ಮದುವೆಯ ಬಗ್ಗೆ ವಿವರಿಸಲು ಕೇಳಿದ್ದ ಪ್ರಶ್ನೆಗೆ ಅದ್ಭುತ ಉತ್ತರ ಬರೆದ ವಿದ್ಯಾರ್ಥಿ: ನಾನ್ಸೆನ್ಸ್‌ ಎಂದು ಬರೆದು ಶೂನ್ಯ ಅಂಕ ನೀಡಿದ ಮೇಷ್ಟ್ರು, ಓದಿ ಹೊಟ್ಟೆ ಹಿಡಿದು ನಕ್ಕ ಜನ….!

ಮದುವೆಯ ಮೇಲೆ ಹಾಸ್ಯಗಳು ಮತ್ತು ವಿಡಂಬನೆಗಳು ಸಾಮಾನ್ಯ ವಿದ್ಯಮಾನವಾಗಿದ್ದರೂ, ಶಾಲಾ ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ಮದುವೆ ಬಗ್ಗೆ ಬರೆದ ವ್ಯಾಖ್ಯಾನವು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.
ತನ್ನ ಸಮಾಜ ವಿಜ್ಞಾನ ಪರೀಕ್ಷೆಯಲ್ಲಿ ‘ಮದುವೆ’ಯನ್ನು ವಿವರಿಸಲು ಪ್ರಯತ್ನಿಸುತ್ತಿರುವ ವಿದ್ಯಾರ್ಥಿಯ ಉತ್ತರ ಪತ್ರಿಕೆಯು ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದನ್ನು ಓದಿದವರು ಬೆಚ್ಚಿ ಬೀಳುವುದು ಮಾತ್ರವಲ್ಲದೆ ಹೊಟ್ಟೆಹಿಡಿದು ನಗುತ್ತಾರೆ. ಏಕೆಂದರೆ, ವಿದ್ಯಾರ್ಥಿಯೊಬ್ಬ ಮದುವೆಯ ಬಗ್ಗೆ ಅಂತಹದ್ದೊಂದು ಸೂಪರ್‌ ವ್ಯಾಖ್ಯಾನ ಬರೆದಿದ್ದಾನೆ.
ಸಮಾಜ ವಿಜ್ಞಾನ ಪರೀಕ್ಷೆಯಲ್ಲಿ ಸಮಯದಲ್ಲಿ, ಶಿಕ್ಷಕರು ಪ್ರಶ್ನೆಯಲ್ಲಿ ಮದುವೆಯ ಬಗ್ಗೆ ಬರೆಯಲು ಹೇಳಿದ್ದಾರೆ. ಇದು ಒಟ್ಟು 10 ಅಂಕಗಳ ಪ್ರಶ್ನೆಯಾಗಿತ್ತು. ಆದರೆ, ವಿದ್ಯಾರ್ಥಿಯೊಬ್ಬ ಮದುವೆಗೆ ಇಂಥದ್ದೊಂದು ವ್ಯಾಖ್ಯಾನ ಬರೆದಿದ್ದು, ನೋಡಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ.. ವಿದ್ಯಾರ್ಥಿ ಮದುವೆಯ ಬಗ್ಗೆ ವಿವರಣೆಯನ್ನು ಬಹಳ ವಿಚಿತ್ರ ರೀತಿಯಲ್ಲಿ ಬರೆದಿದ್ದಾನೆ.

ಮದುವೆಯ ಬಗ್ಗೆ ವಿದ್ಯಾರ್ಥಿ ಬರೆದ ಉತ್ತರದಲ್ಲಿ , “ಹುಡುಗಿಯ ಪೋಷಕರು ಹುಡುಗಿಗೆ ‘ಈಗ ನೀನು ದೊಡ್ಡ ಮಹಿಳೆಯಾಗಿರುವೆ. ನಾವು ನಿನಗೆ ಮತ್ತೆ ಆಹಾರ ನೀಡಲು ಸಾಧ್ಯವಿಲ್ಲ, ಪೋಷಿಸಲು ಸಾಧ್ಯವಿಲ್ಲ. ಹೋಗಿ ನಿನಗೆ ಆಹಾರವನ್ನು ನೀಡಲು ಪ್ರಾರಂಭಿಸುವ ಬೇರೆ ಪುರುಷನನ್ನು ನೋಡಿಕೊ ಎಂದು ಹೇಳುತ್ತಾರೆ, ಆಗ ಹುಡುಗಿ ‘ದಯವಿಟ್ಟು ನೀನು ದೊಡ್ಡ ಮನುಷ್ಯನಾಗಿರುವಿ ಎಂಬುದನ್ನು ಅರ್ಥ ಮಾಡಿಕೊ ಮತ್ತು ದಯವಿಟ್ಟು ಬೇಗ ಮದುವೆಯಾಗು’ ಎಂದು ಕೂಗಿ ಹೇಳಿ ಪೋಷಕರಿಂದ ಒತ್ತಾಯಿಸಲ್ಪಟ್ಟ ಯುವಕನನ್ನು ಭೇಟಿಯಾಗುತ್ತಾಳೆ…! ಇಬ್ಬರು ತಮ್ಮನ್ನು ತಾವು ಪರೀಕ್ಷೆ ಮಾಡಿಕೊಳ್ಳುತ್ತಾರೆ. ಮತ್ತು ಸಂತೋಷಪಡುತ್ತಾರೆ. ಬಳಿಕ ಇಬ್ಬರು ಒಟ್ಟಿಗೆ ವಾಸಿಸುವ ನಿರ್ಣಯ ಕೈಗೊಳ್ಳುತ್ತಾರೆ ಮತ್ತು ನಂತರ ನಾನ್ಸೆನ್ಸ್ ಕೆಲಸದಲ್ಲಿ ತೊಡಗುತ್ತಾರೆ ಎಂದು ವಿದ್ಯಾರ್ಥಿ ಬರೆದಿದ್ದಾನೆ.

ಪ್ರಮುಖ ಸುದ್ದಿ :-   ವೀಡಿಯೊ..| ಭಾರತದ ಆಪರೇಶನ್‌ ಸಿಂಧೂರ ದಾಳಿ ನಂತ್ರ 2019ರ ʼಪುಲ್ವಾಮಾ ಭಯೋತ್ಪಾದಕ ದಾಳಿʼಯಲ್ಲಿ ತನ್ನ ಪಾತ್ರವಿದೆ ಎಂದು ಒಪ್ಪಿಕೊಂಡ ಪಾಕಿಸ್ತಾನ..!

ವಿದ್ಯಾರ್ಥಿಯ ಈ ಉತ್ತರ ಓದಿ ಬೆಚ್ಚಿ ಬಿದ್ದ ಶಿಕ್ಷಕರು ‘ನಾನ್ಸೆನ್ಸ್’ ಎಂದು ಶರಾ ಬರೆದು 10ಕ್ಕೆ ಶೂನ್ಯ ಅಂಕಗಳನ್ನು ನೀಡಿದ್ದಾರೆ.
ಆ ವಿದ್ಯಾರ್ಥಿಯ ಮದುವೆ ಬಗೆಗಿನ ವಿವರಣೆಯು ನೆಟಿಜನ್‌ಗಳು ನೆಲದ ಬಿದ್ದು ನಗುವಂತೆ ಮಾಡಿದೆ ಮತ್ತು ಈ ಲೇಖನ ಶೀಘ್ರದಲ್ಲೇ ವೈರಲ್ ಆಗಿದೆ. ಇದಕ್ಕೆ ಅನೇಕರು ಕಾಮೆಂಟ್‌ ಮಾಡಿದ್ದು, ಕೆಲವರು ಇದು ಈವರೆಗೆ ತಾವು ಕಂಡ ‘ಅತ್ಯುತ್ತಮ ವಿವರಣೆ’ ಎಂದೂ ಬರೆದಿದ್ದಾರೆ.

4.8 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement