ಬಳ್ಳಾರಿ: ಭಾರತ್ ಜೋಡೋ ಯಾತ್ರೆ ವೇಳೆ 4 ಮಂದಿಗೆ ವಿದ್ಯುತ್ ಸ್ಪರ್ಶ, ಆಸ್ಪತ್ರೆಗೆ ದಾಖಲು

ಬಳ್ಳಾರಿ: ಭಾನುವಾರ ಬಳ್ಳಾರಿ ಬಳಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯ ವೇಳೆ ವಿದ್ಯುತ್ ಸ್ಪರ್ಶದಿಂದ ನಾಲ್ವರು ಗಾಯಗೊಂಡ ಘಟನೆ ವರದಿಯಾಗಿದೆ. ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದವರೊಬ್ಬರು ಕಾಂಗ್ರೆಸ್ ಬಾವುಟವಿರುವ ಕಬ್ಬಿಣದ ರಾಡ್ ಹಿಡಿದಿದ್ದರು. ಮೋಕಾ ಗ್ರಾಮದ ಸಮೀಪ ಅದು ವಿದ್ಯುತ್‌ ತಂತಿಗೆ ತಗುಲಿ ವಿದ್ಯುತ್‌ ಪ್ರವಹಿಸಿದೆ. ಅವರು ಇತರ ಮೂವರನ್ನು ಸ್ಪರ್ಶಿಸಿದ್ದರಿಂದ ಅವರಲ್ಲಿಯೂ ವಿದ್ಯುತ್‌ ಪ್ರವಹಿಸಿದೆ. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಅವರ ಪ್ರಕಾರ, “ಸಂತ್ರಸ್ತರಿಗೆ ಸ್ಥಳದಲ್ಲಿ ಆಂಬ್ಯುಲೆನ್ಸ್‌ನಲ್ಲಿ ವೈದ್ಯರು ಚಿಕಿತ್ಸೆ ನೀಡಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ರಾಹುಲ್‌ ಗಾಂಧಿ ಸಮೀಪವೇ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಭಾನುವಾರ ಭಾರತ್ ಜೋಡೋ ಯಾತ್ರೆಯು ಬಳ್ಳಾರಿಯ ಸಂಗನಕಲ್ ಗ್ರಾಮದಿಂದ ಬೆಳಿಗ್ಗೆ ಪ್ರಾರಂಭವಾಯಿತು. ಭಾರತ್ ಜೋಡೋ ಯಾತ್ರೆ ಶನಿವಾರದಂದು ಒಂದು ಮೈಲಿಗಲ್ಲನ್ನು ತಲುಪಿತು, ಇದುವರೆಗಿನ ಪ್ರಯಾಣದ ದಕ್ಷಿಣ ಲೆಗ್‌ನಲ್ಲಿ 1000 ಕಿಲೋಮೀಟರ್‌ಗಳನ್ನು ಭಾರತ ಜೋಡೋ ಯಾತ್ರೆ ಕ್ರಮಿಸಿದೆ. 3570 ಕಿಮೀ ಯಾತ್ರೆಯು ಕಾಂಗ್ರೆಸ್ ಮತ್ತು ಇಡೀ ದೇಶಕ್ಕೆ ಐತಿಹಾಸಿಕ ಘಟನೆಯಾಗಿದೆ. ಇದು ಭಾರತದ ಇತಿಹಾಸದಲ್ಲಿ ಯಾವುದೇ ಭಾರತೀಯರು ಕಾಲ್ನಡಿಗೆಯಲ್ಲಿ ನಡೆಸಿದ ಅತಿ ಉದ್ದದ ಪಾದಯಾತ್ರೆಯಾಗಿದೆ ಯಾತ್ರೆಯ ಅಂತಿಮ ಗಮ್ಯಸ್ಥಾನವು ಜಮ್ಮು ಮತ್ತು ಕಾಶ್ಮೀರವಾಗಿದೆ

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಕರ್ನಾಟಕದ ಮೊದಲ ಹಂತದಲ್ಲಿ ಶೇ. 69.23 ಮತದಾನ ; 14 ಕ್ಷೇತ್ರಗಳ ಮತದಾನದ ಪ್ರಮಾಣದ ವಿವರ...

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement