ ಶಾಲೊಂದನ್ನು ಆ ಮಹಿಳಿಗೆ ನೀಡಿದ್ದಾರೆ. ಅ ಮೊದಲಿಗೆ ಆಕೆಯು ಸ್ವೀಕರಿಸಲು ನಿರಾಕರಿಸಿದರೂ, ಆನಂತರ ಗೋವಿಲ್ ಬಲವಂತ ಮಾಡಿದ್ದಕ್ಕೆ ಆ ವಸ್ತ್ರವನ್ನು ಪಡೆದು ಅದನ್ನು ಮಡಚಿ ಭಕ್ತಿಯಿಂದ ಕಣ್ಣಿಗೆ ಒತ್ತಿಕೊಳ್ಳುತ್ತಾರೆ. ಈ ವೀಡಿಯೋ ವೈರಲ್ ಆಗಿದೆ. ಕೊರೊನಾ ಸಮಯದಲ್ಲಿ ರಾಮಾಯಣ ಧಾರಾವಾಹಿ ದೂರದರ್ಶನದಲ್ಲಿ ಮರುಪ್ರಸಾರವಾಯಿತು .ಪುನಃ ಜನಪ್ರಿಯತೆ ಪಡೆದು ದೂರದರ್ಶನಕ್ಕೆ ಮತ್ತೆ ಅತಿಹೆಚ್ಚು ಟಿಆರ್‌ಪಿ ರೇಟಿಂಗ್‌ ತಂದುಕೊಟ್ಟಿತು. ಈ ದಾರವಾಹಿಯನ್ನು ಏಳು ಕೋಟಿಗೂ ಹೆಚ್ಚು ಜನ ವೀಕ್ಷಣೆ ಮಾಡಿದರು.

ಪ್ರಮುಖ ಸುದ್ದಿ :-   ಭೀಕರ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ‘ಐಎಸ್‌ಐ’ ಬೆಂಬಲಿತ ಉಗ್ರ ಜಾಲ ಭೇದಿಸಿದ ಪೊಲೀಸರು : 7 ಮಂದಿ ಕುಖ್ಯಾತರ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement