ರಾಜ್ಯ ಸಾರಿಗೆ ಸಂಸ್ಥೆ ಟಿಕೆಟ್‌ನಲ್ಲಿ ಜೈ ಮಹಾರಾಷ್ಟ್ರ ಎಂದು ಮೊಹರು..! ಏನಿದರ ಹಕೀಕತ್‌..?

ಗದಗ: ಜಿಲ್ಲೆಯಲ್ಲಿ ಕೆಎಸ್​​ಆರ್​ಟಿಸಿ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಜನರು ಟಿಕೆಟ್​ ನೋಡಿ ಶಾಕ್​ ಆಗಿದ್ದಾರೆ. ಡಂಬಳ ಮಾರ್ಗವಾಗಿ ಸಂಚರಿಸುವ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಬಲ್ಲಿ ಪ್ರಯಾಣಿಕರಿಗೆ ಜೈ ಮಹಾರಾಷ್ಟ್ರ ಎಂಬ ಮೊಹರಿನ ಟಿಕೆಟ್ ಹಂಚಲಾಗಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಟಿಕೆಟ್‌ನ ರೋಲ್‌ನಲ್ಲಿ ಮಹಾರಾಷ್ಟ್ರ ರಾಜ್ಯ ಮೊಹರು ಹಾಗೂ ಮಹಾರಾಷ್ಟ್ರ ರಾಜ್ಯ ಪರಿವಾಹನ್ ಎಂದು ಪ್ರಿಂಟ್ ಆಗಿದೆ. ಅದಲ್ಲದೆ, ಜಯ ಮಹಾರಾಷ್ಟ್ರ ಎಂಬ ಮೊಹರು ಹೊಂದಿರುವ ಟಿಕೆಟ್ ರೋಲ್ ಬಳಕೆಯಾಗಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಿಂದ ಗದಗ ನಗರಕ್ಕೆ ಬರುವ ಬಸ್ಸಿನ ಟಿಕೆಟ್ ಮೇಲೆ ವಾಕರಾರಸಾ‌ ಸಂಸ್ಥೆ ಗದಗ ಘಟಕ ಎಂದು ಮುದ್ರಿಸಲಾಗಿದೆ.

ಈ ಕುರಿತು ವಾಕರಾರಸಾ‌ ಸಂಸ್ಥೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಲಾಗಿದ್ದು, ಗದಗ ವಿಭಾಗದ ರೋಣ ಮತ್ತು ಗದ ಘಟಕದಲ್ಲಿ ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಲಾಂಛನ ವಿರುವ ಟಿಕೆಟ್ ನೀಡಿರುವ ಬಗ್ಗೆ ಪರಿಶೀಲಿಸಲಾಗಿದೆ. ಈ ಇಟಿಎಂ ರೋಲ್‌ಗಳನ್ನು ಪೂರೈಕೆ ಮಾಡುವಂತ ನಜರ್‌ಚೂಕ್‌ನಲ್ಲಿ ಎರಡು ಬಾಕ್ಸ್ ಗಳು ಮಹಾರಾಷ್ಟ್ರ ರಸ್ತೆ ಸಾರಿಗೆ ಸಂಸ್ಥೆಯವರಿಗೆ ಕಳುಹಿಸುವುದನ್ನು, ನಮ್ಮ ಸಂಸ್ಥೆಗೆ ಪೂರೈಕೆ ಮಾಡಿದ್ದಾರೆ. ಇದನ್ನು ಘಟಕಗಳಲ್ಲಿ ಪರಿಶೀಲನೆ ಮಾಡದೆ ನಿರ್ವಾಹಕರಿಗೆ ವಿತರಿಸಿದ್ದಾರೆ. ಆ ರೋಲ್ ಗಳನ್ನು ನಿರ್ವಾಹಕರು ನೋಡದೆ ಟಿಕೆಟ್ ನೀಡಿರುತ್ತಾರೆ ಎಂದು ಹೇಳಿದೆ.
ಹೀಗೆ ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಇಟಿಎಂ ರೋಲ್ ಗಳನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ವಿತರಿಸಿರೋದು ಗಮನಕ್ಕೆ ಬಂದ ರೋಣ ಘಟಕದಲ್ಲಿ 70 ರೋಲ್‌ಗಳು ಹಾಗೂ ಗದಗ ಘಟಕದಲ್ಲಿ 60 ರೋಲ್‌ಗಳನ್ನು ತಕ್ಷಣವೇ ಹಿಂಪಡೆಯಲಾಗಿದೆ. ಪೂರೈಕೆ ಮಾಡಿದ ಸಂಸ್ಥೆಯ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು; ಏಪ್ರಿಲ್‌ 19 ರಿಂದ ಮೂರು ದಿನ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement