ಹಾಸ್ಯನಟ ಪರಾಗ್ ಕನ್ಸಾರಾ ಇನ್ನಿಲ್ಲ

ಮುಂಬೈ: ಹಾಸ್ಯನಟ ರಾಜು ಶ್ರೀವಾಸ್ತವ  ಅವರು ನಿಧನರಾದ ಬೆನ್ನಿಗೇ ಮತ್ತೋರ್ವ ಹಾಸ್ಯ ನಟ ಪರಾಗ್ ಕನ್ಸಾರಾ ( 51) ನಿಧನರಾಗಿದ್ದಾರೆ.
ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್ ಷೋ ಮೂಲಕ ಜನರನ್ನು ನಕ್ಕು ನಗಿಸುತ್ತಿದ್ದ ಸ್ಯ್ಟಾಂಡ್ ಅಪ್ ಕಾಮಿಡಿಯನ್ ಪರಾಗ್ ಅವರು ಬುಧವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿಸಲಾಗಿದೆ.
ಈ ಕುರಿತು ಅವರ ಆಪ್ತ ಗೆಳೆಯ ಸುನೀಲ್ ಪಾಲ್ ಸುದ್ದಿ ಹಂಚಿಕೊಂಡಿದ್ದಾರೆ. ‘ಹಾಸ್ಯ ಮನರಂಜನೆಯ ವಲಯದಿಂದ ಮತ್ತೊಂದು ಆಘಾತಕಾರಿ ಹಾಗೂ ದುಃಖದ ಸುದ್ದಿ ಬಂದಿದೆ. ಲಾಫ್ಟರ್​ ಚಾಲೆಂಜ್​ನ ಕೋ-ಕಂಟೆಸ್ಟಂಟ್ ಕನ್ಸಾರಾ ಜಿ ವಿಧಿವಶರಾಗಿದ್ದಾರೆ. ರಿವರ್ಸ್​ ಥಿಂಕಿಂಗ್ ಕಾಮಿಡಿಯ ಮೂಲಕ ನಮ್ಮನ್ನೆಲ್ಲ ನಗಿಸಿ ನಲಿಸುತ್ತಿದ್ದ ಪರಾಗ್ ಇನ್ನಿಲ್ಲ. ಕಾಮಿಡಿಯ ಗಟ್ಟಿಯಾದ ಸ್ತಂಭಗಳು ಒಂದೊಂದಾಗಿ ನಮ್ಮನ್ನು ಬಿಟ್ಟು ಹೋಗುತ್ತಿವೆ’ ಎಂದು ಸುನೀಲ್​ ನೋವು ತೋಡಿಕೊಂಡಿದ್ದಾರೆ.

 

3 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement