ನಾಗರಹೊಳೆಯಲ್ಲಿ ಸಫಾರಿ ವೇಳೆ ಗಾಯಗೊಂಡ ಮರಿ ಆನೆ ನರಳಾಟ ಕಂಡು ಮರುಗಿದ ರಾಹುಲ್ ಗಾಂಧಿ: ಸಿಎಂ ಬೊಮ್ಮಾಯಿಗೆ ಪತ್ರ

ಬೆಂಗಳೂರು: ಕರ್ನಾಟಕದಲ್ಲಿ ಭಾರತ ಜೋಡೊ ಯಾತ್ರೆ ಪ್ರಾರಂಭವಾಗಿ 5 ದಿನಗಳು ಕಳೆದಿವೆ. ದಸರಾ ಹಬ್ಬದ ಆಯುಧ ಪೂಜೆ ಹಾಗೂ ವಿಜಯದಶಮಿ ನಿಮಿತ್ತ ಯಾತ್ರೆಗೆ ಎರಡು ದಿನಗಳ ಬಿಡುವು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಬMದಿರುವ ತಾಯಿ ಸೋನಿಯಾ ಗಾಂಧಿ ಜೊತೆ ರಾಹುಲ್​ ಗಾಂಧಿ ನಾಗರಹೊಳೆ ಹುಲಿ ಸಂರಕ್ಷಿತ ಅಭಯಾರಣ್ಯ ಸಫಾರಿ ಮಾಡಿದ್ದಾರೆ.ಸಫಾರಿ ವೇಳೆ ಅವರು ಮರಿಯಾನೆಯೊಂದಕ್ಕೆ ಗಾಯವಾಗಿದ್ದನ್ನು ಕಂಡಿದ್ದಾರೆ. ಅದಕ್ಕೆ ಸೊಂಡಿಲಿಗೆ ಗಾಯವಾಗಿದೆ. ಮರಿಯಾನೆಯ ರಕ್ಷಣೆ ಕುರಿತು ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ.
“ನಾಗರಹೊಳೆ ಹುಲಿ ಸಂರಕ್ಷಿತ ಕಾಡಿನಲ್ಲಿ ಆನೆ ನೋಡಿದೆ. ತಾಯಿ ಆನೆ ಜೊತೆಗೆ ಗಾಯಗೊಂಡ ಮರಿ ಆನೆಯ ನರಳಾಟವನ್ನು ಕಂಡೆ. ನಾನು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಸಫಾರಿ ಮಾಡುತ್ತಿದ್ದ ವೇಳೆ ಸೊಂಡಿಲು ಹಾಗೂ ಬಾಲದ ಭಾಗದ ಗಾಯದಿಂದ ಮರಿ ಆನೆ ನರಳಾಡುತ್ತಿತ್ತು.

ಕಾಡಿನಲ್ಲಿ ನರಳಿತ್ತಿರುವ ಮರಿ ಆನೆಗೆ ತುರ್ತಾಗಿ ಚಿಕಿತ್ಸೆ ಅಗತ್ಯ ಇದೆ. ನೀವು ಸಹಾನುಭೂತಿ ಮನೋಭಾವನೆಯಿಂದ ಮರಿ ಆನೆ ಉಳಿಸಬೇಕು. ಮರಿಯಾನೆಗೆ ಸೂಕ್ತ ಚಿಕಿತ್ಸೆ ನೀಡುವ ವ್ಯವಸ್ಥೆಯಾಗಲಿ ಎಂದು ಪತ್ರದ ಮೂಲಕ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ ಸಕಾಲದಲ್ಲಿ ನೆರವಾಗಿ ಮರಿ ಆನೆ ಜೀವ ಉಳಿಸುತ್ತೀರೆಂದು ನಂಬಿದ್ದೇನೆ ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ರಾಹುಲ್ ಗಾಂಧಿ ಟ್ವಿಟರ್​ನಲ್ಲಿ ಆನೆ ಫೋಟೋ ಪೋಸ್ಟ್ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಜೈ ಶ್ರೀರಾಮ ಘೋಷಣೆ ಕೂಗಿದ್ದಕ್ಕೆ ಹಲ್ಲೆ ಪ್ರಕರಣ : ನಾಲ್ವರು ಆರೋಪಿಗಳ ಬಂಧನ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement