ಮೈಸೂರು: ಮನೆಯಲ್ಲಿದ್ದ ಶೂ ಒಳಗೆ ಹೆಡೆಬಿಚ್ಚಿ ನಿಂತ ನಾಗರಹಾವು..!-ವಿಡಿಯೋ ವೈರಲ್

ಮೈಸೂರು: ಮನೆಯೊಳಗೆ ಹಾವುಗಳು ಬಂದು ಅಡಗಿಕೊಳ್ಳುವುದನ್ನು ನೋಡಿದ್ದೇವೆ. ಆದರೆ ನಾವು ದಿನನಿತ್ಯ ಧರಿಸುವ ಹಾಕುವ ಶೂ ಒಳಗೆ ಸೇರಿಕೊಂಡರೆ ಏನು ಮಾಡುವುದು..? ಇಂತಹದ್ದೇ ಒಂದು ಘಟನೆ ಮೈಸೂರಿನ ಮಹದೇವಪುರ ಗ್ರಾಮದಲ್ಲಿ ವರದಿಯಾಗಿದೆ. ಮನೆಯಲ್ಲಿಟ್ಟ ಶೂ ಒಳಗೆ ನಾಗರಹಾವೊಂದು ಸೇರಿಕೊಂಡು ಆತಂಕ ತಂದೊಡ್ಡಿತ್ತು.

ಮನೆಯ ಹೊರಗೆ ಶೂಗಳನ್ನು ಇಟ್ಟಿದ್ದ ವ್ಯಕ್ತಿ ಶೂ ಹಾಕುಲು ಬಂದಾಗ, ಹೆಡೆ ಬಿಚ್ಚಿ ನಿಂತ ಹಾವನ್ನು ನೋಡಿ ಒಮ್ಮೆಗೆ ದಂಗಾಗಿ ಹೋಗಿದ್ದಾನೆ. ಉದ್ದದ ನಾಗರಹಾವೊಂದು ಅವಿತುಕೊಂಡು ಕೂತಿದೆ. ತಕ್ಷಣ ಸರಳಿನಿಂದ ಹಾವನ್ನು ದೂರ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಹಾವು ಹೆಡೆಬಿಚ್ಚಿ ಬುಸ್‌ ಎಂದಿದೆ. ನಂತರ ನಿಧಾನವಾಗಿ ಹಾವನ್ನು ಹೊರ ತೆಗೆದು ಬಾಕ್ಸ್‌ ನೊಳಗೆ ಹಾಕಿದ್ದಾರೆ.

ಈ ರೀತಿ ಮನೆಯಲ್ಲಿ ನಾಗರ ಹಾವು ಸಭೆ ಸೇರಿದ್ದರಿಂದ ಆ ಪ್ರದೇಶದಲ್ಲಿ ಸಂಚಲನ ಮೂಡಿದೆ. ನಾಗರಹಾವಿನ ಭಯ ಜನರ ಮನಸ್ಸಿನಲ್ಲಿ ಇನ್ನೂ ಇದೆ ಎಂದು ಜನರು ಹೇಳುತ್ತಾರೆ.
ಹಾವನ್ನು ಶೂನಿಂದ ತೆಗೆದು ಬಾಕ್ಸ್‌ ನೊಳಗೆ ಹಾಕುವ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. 5 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಪ್ರಮುಖ ಸುದ್ದಿ :-   ಕುಣಿಗಲ್ : ರಾಮನವಮಿ ಪಾನಕ ಸೇವಿಸಿದ 42 ಮಂದಿ ಅಸ್ವಸ್ಥ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement