ಭಟ್ಕಳ: ಯಕ್ಷಗಾನ ವೇಷ ಧರಿಸಿ ಹೆಜ್ಜೆ ಹಾಕಿ ಸಂಭ್ರಮಿಸಿದ ಆರೋಗ್ಯ ಸಚಿವ ಡಾ.ಸುಧಾಕರ

ಭಟ್ಕಳ: ಆರೋಗ್ಯ ಸಚಿವ ಡಾ.ಕೆ.ಸುಧಾಕರ ಅವರು ಕೆಲಕಾಲ ಯಕ್ಷಗಾನ ವೇಷಧಾರಿಯಾಗಿ ಸಂಭ್ರಮಿಸಿದ್ದಾರೆ.
ಉತ್ತರ ಕನ್ನಡದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೌಲಭ್ಯ ಕಲ್ಪಿಸುವ ಸಂಬಂಧ ಈ ಬಗ್ಗೆ ಪರಿಶೀಲಿಸಲು ಜಿಲ್ಲೆಗೆ ಆರೋಗ್ಯ ಸಚಿವ ಡಾ.ಸುಧಾಕರ ಮಂಗಳವಾರ ಆಗಮಿಸಿದ್ದರು.
ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಕುಮಟಾ, ಭಟ್ಕಳ‌ ಆಸ್ಪತ್ರೆಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳ ಸಭೆ ನಡೆಸಿದ್ದರು. ರಾತ್ರಿ ಭಟ್ಕಳ‌ ಶಾಸಕ ಸುನೀಲ‌ ನಾಯ್ಕ ಅವರ ಜಾಲಿಯಲ್ಲಿರುವ ಮನೆಯಲ್ಲಿ ವಾಸ್ತವ್ಯ ಮಾಡಿದ್ದರು.
ಈ ವೇಳೆ ಶಾಸಕರ ಮನೆಯಲ್ಲಿ ಯಕ್ಷಗಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಗ ಸಚಿವರು ಯಕ್ಷಗಾನದ ವಸ್ತ್ರ, ಪಗಡೆ ಹಾಗೂ ಆಭರಣ ತೊಟ್ಟು ಯಕ್ಷಗಾನ ವೇಷಧಾರಿಯಾಗಿ ಸಂಭ್ರಮಿಸಿದರು. ನಂತರ ಕಲಾವಿದರ ಜೊತೆಗೆ ಹೆಜ್ಜೆ ಹಾಕಲು ಪ್ರಯತ್ನಿಸಿದರು. ನಂತರ ಯಕ್ಷಗಾನ ನೋಡಿ ಖುಷಿಪಟ್ಟರು.
ಸಚಿವರಿಗೆ ಯಕ್ಷಗಾನದ ಬಗ್ಗೆ ಆಸಕ್ತಿ ಇರುವುದನ್ನು ಅರಿತಿದ್ದ ಭಟ್ಕಳ ಶಾಸಕ ಸುನಿಲ ನಾಯ್ಕ ಅವರು ಸಚಿವರ ವಾಸ್ತವ್ಯದ ವೇಳೆ ಯಕ್ಷಗಾನ ಕಾರ್ಯಕ್ರಮ ಏರ್ಪಡಿಸಿದ್ದರು. ಬೆಳಿಗ್ಗೆಯಿಂದ ಜಿಲ್ಲೆಯಲ್ಲಿ ಪ್ರವಾಸದಲ್ಲಿದ್ದ ಸಚಿವ ಡಾ.ಸುಧಾಕರ ರಾತ್ರಿ ಯಕ್ಷಗಾನ ನೋಡಿ ಖುಷಿಪಟ್ಟರು.

ಪ್ರಮುಖ ಸುದ್ದಿ :-   ಮಾರ್ಚ್‌ 31ರೊಳಗೆ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಬದಲಾವಣೆ ಮಾಡಿ : ಬಿಜೆಪಿ ಹೈಕಮಾಂಡಿಗೆ ಮಠಾಧೀಶರ ಗಡುವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement