ಹಳ್ಳದಲ್ಲಿ ಕೊಚ್ಚಿಹೋಗಿದ್ದ‌ ಮೂವರು ಮಹಿಳೆಯರ ಮೃತದೇಹ ಪತ್ತೆ, ಮತ್ತೊಬ್ಬರಿಗೆ ಮುಂದುವರಿದ ಶೋಧ

ಕೊಪ್ಪಳ: ಶನಿವಾರ ರಾತ್ರಿ ಯಲಬುರ್ಗಾ ತಾಲೂಕಿನ ಸಂಕನೂರು ಬಳಿ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದ ನಾಲ್ವರು ಮಹಿಳೆಯರ ಪೈಕಿ ಮೂವರ ಮೃತದೇಹಗಳು ಭಾನುವಾರ ಬೆಳಿಗ್ಗೆ ಪತ್ತೆಯಾಗಿವೆ.
ಅವರು ಹತ್ತಿ ಜೀನ್‌ನಿಂದ ಕೆಲಸ ಮುಗಿಸಿಕೊಂಡು ಶನಿವಾರ ಸಂಜೆ ಗ್ರಾಮಕ್ಕೆ ಮರಳಿ ಬರುವಾಗ ಸಂಕನೂರು ಹಳ್ಳದಲ್ಲಿ ಕೊಚ್ಚಿಹೋಗಿದ್ದರು. ಗ್ರಾಮದ ಗಿರಿಜಾ ಪೊಲೀಸ್‌ ಪಾಟೀಲ (28), ಭುವನೇಶ್ವರಿ ಪೊಲೀಸ್‌ ಪಾಟೀಲ (32) ಹಾಗೂ ವೀಣಾ ಪೊಲೀಸ್‌ ಪಾಟೀಲ (22) ಮೃತದೇಹ ಪತ್ತೆಯಾಗಿದೆ ಎಂದು ವರದಿಯಾಗಿದೆ. ಮತ್ತೊಬ್ಬ ಮಹಿಳೆಗಾಗಿ ಹುಡುಕಾಟ ನಡೆದಿದೆ. ಪೊಲೀಸರು ರಕ್ಷಣಾ ಕಾರ್ಯಾಚರಣೆ ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ. ಮಳೆಯ ನಡುವೆಯೇ ಸ್ಥಳೀಯರು, ಅಗ್ನಿಶಾಮಕ ದಳದ ಸಿಬ್ಬಂದಿ ತಡರಾತ್ರಿ ತನಕ ಕಾರ್ಯಾಚರಣೆ ನಡೆಸಿದರು. ಭಾನುವಾರ ಬೆಳಿಗ್ಗೆಯಿಂದ ಮಳೆ ಕೊಂಚ ಕಡಿಮೆಯಾಗಿದ್ದು ಹಳ್ಳದಲ್ಲಿ ನೀರಿನ ಮಟ್ಟ ಇಳಿಕೆಯಾಗುತ್ತಿದೆ ಎಂದು ಹೇಳಲಾಗಿದೆ.

3 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement