10 ವ್ಯಕ್ತಿಗಳನ್ನು ಭಯೋತ್ಪಾದಕರು ಎಂದು ಘೋಷಿಸಿದ ಗೃಹ ಸಚಿವಾಲಯ

ನವದೆಹಲಿ: ಹಿಜ್ಬುಲ್ ಮುಜಾಹಿದ್ದೀನ್ (ಎಚ್‌ಎಂ), ಲಷ್ಕರ್-ಎ-ತೈಬಾ (ಎಲ್‌ಇಟಿ) ಮತ್ತು ಇತರ ನಿಷೇಧಿತ ಸಂಘಟನೆಗಳ ಒಟ್ಟು 10 ಸದಸ್ಯರನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (UAPA) ಅಡಿಯಲ್ಲಿ ಕೇಂದ್ರ ಗೃಹ ಸಚಿವಾಲಯ (ಎಂಎಚ್‌ಎ) ಭಯೋತ್ಪಾದಕರು ಎಂದು ಘೋಷಿಸಿದೆ.
ಭಯೋತ್ಪಾದಕರೆಂದು ಗುರುತಿಸಲ್ಪಟ್ಟವರಲ್ಲಿ ಪಾಕಿಸ್ತಾನಿ ಪ್ರಜೆ ಹಬೀಬುಲ್ಲಾ ಮಲಿಕ್ ಅಲಿಯಾಸ್ ಸಾಜಿದ್ ಜುಟ್, ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಿಂದ ಬಂದಿರುವ ಬಸಿತ್ ಅಹ್ಮದ್ ರೇಶಿ, ಪ್ರಸ್ತುತ ಪಾಕಿಸ್ತಾನದಲ್ಲಿ ನೆಲೆಸಿರುವ ಮ್ಮು ಮತ್ತು ಕಾಶ್ಮೀರದ ಸೋಪೋರ್‌ನ ಇಮ್ತಿಯಾಜ್ ಅಹ್ಮದ್ ಕಂಡೂ ಅಲಿಯಾಸ್ ಸಜಾದ್, ಪಾಕಿಸ್ತಾನದಲ್ಲಿ ನೆಲೆಸಿರುವ ಪಾಕಿಸ್ತಾನದ ಪೂಂಚ್‌ನ ಜಾಫರ್ ಇಕ್ಬಾಲ್ ಅಲಿಯಾಸ್ ಸಲೀಂ, ಪುಲ್ವಾಮಾದ ಶೇಖ್ ಜಮೀಲ್-ಉರ್-ರೆಹಮಾನ್ ಅಲಿಯಾಸ್ ಶೇಖ್ ಸಾಹಬ್ ಅವರನ್ನು ಭಯೋತ್ಪಾದಕರು ಎಂದು ಘೋಷಿಸಲಾಗಿದೆ.
ಅಲ್ಲದೆ, ಶ್ರೀನಗರ ಮೂಲದ ಬಿಲಾಲ್ ಅಹ್ಮದ್ ಬೇಗ್ ಅಲಿಯಾಸ್ ಬಾಬರ್, ಪ್ರಸ್ತುತ ಪಾಕಿಸ್ತಾನದಲ್ಲಿ ನೆಲೆಸಿದ್ದಾರೆ, ಪೂಂಚ್‌ನ ರಫೀಕ್ ನಾಯ್ ಅಲಿಯಾಸ್ ಸುಲ್ತಾನ್, ದೋಡಾದ ಇರ್ಷಾದ್ ಅಹ್ಮದ್ ಅಲಿಯಾಸ್ ಇದ್ರೀಸ್, ಕುಪ್ವಾರದ ಬಶೀರ್ ಅಹ್ಮದ್ ಪೀರ್ ಅಲಿಯಾಸ್ ಎಲ್ಮತಿಯಾಜ್ ಮತ್ತು ಬಹಮದ್ ಅಹ್ಮದ್ ಷೋಕತ್ಚಿ ಲಿಯಾಸ್ರಮ್ ಶೇಖ್ ಅವರನ್ನೂ ಭಯೋತ್ಪಾದಕ ಎಂದು ಹೆಸರಿಸಲಾಗಿದೆ.
ಮಂಗಳವಾರ ಹೊರಡಿಸಿದ ಪ್ರತ್ಯೇಕ ಅಧಿಸೂಚನೆಯಲ್ಲಿ, ಪೂಂಚ್‌ನಲ್ಲಿ ಭಾರತೀಯ ಸೈನಿಕರ ಮೇಲೆ ದಾಳಿ ನಡೆಸಿದ ಭಯೋತ್ಪಾದಕರ ಪ್ರಮುಖ ಹ್ಯಾಂಡ್ಲರ್ ಹಬೀಬುಲ್ಲಾ ಮಲಿಕ್ ಭಯೋತ್ಪಾದಕರಿಗೆ ಜಮ್ಮು ಪ್ರದೇಶದಲ್ಲಿ ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರ ಮತ್ತು ಸಂವಹನ ವ್ಯವಸ್ಥೆಗಳನ್ನು ಆಗಸದಿಂದ ಬೀಳಿಸುವಲ್ಲಿ ತೊಡಗಿಸಿಕೊಂಡಿದ್ದಾನೆ ಎಂದು ಗೃಹ ಸಚಿವಾಲಯ (MHA) ಹೇಳಿದೆ.
ಮಲಿಕ್ ಹಾರ್ಡ್‌ಕೋರ್ ಭಯೋತ್ಪಾದಕರ ವ್ಯಾಪಕ ಜಾಲವನ್ನು ಸಹ ರಚಿಸಿದ್ದಾನೆ ಮತ್ತು ಜೂನ್ 2013 ರಲ್ಲಿ ಶ್ರೀನಗರದ ಹೈದರ್‌ಪೋರಾದಲ್ಲಿ ಸೇನಾ ಸಿಬ್ಬಂದಿ ವಿರುದ್ಧ “ಫಿದಾಯೀನ್” (ಆತ್ಮಹತ್ಯಾ) ದಾಳಿ ಮತ್ತು ಸ್ಟೇಷನ್ ಹೌಸ್ ಆಫೀಸರ್ ಹತ್ಯೆ ಸೇರಿದಂತೆ ಕಾಶ್ಮೀರ ಕಣಿವೆಯಲ್ಲಿ ಅನೇಕ ಭಯೋತ್ಪಾದಕ ದಾಳಿಗಳ ಹಿಂದೆ ಮಾಸ್ಟರ್ ಮೈಂಡ್ ಆಗಿದ್ದ ಎಂದು ತಿಳಿಸಲಾಗಿದೆ. ಮಲಿಕ್ ಎಲ್ಇಟಿ ಮತ್ತು ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ನೊಂದಿಗೆ ಸಂಬಂಧ ಹೊಂದಿದ್ದಾರೆ.
ಬಸಿತ್ ಅಹ್ಮದ್ ರೇಶಿ ಹಿಜ್ಬುಲ್‌ ಮುಜಾಹಿದೀನ್‌ ಸದಸ್ಯರಾಗಿದ್ದಾನೆ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧ್ವಂಸಕ ಚಟುವಟಿಕೆಗಳು ಮತ್ತು ಗುರಿ ಹತ್ಯೆಗಳನ್ನು ಸಂಘಟಿಸುವಲ್ಲಿ ತೊಡಗಿಸಿಕೊಂಡಿದ್ದಾನೆ.
ಆತ ಆಗಸ್ಟ್ 18, 2015 ರಂದು ಸೋಪೋರ್‌ನ ತಾಜ್ಜೌರ್ ಶರೀಫ್ ಪೇತ್ ಅಸ್ತಾನ್‌ನಲ್ಲಿರುವ ಬಾಬಾ ಅಲಿ ರೈನಾ ದೇಗುಲದ ಪೊಲೀಸ್ ಗಾರ್ಡ್ ಪೋಸ್ಟ್ ಮೇಲೆ ಭಯೋತ್ಪಾದಕ ದಾಳಿ ಮಾಡಿದ್ದಾನೆ, ಇದರಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ನಾಗರಿಕರು ಸಾವನ್ನಪ್ಪಿದರು ಎಂದು MHA ತಿಳಿಸಿದೆ.ಆತ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ನಿರ್ವಹಿಸುವಲ್ಲಿ ತೊಡಗಿಸಿಕೊಂಡಿದ್ದಾನೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆಗೆ ಹಣಕಾಸು ಮತ್ತು ಯುವಕರನ್ನು ಸೇರಲು ಪ್ರೇರೇಪಿಸಿದ್ದಾನೆ ಎಂದು ಅದು ಹೇಳಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ರಾಷ್ಟ್ರದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಆದ್ಯತೆ ; ಮನಮೋಹನ ಸಿಂಗ್ ಹಳೆಯ ವೀಡಿಯೊ ಮೂಲಕ ಕಾಂಗ್ರೆಸ್ಸಿಗೆ ತಿರುಗೇಟು ನೀಡಿದ ಬಿಜೆಪಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement