ಪಾಟ್ನಾ: ಚುನಾವಣಾ ತಂತ್ರಗಾರ ಪ್ರಶಾಂತ ಕಿಶೋರ್ ಅವರು ಜೆಡಿಯು ಅನ್ನು ಕಾಂಗ್ರೆಸ್ನೊಂದಿಗೆ ವಿಲೀನಗೊಳಿಸುವಂತೆ ಸಲಹೆ ನೀಡಿದ್ದರು ಎಂದು ಬಿಹಾರದ ಮುಖ್ಯಮಂತ್ರಿ ನಿತೀಶಕುಮಾರ್ ಶನಿವಾರ ಹೇಳಿದ್ದಾರೆ.
ಸಮಾಜವಾದಿ ಐಕಾನ್ ಜಯಪ್ರಕಾಶ್ ನಾರಾಯಣ್ ಅವರ ಜನ್ಮಸ್ಥಳ ಸಿತಾಬ್ ಡಿಯಾರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರ್, ಕಿಶೋರ್ ಬಿಜೆಪಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಅವರು ಇತ್ತೀಚೆಗೆ ನನ್ನನ್ನು ಭೇಟಿಯಾಗಲು ಬಂದಿದ್ದರು. ನಾನು ಅವರನ್ನು ಆಹ್ವಾನಿಸಲಿಲ್ಲ. ಅವರು ತುಂಬಾ ಮಾತನಾಡುತ್ತಾರೆ ಆದರೆ ಒಮ್ಮೆ ಅವರು ನನ್ನ ಪಕ್ಷ ಜೆಡಿಯುವನ್ನು ಕಾಂಗ್ರೆಸ್ನೊಂದಿಗೆ ವಿಲೀನಗೊಳಿಸುವಂತೆ ನನ್ನನ್ನು ಕೇಳಿದ್ದರು ಎಂಬ ಅಂಶವನ್ನು ಅವರು ಈಗ ಮರೆಮಾಚುತ್ತಾರೆ” ಎಂದು ನಿತೀಸಕುಮಾರ್ ಹೇಳಿದರು.
ಜೆಡಿಯು ನೇತೃತ್ವ ವಹಿಸಲು ಕುಮಾರ್ ಇತ್ತೀಚೆಗೆ ಮಾಡಿದ ಮನವಿಯನ್ನು ತಿರಸ್ಕರಿಸಿದ್ದೇನೆ ಎಂಬ ಪ್ರಶಾಂತ ಕಿಶೋರ್ ಅವರ ಹೇಳಿಕೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು. ಅವರು ಏನು ಬೇಕಾದರೂ ಮಾತನಾಡಲಿ, ಅವರು ಏನು ಹೇಳಿದರೂ ಅರ್ಥವಿಲ್ಲ, ನಾಲ್ಕೈದು ವರ್ಷಗಳ ಹಿಂದೆ ಕಾಂಗ್ರೆಸ್ನಲ್ಲಿ ವಿಲೀನ ಮಾಡುವುದಾಗಿ ಹೇಳಿದ್ದರು. ಈಗ ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ ಎಂದು ಕುಮಾರ್ ಆರೋಪಿಸಿದರು,
ಸುಮಾರು 10-15 ದಿನಗಳ ಹಿಂದೆ ನಿತೀಶಕುಮಾರ್ ತನ್ನನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಜೆಡಿಯು ನಾಯಕತ್ವ ವಹಿಸುವಂತೆ ಕೇಳಿಕೊಂಡಿದ್ದರು ಎಂದು ಪ್ರಶಾಂತ ಕಿಶೋರ್ ಮಂಗಳವಾರ ಹೇಳಿಕೊಂಡಿದ್ದರು.
ಅದು ಸಾಧ್ಯವಿಲ್ಲ ಎಂದು ನಾನು ಹೇಳಿದೆ. ಯಾವುದೇ ಹುದ್ದೆಗೆ ಪ್ರತಿಯಾಗಿ ನಾನು ಮಾಡಿದ ಬದ್ಧತೆ ಬಿಡಲು ಸಾಧ್ಯವಿಲ್ಲ” ಎಂದು ಕಿಶೋರ್ ಹೇಳಿದರು.
ರಾಜಕೀಯ ಸಲಹಾ ಸಂಸ್ಥೆ I-PAC ಯ ಸಂಸ್ಥಾಪಕರಾದ ಪ್ರಶಾಂತ ಕಿಶೋರ್ ಅವರನ್ನು 2018 ರಲ್ಲಿ JD(U) ಗೆ ಕುಮಾರ್ ಸೇರ್ಪಡೆಗೊಳಿಸಿದರು ಮತ್ತು ಕೆಲವೇ ವಾರಗಳಲ್ಲಿ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನಕ್ಕೆ ಏರಿಸಲ್ಪಟ್ಟರು. ಆದಾಗ್ಯೂ, ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್ಸಿ) ಕುರಿತು ನಿತೀಶಕುಮಾರ್ ಅವರೊಂದಿಗಿನ ಜಗಳವು ಒಂದೆರಡು ವರ್ಷಗಳಲ್ಲಿ ಅವರನ್ನು ಪಕ್ಷದಿಂದ ಹೊರಹಾಕಲು ಕಾರಣವಾಯಿತು. ಮೇ ತಿಂಗಳಲ್ಲಿ, ಅವರು ‘ಜನ್ ಸೂರಜ್’ ವೇದಿಕೆ ಘೋಷಿಸಿದರು ಮತ್ತು ಪ್ರಸ್ತುತ 3,500-ಕಿಮೀ-ಉದ್ದದ ಯಾತ್ರೆಯಲ್ಲಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ