ಬೆಂಗಳೂರು: ಮಾರ್ಚ್ 2023ರಲ್ಲಿ ನಡೆಯಲಿರುವಂತ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ (Second PUC Annual Examination 2023 ) ತಾತ್ಕಾಲಿಕ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದೆ.
ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಈ ಸಂಬಂಧ ಮಾಹಿತಿ ಬಿಡುಗಡೆ ಮಾಡಿದ್ದಾರೆ. 2023ರಲ್ಲಿ ನಡೆಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ಮಾರ್ಚ್ 10ರಿಂದ ಮಾರ್ಚ್ 29ರ ವರೆಗೆ (10-03-2023 ರಿಂದ 29-03-2023ರ ವರೆಗೆ) ನಡೆಸಲು ತೀರ್ಮಾನಿಸಿದ್ದು, ಈ ಸಂಬಂಧ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಈ ವೇಳಾಪಟ್ಟಿ ಬಗ್ಗೆ ಆಕ್ಷೇಪಣೆಗಳಿದ್ದರೆ ನವೆಂಬರ್ 21ರ (21-11-2022) ಒಳಗಾಗಿ [email protected]ನಲ್ಲಿ ಸಲ್ಲಿಸುವಂತೆ ಕೋರಿದ್ದಾರೆ.
ದ್ವಿತೀಯ ಪಿಯುಸಿ ತಾತ್ಕಾಲಿಕ ವೇಳಾಪಟ್ಟಿ
10-03-2023 – ಕನ್ನಡ, ಅರೇಬಿಕ್
11-03-2023 – ಗಣಿತ, ಶಿಕ್ಷಣ ಶಾಸ್ತ್ರ
13-03-2023 – ಅರ್ಥಶಾಸ್ತ್ರ
14-03-2023 – ರಸಾಯನಶಾಸ್ತ್ರ, ಮೂಲ ಗಣಿತ, ಮನಶಾಸ್ತ್ರ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ
15-03-2023 – ತಮಿಳು, ತೆಲುಗು, ಮಲಯಾಳಂ, ಮರಾಠಿ, ಸಂಸ್ಕೃತ, ಉರ್ದು, ಫ್ರೆಂಚ್
16-03-2023 – ತರ್ಕ ಶಾಸ್ತ್ರ, ವ್ಯವಹಾರ ಅಧ್ಯಯನ
17-03-2023 – ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ನೆಸ್
18-03-2023 – ಭೂಗೋಳ ಶಾಸ್ತ್ರ, ಜೀವ ಶಾಸ್ತ್ರ
20-03-2023 – ಇತಿಹಾಸ, ಭೌತ ಶಾಸ್ತ್ರ
21-03-2023 – ಹಿಂದಿ
23-03-2023 – ಇಂಗ್ಲಿಷ್
25-03-2023 – ರಾಜ್ಯ ಶಾಸ್ತ್ರ, ಸಂಖ್ಯಾ ಶಾಸ್ತ್ರ
27-03-2023 – ಐಚ್ಛಿಕ ಕನ್ನಡ, ಲೆಕ್ಕ ಶಾಸ್ತ್ರ, ಭೂಗರ್ಭ ಶಾಸ್ತ್ರ, ಗೃಹ ವಿಜ್ಞಾನ
29-03-2023 – ಸಮಾಜ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ


ನಿಮ್ಮ ಕಾಮೆಂಟ್ ಬರೆಯಿರಿ