ನವದೆಹಲಿ: ದೀಪಾವಳಿಯ ನಂತರ ನವೆಂಬರ್ 10ರಿಂದ ಭಾರತದಲ್ಲಿ ಐದನೇ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಆರಂಭಗೊಳ್ಳಲಿದ್ದು, ಇದು ಬೆಂಗಳೂರು-ಚೆನ್ನೈ ಮಧ್ಯೆ ಸಂಚರಿಸಲಿದೆ.
5ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನವೆಂಬರ್ 10 ರಂದು ಚೆನ್ನೈ, ಬೆಂಗಳೂರು ಮತ್ತು ಮೈಸೂರಿಗೆ ಸಂಪರ್ಕ ಕಲ್ಪಿಸಲಿದೆ.
ಚೆನ್ನೈನಿಂದ ಬೆಂಗಳೂರಿನ ಮೂಲಕ ಮೈಸೂರಿಗೆ ಸಂಚರಿಸುವ ರೈಲು ನವೆಂಬರ್ 5 ರಂದು ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಯಿಂದ ಪ್ರಾಯೋಗಿಕ ಚಾಲನೆ ನಡೆಸಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದು ನವೆಂಬರ್ 10 ರಿಂದ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಸಿದ್ಧವಾಗಿದೆ” ಎಂದು ಅವರು ಹೇಳಿದರು.ಇಲ್ಲಿಯವರೆಗೆ ದೇಶದಲ್ಲಿ ನಾಲ್ಕು ವಂದೇ ಭಾರತ್ ರೈಲುಗಳು ಓಡುತ್ತಿವೆ.
ಗುರುವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ಹಿಮಾಚಲ ಪ್ರದೇಶದ ಉನಾದಲ್ಲಿ ನಾಲ್ಕನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಫ್ಲ್ಯಾಗ್ ಆಫ್ ಮಾಡಿದ್ದಾರೆ. ಇದಾದ ನಂತರ ಹಿಮಾಚಲ ಹಾಗೂ ಹರ್ಯಾಣದ ಮುಖ್ಯಮಂತ್ರಿಗಳಾದ ಜೈರಾಮ್ ಠಾಕೂರ್ ಮತ್ತು ಮನೋಹರ್ ಲಾಲ್ ಖಟ್ಕರ್ ಈ ಹೈಸ್ಪೀಡ್ ರೈಲಿನಲ್ಲಿ ಪ್ರಯಾಣಿಸಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ