ನವದೆಹಲಿ: ಲಾಲು ಯಾದವ್ ಅವರ ಪುತ್ರ ತೇಜಸ್ವಿ ಯಾದವ್ ಅವರು ಭಾನುವಾರ ದೆಹಲಿಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ತಮ್ಮ ಸಹೋದ್ಯೋಗಿಯೊಬ್ಬರು “ನಿಂದನೆ” ಮಾಡಿದ್ದಾರೆ ಎಂದು ಆರೋಪಿಸಿ ಸಭೆ ಬಿಟ್ಟು ಮಧ್ಯದಲ್ಲಿಯೇ ಹೊರಬಂದಿದ್ದಾರೆ.
ಅವರು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಸಭೆಯನ್ನು ಮಧ್ಯದಲ್ಲಿಯೇ ಬಿಟ್ಟು ಹೊರಬಂದ ಅವರು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ಯಾಮ್ ರಜಾಕ್ ವಿರುದ್ಧ ವಾಗ್ದಾಳಿ ನಡೆಸಿದರು.
ಸಭೆಯ ವೇಳಾಪಟ್ಟಿಯ ಬಗ್ಗೆ ಕೇಳಿದಾಗ ಶ್ಯಾಮ್ ರಜಾಕ್ ನನ್ನನ್ನು, ನನ್ನ ಆಪ್ತ ಸಹಾಯಕ ಮತ್ತು ನನ್ನ ಸಹೋದರಿಯನ್ನು ನಿಂದಿಸಿದ್ದಾರೆ. ನನ್ನ ಬಳಿ ಆಡಿಯೋ ರೆಕಾರ್ಡಿಂಗ್ ಇದೆ ಮತ್ತು ಅದನ್ನು ನನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತೇನೆ. ಸಂಘಟನೆಯಿಂದ ಅಂತಹ ಬಿಜೆಪಿ-ಆರ್‌ಎಸ್‌ಎಸ್ ಜನರನ್ನು ಹೊರಹಾಕಬೇಕು ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.
ತೇಜ್ ಪ್ರತಾಪ್ ಮಾಡಿರುವ ಆರೋಪಗಳು ನಿಜವೇ ಎಂದು ಪ್ರಶ್ನಿಸಿದಾಗ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಜಾಕ್ ಅವರು
“ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ. ಅವರು ಬಲಿಷ್ಠರು, ನಾನು ದುರ್ಬಲ ವ್ಯಕ್ತಿ ಮತ್ತು ಒತ್ತಡದಲ್ಲಿದ್ದೇನೆ ಎಂದಷ್ಟೇ ಹೇಳಿದರು.
ಎರಡು ದಿನಗಳ ಹಿಂದೆಯೇ ನನ್ನ ಸೋದರಳಿಯ ಮೃತಪಟ್ಟಿದ್ದರೂ ಪಕ್ಷದ ಕಾರ್ಯಕ್ರಮಕ್ಕೆ ಬಂದಿದ್ದೇನೆ, ಇಂದು ನಡೆದ ಘಟನೆಯಿಂದ ನನಗೆ ತುಂಬಾ ಬೇಸರವಾಗಿದೆ’ ಎಂದು ಹೇಳಿದರು.
ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ಪಕ್ಷದ ನಾಯಕರ ವಿರುದ್ಧ ಇಂತಹ ಆರೋಪ ಮಾಡಿರುವುದು ಇದೇ ಮೊದಲಲ್ಲ. ಕಳೆದ ವರ್ಷ, ತೇಜ್ ಪ್ರತಾಪ್ ಅವರು ಪಕ್ಷದ ಬಿಹಾರ ಅಧ್ಯಕ್ಷ ಜಗದಾನಂದ್ ಸಿಂಗ್ ಅವರನ್ನು ‘ಆರ್‌ಎಸ್‌ಎಸ್ ಏಜೆಂಟ್’ ಎಂದು ಕರೆದಿದ್ದರು. ಬಿ ತಮ್ಮ ತಂದೆ ಲಾಲು ಯಾದವ್ ಅವರನ್ನು ಭೇಟಿಯಾಗಲು ಎಂಎಲ್ ಸಿ ಸುನೀಲ್ ಸಿಂಗ್ ಬಿಡಲಿಲ್ಲ. ಅವರಿಂದ ನನಗೆ ಅವಮಾನವಾಗಿದೆ ಎಂದು ದೂರಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ