ಎರಡು ದಿನಗಳ ವಿರಾಮದ ನಂತರ ಭಾರತ ಜೋಡೋ ಯಾತ್ರೆ ಪುನರಾರಂಭ: ಮಂಡ್ಯದಲ್ಲಿ ರಾಹುಲ್ ಜೊತೆ ಪಾದಯಾತ್ರೆಯಲ್ಲಿ ಪಾಲ್ಗೊಂಡ ಸೋನಿಯಾ ಗಾಂಧಿ

ಮಂಡ್ಯ: ಎರಡು ದಿನಗಳ ವಿರಾಮದ ನಂತರ ಗುರುವಾರ (ಅಕ್ಟೋಬರ್ 6) ಮಂಡ್ಯ ಜಿಲ್ಲೆಯಲ್ಲಿ ಭಾರತ್ ಜೋಡೋ ಯಾತ್ರೆ ಪುನರಾರಂಭಗೊಂಡಿತು. ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಪುತ್ರ ರಾಹುಲ್ ಗಾಂಧಿ ಅವರಿಗೆ ಸಾಥ್‌ ನೀಡಿದ್ದು, ಯಾತ್ರೆಯಲ್ಲಿ ಪಾಲ್ಗೊಂಡರು.
ಸೋನಿಯಾ ಗಾಂಧಿ ಅವರು ಜಕನಹಳ್ಳಿ ತಲುಪಿದರು ಹಾಗೂ ಭಾರತ ಜೋಡೋ ಯಾತ್ರೆ ಸೇರಿಕೊಂಡರು. ಅಲ್ಲಿಂದ ಪಾದಯಾತ್ರೆ ಪ್ರಾರಂಭವಾಗಿದ್ದು, ರಾಹುಲ್ ಗಾಂಧಿ ಜೊತೆಗೆ ಸೋನಿಯಾ ಗಾಂಧಿ ಸಹ ಪಾಲ್ಗೊಂಡಿದ್ದಾರೆ.
ಪಾಂಡವಪುರ ತಾಲೂಕಿನಿಂದ ಬೆಳಗ್ಗೆ 6:30ಕ್ಕೆ ಪುನರಾರಂಭಗೊಂಡ ಪಾದಯಾತ್ರೆ ಸಂಜೆ 7ಕ್ಕೆ ನಾಗಮಂಗಲ ತಾಲೂಕಿನಲ್ಲಿ ಕೊನೆಗೊಳ್ಳಲಿದೆ. ಪಾದಯಾತ್ರೆ ಬಳಿಕ ಬ್ರಹ್ಮದೇವರಹಳ್ಳಿ ಗ್ರಾಮದಲ್ಲಿ ಸಭೆ ನಡೆಯಲಿದೆ. ನಾಗಮಂಗಲ ತಾಲೂಕಿನ ಸರ್ಕಾರಿ ಆಯುರ್ವೇದ ಆಸ್ಪತ್ರೆ ಎದುರಿನ ಮಡಕೆ ಹೊಸೂರು ಗೇಟ್ ಬಳಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ. ಭಾರತ ಜೋಡೋ ಯಾತ್ರೆ ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾಯಿತು ಮತ್ತು ಕಳೆದ ಶುಕ್ರವಾರ ಪಕ್ಷದ ನಾಯಕ ರಾಹುಲ್ ಗಾಂಧಿ ಕೇರಳದ ಗಡಿಯಲ್ಲಿರುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಮೂಲಕ ಕರ್ನಾಟಕ ಪ್ರವೇಶಿಸಿದರು.

ಪ್ರಮುಖ ಸುದ್ದಿ :-   ಭಾರತದ ವಾಯುದಾಳಿಗೆ ಪಾಕಿಸ್ತಾನ ಸೇನೆ ತತ್ತರ : ನೂರ್ ಖಾನ್ ವಾಯುನೆಲೆ ಮೇಲಿನ ದಾಳಿ ನಂತರ ಬಂಕರ್‌ ನಲ್ಲಿ ಅಡಗಿದ ಪಾಕ್‌ ಸೇನಾ ಮುಖ್ಯಸ್ಥ..?!

ಮಂಡ್ಯ ಜಿಲ್ಲೆಯಲ್ಲಿ ನಡೆದ ಪಾದಯಾತ್ರೆಯ ವಿವರಗಳನ್ನು ಹಂಚಿಕೊಂಡ ಕಾಂಗ್ರೆಸ್, “ಭರವಸೆ, ಪ್ರೀತಿ ಮತ್ತು ವಿಜಯದ ಪಯಣ, ಇದು ಭಾರತ ಜೋಡೋ ಯಾತ್ರೆಯ ಸ್ಫೂರ್ತಿಯಾಗಿದೆ, ಇದು ಪಾಂಡವಪುರ ತಾಲೂಕಿನಿಂದ ಪುನರಾರಂಭಗೊಂಡು ಇಂದು ನಾಗಮಂಗಲ ತಾಲೂಕಿನಲ್ಲಿ ಕೊನೆಗೊಳ್ಳಲಿದೆ” ಎಂದು ಹೇಳಿದೆ.

ಯಾತ್ರೆಯು ಕರ್ನಾಟಕದಲ್ಲಿ 21 ದಿನಗಳ ಕಾಲ 511 ಕಿ.ಮೀ. ನಡೆಯಲಿದ್ದು, ಚಾಮರಾಜನಗರ, ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳನ್ನು ಒಳಗೊಂಡಿರುತ್ತದೆ.
ಕಬಿನಿ ಮೀಸಲು ಅರಣ್ಯ ಪ್ರದೇಶವಾದ ಕಡೆಗದ್ದೆಗೆ ಬುಧವಾರ ಕಾಂಗ್ರೆಸ್ ಮುಖಂಡರು ಭೇಟಿ ನೀಡಿದ್ದರು. ಹಿನ್ನೀರಿನ ಅರಣ್ಯ ಸಫಾರಿಗೂ ಹೋಗಿದ್ದರು. ಸ್ಥಳೀಯ ಶಾಸಕ ಅನಿಲ್ ಚಿಕ್ಕಮಾದು ಜೊತೆಗಿದ್ದರು.
ಕಾಂಗ್ರೆಸ್ ಭಾರತ ಜೋಡೋ ಯಾತ್ರೆ 150 ದಿನಗಳಲ್ಲಿ 3,570 ಕಿ.ಮೀ ಕ್ರಮಿಸಲಿದೆ. ಇದು ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಯಿತು ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ.

ಪ್ರಮುಖ ಸುದ್ದಿ :-   ಭಾರತ-ಪಾಕಿಸ್ತಾನ ಪರಮಾಣು ಯುದ್ಧ ನಿಲ್ಲಿಸಲು 'ಸಹಾಯ' ಮಾಡಿದ್ದೇವೆ...ಕದನ ವಿರಾಮಕ್ಕೆ 'ದೊಡ್ಡ ಕಾರಣ' ವ್ಯಾಪಾರ ಎಂದ ಅಮೆರಿಕ ಅಧ್ಯಕ್ಷ ಟ್ರಂಪ್‌

1 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement