200 ವರ್ಷಗಳಿಂದ ನವರಾತ್ರಿ ಹಬ್ಬವನ್ನು ವೈಶಿಷ್ಟ್ಯಪೂರ್ಣವಾಗಿ ಆಚರಿಸಿಕೊಂಡು ಬರುತ್ತಿರುವ ಧಾರವಾಡದ ಕಟ್ಟಿಮಠ ಕುಟುಂಬ

(ನವರಾತ್ರಿಯನ್ನು ದಿನಾಂಕ ೨೫ ಸೆಪ್ಟೆಂಬರ್ ರಿಂದ ಅಕ್ಟೋಬರ ೫ರ ವರೆಗೆ ಆಚರಿಸಲಾಗುತ್ತಿದೆ)
೨೦೦ಕ್ಕೂ ಹೆಚ್ಚು ವರ್ಷಗಳ ಪಾರಂಪರಿಕ ಇತಿಹಾಸವುಳ್ಳ, ಅಧ್ಯಾತ್ಮಿಕ ಹಿನ್ನೆಲೆಯ ಧಾರವಾಡದ ಕಟ್ಟಿಮಠ ಕುಟುಂಬ ನವರಾತ್ರಿಯ ಉತ್ಸವವನ್ನು ಹಲವಾರು ವರ್ಷಗಳಿಂದ ವಿಶಿಷ್ಟವಾಗಿ ಆಚರಿಸುತ್ತ ಬಂದಿದೆ. ಈಗ ಕುಟುಂಬದ ನಾಲ್ಕನೇ ತಲೆಮಾರಿನವರಾದ ಕಾರ್ತಿಕ ಕಟ್ಟಿಮಠ ಅವರು ೨೦೧೭ರಿಂದ ನವರಾತ್ರಿ ಹಬ್ಬದ ಅರ್ಥಪೂರ್ಣವಾದ ಆಚರಣೆ ಮಾಡುತ್ತ ಬಂದಿದ್ದಾರೆ.
ದೇವಿ ಆರಾಧನೆಯನ್ನು ನಿರಂತರವಾಗಿ ಗಮನಿಸುತ್ತಾ ಬಂದ ಕಾರ್ತಿಕ ಅವರು ತಮ್ಮ ೮ನೇ ವಯಸ್ಸಿನಲ್ಲಿಯೇ ಮನೆಯಲ್ಲಿ ಪ್ರತ್ಯೇಕವಾಗಿ ದೇವಿಯನ್ನು ಪೂಜಿಸುತ್ತ ಬಂದಿದ್ದರು
೨೭ ವರ್ಷ ವಯಸ್ಸಿನ ಕಾರ್ತಿಕ ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಮಾಸ್ಟರ ಆಫ್ ಡಿಸೈನ್ ಸ್ನಾತಕೋತ್ತರ ಪದವಿಯನ್ನು ೨೦೧೯ ರಲ್ಲಿ ಪಡೆದಿದ್ದು, ಸದ್ಯ ರಿಲಯನ್ಸ್ ಸಂಸ್ಥೆಯಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಶಾಸ್ತ್ರೀಯ ಸಂಗೀತವನ್ನೂ ಕಲಿಯುತ್ತಿದ್ದು, ಚಿತ್ರಕಲೆಯಲ್ಲಿ ಪರಿಣತಿ ಪಡೆದಿದಾರೆ.
ಅವರ ಕುಟುಂಬದಲ್ಲಿ ನವರಾತ್ರಿ ಸಂದರ್ಭದಲ್ಲಿ ದೇವಿಯನ್ನು ಮಹಾದುರ್ಗೆ, ಮಹಾಲಕ್ಷ್ಮೀ ಮತ್ತು ಮಹಾಸರಸ್ವತಿ ಎಂದು ಪೂಜಿಸಿ, ಹತ್ತನೆಯ ದಿನ ವಿಜಯದಶಮಿ ಎಂದು ಆಚರಿಸಲಾಗುತ್ತಿದೆ. ಈ ದಿನಗಳಲ್ಲಿ ದೇವಿಯರಿಗೆ ಕುಂಕುಮಾರ್ಚನೆ, ಲಲಿತಾ ಸಹಸ್ರನಾಮ, ಮುತ್ತೈದೆಯರಿಗೆ ಉಡಿ ತುಂಬುವುದು ಇವೇ ಮೊದಲಾದ ಕಾರ್ಯಕ್ರಮಗಳನ್ನು ಕಾರ್ತಿಕ ಅವರು ಈಗ ಮಾಡುತ್ತಿದ್ದಾರೆ. ದೇವಿ ಪಾರಾಯಣದ ಮಾಡುತ್ತಿದ್ದಾರೆ.

ಶರಣರ ಕಾಯಕ, ದಾಸೋಹ ಪರಂಪರೆಯನ್ನು ಮತ್ತು ಅತಿಥಿ ದೇವೋಭವ ಎನ್ನುವದನ್ನು ರೂಢಿಸಿಕೊಂಡಿರುವ ಕಟ್ಟಿಮಠ ಕುಟುಂಬ ಅನ್ನ ದಾಸೋಹವನ್ನು, ಮುತ್ತೈದೆಯರಿಗೆ ಉಡಿ ತುಂಬವ ಪರಂಪರೆಯನ್ನು ಹಾಗೂ ಆದಿಶಕ್ತಿಯ ವಿವಿಧ ಸ್ವರೂಪಕ್ಕೆ ಪೂಜೆ ಮಾಡುವುದನ್ನು ಮುಂದುವರಿಸಿದ್ದಾರೆ. ಬ್ರಾಹ್ಮಿ ಮೂಹೂರ್ತದಲ್ಲಿ ಪೂಜೆ, ಪುನಸ್ಕಾರ, ದೇವಿಗೆ ಅಲಂಕಾರ, ಪುರಾಣ, ಭಜನೆ, ಸಾಮೂಹಿಕ ಪ್ರಾರ್ಥನೆ, ಪ್ರವಚನ ನಡೆಯುತ್ತಿದೆ. ಸಾವಿರಾರು ಭಕ್ತರಿಗೆ ಅನ್ನದಾಸೋಹ ನಡೆಯುತ್ತದೆ.
ಈ ಒಂಬತ್ತು ದಿನಗಳಲ್ಲಿ ಕನ್ಯಾಕುಮಾರಿ, ಹೈಮವತಿ, ಅನಸೂಯಾ ದೇವಿ, ಸರಸ್ವತಿ ದೇವಿ, ಕರವೀರ ಶ್ರೀ ಮಹಾಲಕ್ಷ್ಮೀ, ಕೌಶಿಕಿ, ಮಹೇಂದ್ರಿ ಭಗವತಿ, ಶಾರದಾಂಬಾ ದೇವಿ ಅವತಾರಗಳಲ್ಲಿ ದೇವಿಯು ಅಲಂಕೃತಗೊಳ್ಳಲಿದ್ದು, ಹತ್ತನೆ ದಿನ ವಿಜಯದಶಮಿ ಆಚರಿಸಿ, ಬನ್ನಿಯನ್ನು ಬಂಗಾರವೆಂದು ವಿತರಿಸಲಾಗುದೆಂದು ಆಯೋಜರಾದ ಪ್ರೊ. ವಿವೇಕ ಕಟ್ಟಿಮಠ ಹೇಳುತ್ತಾರೆ.
ಜಾಗತಿಕರಣ, ಮೊಬೈಲ್‌, ಕಂಪ್ಯೂಟರ, ಟಿ.ವಿ. ಭರಾಟೆಗಳ ಈ ದಿನಮಾನಗಳಲ್ಲಿ ಮನೆತನದ ಕಾರ್ತಿಕ ದೇವಿ ಆರಾಧನೆಯ ಮೂಲಕ ಸುತ್ತಮುತ್ತಲಿನ ಪರಿಸರದಲ್ಲಿ ಸಂಸ್ಕೃತಿ, ಪರಂಪರೆ ಹೆಚ್ಚಿಸುತ್ತಿರುವುದಕ್ಕೆ, ಪ್ರಾಧ್ಯಾಪಕಿ ಪ್ರೊ. ವಿಜಯಲಕ್ಷ್ಮಿ ಸಂತಸ ವ್ಯಕ್ತ ಪಡಿಸುತ್ತಾರೆ.
ಮುತ್ತಜ್ಜರಾದ ಶಾಂತವೀರಸ್ವಾಮಿ, ಮುತ್ತಜ್ಜಿ ಪಾರ್ವತಿಬಾಯಿ, ಅವರ ಪ್ರಭಾವದಿಂದ ಅಜ್ಜ ಶಶಿಧರಸ್ವಾಮಿ, ಅಜ್ಜಿ ಪ್ರಭಾವತಿ, ತಂದೆ ಶಾಂತವೀರ, ತಾಯಿ ಭಾಗ್ಯಶ್ರೀ ಚಿಕ್ಕಪ್ಪ ಶರತ್‌ ಚಂದ್ರ ಚಿಕ್ಕಮ್ಮ ಚೇತನಾ, ಕಾಕಾ ವೀರೇಶ ಕಕ್ಕಿ ವೀಣಾ, ಅತ್ತೆ ವಿಜಯಲಕ್ಷ್ಮಿ ಅವರ ಆಶಿರ್ವಾದದಿಂದ ಮತ್ತು ಸ್ನೇಹಿತರಾದ ಕಿರಣ, ಸಹೋದರ ವಿಶ್ವ, ಬಂಧುಗಳ ಸಹಕಾರದಿಂದ ನವರಾತ್ರಿಯ ಕಾರ‍್ಯಕ್ರಮ ಹಮ್ಮಿಕೊಳ್ಳಲು ಸಾಧ್ಯವಾಗುತ್ತಿದೆ ಎಂದು ಕಾರ್ತಿಕ ಹೇಳುತ್ತಾರೆ.
ಆಸಕ್ತರು ಕಾರ್ತಿಕ ಎಸ್. ಕಟ್ಟಿಮಠ ಮನೆ ನಂ. ೫೭, ಮಟ್ಟಿ ಪರಪದಪ ಕೂಟ ಹತ್ತಿರ, ಮಂಗಳವಾರ ಪೇಟ, ಧಾರವಾಡ-೫೮೦೦೦೧. ಈ ಮೇಲ್ [email protected] ಸಂಪರ್ಕಿಸಬಹುದು.
-ಡಾ. ಬಿ. ಎಸ್. ಮಾಳವಾಡ, ನಿವೃತ್ತ ಗ್ರಂಥಪಾಲಕರು

3.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement