ನಾಳೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರಲಿದೆ ವಿಶ್ವದ ಅತಿ ದೊಡ್ಡ ವಿಮಾನ A380..!

ಬೆಂಗಳೂರು: ನಾಳೆ (ಅಕ್ಟೋಬರ್‌ 14) ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶ್ವದ ಅತಿ ದೊಡ್ಡ ಪ್ರಯಾಣಿಕ ವಿಮಾನ ಬಂದಿಳಿಯಲಿದೆ. ಈ ಹಿಂದೆ ಹೇಳಿದ್ದಕ್ಕಿಂತ 2 ವಾರಗಳ ಮೊದಲೇ ಈ ವಿಮಾನವು ಬೆಂಗಳೂರಿಗೆ ಬರುತ್ತಿದೆ.
ಎಮಿರೇಟ್ಸ್ ಏರ್‌ಲೈನ್ಸ್‌ನ ವಿಮಾನ EK562 ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶುಕ್ರವಾರ ಬೆಳಗ್ಗೆ 10 ಗಂಟೆಗೆ (ಸ್ಥಳೀಯ ಕಾಲಮಾನ) ಹೊರಲಿದ್ದು ಸುಮಾರಿ ಮಧ್ಯಾಹ್ನ 3:40ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದೆ. ನಂತರ ಬೆಂಗಳೂರಿನಿಂದ ಸಂಜೆ 6.40ಕ್ಕೆ ಟೇಕ್ ಆಫ್ ಆಗಲಿರುವ ವಿಮಾನವು ರಾತ್ರಿ 9 ಗಂಟೆಗೆ ದುಬೈ ತಲುಪಲಿದೆ. ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ಈ ವಿಶ್ವದ ಅತಿದೊಡ್ಡ ವಾಣಿಜ್ಯ ವಿಮಾನದ ಸ್ವಾಗತದೊಂದಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಈ ಜಂಬೋ ಜೆಟ್‌ ವಿಮಾನವು ಬೆಂಗಳೂರಿಗೆ ಅಕ್ಟೋಬರ್‌ 31ರಂದು ಬರಲಿದೆ ಎಂದು ಎಮಿರೇಟ್ಸ್ ಏರ್‌ಲೈನ್ಸ್ ಈ ಮೊದಲು ಹೇಳಿತ್ತು. ಅಕ್ಟೋಬರ್ 30ರಂದು ಸ್ಥಳೀಯ ಸಮಯ ರಾತ್ರಿ 9.25ಕ್ಕೆ ದುಬೈನಿಂದ ಹೊರಟು ಅಕ್ಟೋಬರ್‌ 31ರಂದು ಬೆಳಗ್ಗೆ 2:30ಕ್ಕೆ ಬೆಂಗಳೂರಿನಲ್ಲಿ ಇಳಿಯಲಿದೆ ಎಂದು ತಿಳಿಸಲಾಗಿತ್ತು. ಆದರೆ ಈಗ ಎರಡು ವಾರಗಳ ವಾರ ಮುಂಚಿತವಾಗಿಯೇ ವಿಶ್ವದ ಅತಿದೊಡ್ಡ ವಿಮಾನವು ಬೆಂಗಳೂರಿಗೆ ಬಂದಿಳಿಯುತ್ತಿದೆ.
ದೆಹಲಿ ಮತ್ತು ಮುಂಬೈ ನಂತರ ಬೆಂಗಳೂರು ಜಂಬೋ ಜೆಟ್ ಹಾರಾಟ ನಡೆಯಲಿರುವ 3ನೇ ಭಾರತೀಯ ನಗರವಾಗಿದೆ.
ವರದಿಗಳ ಪ್ರಕಾರ A380 Airbus ಪೂರ್ಣ ಉದ್ದದ ಡಬಲ್ ಡೆಕ್ಕರ್ ವಿಮಾನವಾಗಿದ್ದು, 500ಕ್ಕಿಂತ ಹೆಚ್ಚು ಆಸನ ಸಾಮರ್ಥ್ಯ ಹೊಂದಿದೆ. ಬೆಂಗಳೂರು-ದುಬೈ ಮಾರ್ಗದಲ್ಲಿ ದೈನಂದಿನ A380 ವಿಮಾನಗಳು ಪ್ರಯಾಣಿಕರಿಗೆ ಬ್ಯುಸಿನೆಸ್‌, ಎಕಾನಮಿ ಮತ್ತು ಫಸ್ಟ್‌ ಕ್ಲಾಸ್‌ಗಳಲ್ಲಿ ಆಸನ ಸೌಲಭ್ಯಗಳನ್ನು ನೀಡುತ್ತವೆ. A380 ಆಸನಗಳು ಬಿಸಿನೆಸ್ ಕ್ಲಾಸ್ ಸಂಪೂರ್ಣವಾಗಿ ಫ್ಲಾಟ್ ಸೀಟ್‌ ಹೊಂದಿರುತ್ತದೆ.ಎಕಾನಮಿ ಕ್ಲಾಸ್‌ನಲ್ಲಿ ಹೆಚ್ಚುವರಿ ಲೆಗ್‌ರೂಮ್‌ನೊಂದಿಗೆ ವಿಶಾಲವಾಗಿರುತ್ತವೆ. ಮತ್ತು ಫರ್ಸ್‌ ಕ್ಲಾಸ್‌ನಲ್ಲಿ ಖಾಸಗಿ ಸೂಟ್‌ಗಳು, ಶವರ್ ಸ್ಪಾ ಸೌಲಭ್ಯ ಇರುತ್ತದೆ ಎಂದು ಏರ್‌ಲೈನ್ಸ್ ಸಂಸ್ಥೆ ತಿಳಿಸಿದೆ.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement