ದೆಹಲಿ ಗಲಭೆ: ಎಎಪಿ ಮಾಜಿ ಕೌನ್ಸಿಲರ್ ತಾಹಿರ್ ಹುಸೇನ್, ಇತರ ಐವರ ವಿರುದ್ಧ ಪಿತೂರಿ, ಗಲಭೆ ಆರೋಪ ಹೊರಿಸಲು ಕೋರ್ಟ್‌ ಆದೇಶ

ನವದೆಹಲಿ: ಈಶಾನ್ಯ ದೆಹಲಿಯಲ್ಲಿ 2020ರಲ್ಲಿ ನಡೆದಿದ್ದ ಗಲಭೆಗೆ ಸಂಬಂಧಿಸಿ ಎಎಪಿಯ ಪಾಲಿಕೆ ಮಾಜಿ ಸದಸ್ಯ ತಾಹಿರ್‌ ಹುಸೇನ್‌ ಹಾಗೂ ಇತರ ಐವರ ವಿರುದ್ಧ ಕೊಲೆ ಯತ್ನ, ಗಲಭೆಗೆ ಸಂಚು ರೂಪಿಸಿದ್ದಕ್ಕೆ ಸಂಬಂಧಿಸಿದ ಆರೋಪಗಳನ್ನು ಹೊರಿಸುವಂತೆ ಇಲ್ಲಿನ ಕೋರ್ಟ್‌ ಆದೇಶಿಸಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಪುಲಸ್ತ್ಯ ಪ್ರಮಾಚಲಾ, ‘ಆರೋಪಿಗಳೆಲ್ಲರೂ ಹಿಂದೂಗಳನ್ನು ಗುರಿಯಾಗಿಸಿ ಗಲಭೆ ನಡೆಸಿದ್ದಾರೆ. ಅವರ ಕೃತ್ಯಗಳು ಹಿಂದೂ ಮತ್ತು ಮುಸ್ಲಿಮರ ನಡುವಿನ ಸೌಹಾರ್ದಕ್ಕೆ ಧಕ್ಕೆ ತರುವುದಾಗಿತ್ತು ಎಂದು ಹೇಳಿದ್ದಾರೆ.

ಈ ಗುಂಪು ನಿರಂತರವಾಗಿ ಹಿಂದೂಗಳು ಮತ್ತು ಹಿಂದೂಗಳ ಮನೆಗಳ ಮೇಲೆ ಗುಂಡು ಹಾರಿಸುವುದು, ಕಲ್ಲು ತೂರಾಟ ಮತ್ತು ಪೆಟ್ರೋಲ್ ಬಾಂಬ್‌ಗಳನ್ನು ಎಸೆಯುವಲ್ಲಿ ತೊಡಗಿಸಿಕೊಂಡಿತ್ತು ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಹಿಂದೂಗಳು ಮತ್ತು ಅವರ ಆಸ್ತಿಗೆ ಹಾನಿ ಮಾಡುವುದು ಅವರ ಉದ್ದೇಶವಾಗಿತ್ತು ಎಂಬುದನ್ನು ಜನಸಮೂಹದ ಈ ಕೃತ್ಯಗಳು ಸ್ಪಷ್ಟಪಡಿಸುತ್ತವೆ. ಈ ಜನಸಮೂಹದ ಇಂತಹ ಉದ್ದೇಶವನ್ನು ಆರೋಪಿಗಳು ಮರೆತಿದ್ದಾರೆ ಎಂದು ಹೇಳಲಾಗುವುದಿಲ್ಲ ಎಂದು ಆದೇಶ ಹೇಳಿದೆ.
ತಾಹಿರ್‌ ಅಲ್ಲದೇ, ಆರೋಪಿಗಳಾದ ತನ್ವೀರ್‌ ಮಲಿಕ್, ಗುಲ್ಫಾಮ್‌, ನಜೀಮ್, ಕಾಸೀಂ ಹಾಗೂ ಶಾ ಆಲಂ ಅವರ ವಿರುದ್ಧ ಆರೋಪ ಹೊರಿಸುವಂತೆ ನ್ಯಾಯಾಧೀಶ ಪುಲಸ್ತ್ಯ ಆದೇಶಿಸಿದರು.
2020ರ ಫೆಬ್ರುವರಿ 25ರಂದು ಚಾಂದ್‌ಬಾಗ್‌ ಬಳಿ ಗುಂಪೊಂದು ತಮ್ಮ ಮೇಲೆ ದಾಳಿ ನಡೆಸಿತ್ತು ಎಂದು ಅಜಯ್‌ ಝಾ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಲಾಗಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ ; ಮತ್ತೊಂದು ಕ್ಷೇತ್ರದಿಂದಲೂ ರಾಹುಲ್‌ ಗಾಂಧಿ ಸ್ಪರ್ಧೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement