ಮುರುಘಾ ಶರಣರ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ

ಚಿತ್ರದುರ್ಗ: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ಬಂಧನದಲ್ಲಿರುವ ಶಿವಮೂರ್ತಿ ಮುರುಘಾ ಶರಣರ ನ್ಯಾಯಾಂಗ ಬಂಧನದ ಅವಧಿಯನ್ನು 14 ದಿನಗಳ ಅವಧಿಗೆ ವಿಸ್ತರಿಸಿ ಚತ್ರದುರ್ಗದ 2ನೇ ಹೆಚ್ಚುವರಿ ಸೆಷನ್ಸ್​ ಕೋರ್ಟ್​ ಆದೇಶ ನೀಡಿದೆ.
ನ್ಯಾಯಾಂಗ ಬಂಧನದ ಅವಧಿಯನ್ನು ನವೆಂಬರ್‌ 3ರ ವರೆಗೆ ವಿಸ್ತರಿಸಲಾಗಿದೆ. ಮುರುಘಾ ಶರಣರೊಂದಿಗೆ ಮತ್ತೋರ್ವ ಆರೋಪಿ (ಎ2) ಮಹಿಳಾ ವಾರ್ಡನ್​ ನ್ಯಾಯಾಂಗ ಬಂಧನವನ್ನೂ ಕೋರ್ಟ್​ ವಿಸ್ತರಿಸಿದೆ. ವಿಚಾರಣೆ ವೇಳೆ ಶಿವಮೂರ್ತಿ ಶರಣರು ಇಂದು ಮಾಸ್ಕ್ ಇಲ್ಲದೆ ಕೋರ್ಟ್​​ಗೆ ಹಾಜರಾಗಿದ್ದರು.

ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಆರೋಪ ಎದುರಿಸುತ್ತಿರುವ ಮುರುಘಾ ಶ್ರೀ ವಿರುದ್ಧದ ಫೋಕ್ಸೊ ಪ್ರಕರಣ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದ ಮತ್ತೊಬ್ಬಳು ಬಾಲಕಿ ಮತ್ತು ಆಕೆಯ ತಾಯಿಯ ಹೇಳಿಕೆಯನ್ನು ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಸಿಆರ್​ಪಿಸಿ 161ರ ಅಡಿಯಲ್ಲಿ ನಗರದ ಒಡನಾಡಿ ಸಂಸ್ಥೆಯಲ್ಲಿಯೇ ಅಕ್ಟೋಬರ್‌ 17ರ ಸಂಜೆ ದಾಖಲಿಸಿಕೊಂಡಿದ್ದಾರೆ.

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement