ಪಕ್ಷ ಉಳಿಸಲು ಬ್ರಿಟನ್‌ ಪ್ರಧಾನಿ ಹುದ್ದೆಗೆ ಸ್ಪರ್ಧೆ ಮಾಡದಂತೆ ರಿಷಿ ಸುನಕ್ ಅವರನ್ನು ಕೇಳಿಕೊಳ್ಳುತ್ತಿರುವ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ : ವರದಿ

ಲಂಡನ್‌: ರಿಷಿ ಸುನಕ್ ಅವರು ಮುಂದಿನ ಬ್ರಿಟನ್‌ ಪ್ರಧಾನಿಯಾಗಲು ಮುಂಚೂಣಿಯಲ್ಲಿರಬಹುದು, ಆದರೆ ಲಿಜ್ ಸ್ಟ್ರಸ್ ಬದಲಿಗೆ ತಾವು ಮರಳಿ ಬ್ರಿಟನ್‌ ಪ್ರಧಾನಿಯಾಗಲು ಬೋರಿಸ್ ಜಾನ್ಸನ್ ಅವರು ರಿಷಿ ಸುನಕ್‌ ಅವರನ್ನು ಸ್ಪರ್ಧೆಯಿಂದ ಹೊರಗುಳಿಯುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಬ್ರಿಟಿಷ್ ಮಾಧ್ಯಮಗಳ ವರದಿಗಳು ಹೇಳುತ್ತವೆ.
ಕನ್ಸರ್ವೇಟಿವ್ ಪಕ್ಷದ ನಾಯಕತ್ವದ ಓಟದಲ್ಲಿ ರಿಷಿ ಸುನಕ್ ಅವರನ್ನು ಸೋಲಿಸಿದ ನಂತರ ಲಿಜ್ ಟ್ರಸ್ ಆರು ವಾರಗಳ ಹಿಂದೆ ಜಾನ್ಸನ್ ಬದಲಿಗೆ ಬ್ರಿಟನ್‌ ಪ್ರಧಾನಿಯಾದರು. ಬುಕ್‌ಮೇಕರ್‌ಗಳ ಪ್ರಕಾರ ಮಾಜಿ ಹಣಕಾಸು ಸಚಿವರಾದ ಸುನಕ್ ಅವರು ಈಗ ತಾರ್ಕಿಕವಾಗಿ ಮುಂದಿನ ಆಯ್ಕೆಯಾಗಿದ್ದಾರೆ,
ಆದರೆ ಬೋರಿಸ್ ಜಾನ್ಸನ್ ಅವರು ಕನ್ಸರ್ವೇಟಿವ್ ಸಂಸದರಿಗೆ ಡಿಸೆಂಬರ್ 2024 ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಸೋಲನ್ನು ಎದುರಿಸುವುದರಿಂದ ಪಕ್ಷವನ್ನು ತಾವು ಮಾತ್ರ ಉಳಿಸಬಹುದು ಎಂಬ ಅಂಶವನ್ನು ಮನವರಿಕೆ ಮಾಡುತ್ತಿದ್ದಾರೆ ಎಂದು ಲಂಡನ್‌ನ ದಿ ಟೆಲಿಗ್ರಾಫ್‌ ವರದಿ ಮಾಡಿದೆ. ಇದರ ಬೆನ್ನಿಗೇ ಸಂಸತ್ತಿನಲ್ಲಿ ಬಹುಮತ ಹೊಂದಿರುವ ಆಡಳಿತ ಪಕ್ಷದ ಜನಪ್ರಿಯತೆಯ ಕುಸಿತವನ್ನು ಉಲ್ಲೇಖಿಸಿ ವಿರೋಧ ಪಕ್ಷಗಳು ಕ್ಷಿಪ್ರ ಚುನಾವಣೆಗೆ ಒತ್ತಾಯಿಸುತ್ತಿವೆ.

ಪ್ರಮುಖ ಸುದ್ದಿ :-   'ಅನುಮಾನ ಆಧರಿಸಿ ಇವಿಎಂ ವಿರುದ್ಧ ನಿರ್ದೇಶನ ನೀಡಲು ಸಾಧ್ಯವೇ? : ಸುಪ್ರೀಂ ಕೋರ್ಟ್ ಪ್ರಶ್ನೆ

ಬೋರಿಸ್ ಜಾನ್ಸನ್ ಈಗ “ರಿಷಿ ಸುನಕ್ ಅವರನ್ನು ತಲುಪಲು ಮತ್ತು ಮತ್ತೆ ಒಟ್ಟಿಗೆ ಸೇರುವಂತೆ ಒತ್ತಾಯಿಸುತ್ತಿದ್ದಾರೆ” ಎಂದು ಟೆಲಿಗ್ರಾಫ್ ವರದಿ ಹೇಳಿದೆ. ಪಕ್ಷದ ನಾಯಕತ್ವದ ಚುನಾವಣೆ ಮುಂದಿನ ವಾರ ನಡೆಯಲಿದ್ದು, ಶುಕ್ರವಾರದೊಳಗೆ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ.
ಏರುತ್ತಿರುವ ಬೆಲೆಗಳಿಂದ ಮತ್ತು ತೆರಿಗೆಗಳನ್ನು ಕಡಿತಗೊಳಿಸಲು ವಿಫಲವಾದ ನಂತರ ಮೂಲೆಗೆ ತಳ್ಳಲ್ಪಟ್ಟ ಲಿಜ್ ಟ್ರಸ್ ಬ್ರಿಟಿಷ್ ಇತಿಹಾಸದಲ್ಲಿ ಇಲ್ಲಿಯವರೆಗೆ, ದೇಶದ ಅತ್ಯಂತ ಕಡಿಮೆ ಅವಧಿಗೆ ಸೇವೆ ಸಲ್ಲಿಸಿದ ಪ್ರಧಾನ ಮಂತ್ರಿಯಾಗಿ ಕೆಳಗಿಳಿಯುತ್ತಾರೆ – ಅವರು ಅಧಿಕಾರ ವಹಿಸಿಕೊಂಡ 45ನೇ ದಿನದಂದು ರಾಜೀನಾಮೆ ನೀಡಿದರು ಮತ್ತು ಇನ್ನೊಂದು ವಾರದಲ್ಲಿ ಅವರು ಬದಲಿ ವ್ಯವಸ್ಥೆಯಾದ ನಂತರ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ.

ಪ್ರಧಾನಿ ಪಟ್ಟಕ್ಕೆ ಸ್ಪರ್ಧಿಗಳಾದ ರಿಷಿ ಸುನಕ್ ಮತ್ತು ಬೋರಿಸ್ ಜಾನ್ಸನ್ ಅವರಲ್ಲದೆ, ಹೌಸ್ ಆಫ್ ಕಾಮನ್ಸ್ ನಾಯಕರಾದ ಪೆನ್ನಿ ಮೊರ್ಡಾಂಟ್ ಸ್ಪರ್ಧೆಯಲ್ಲಿ ಉಳಿದಿದ್ದಾರೆ.
ಬೋರಿಸ್ ಜಾನ್ಸನ್ ಅವರು ಹಗರಣಗಳ ಸರಣಿಯ ಮೊದಲು ಮೂರು ವರ್ಷಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು,ನಂತರ ಹಗರಣಗಳು ಅವರ ಉಚ್ಚಾಟನೆಗೆ ಕಾರಣವಾಯಿತು. ಆದರೆ ಕೆಲವು ಸಮೀಕ್ಷೆಗಳ ಪ್ರಕಾರ ಪ್ರಸ್ತುತ ಅವರ ಬಗ್ಗೆ ವ್ಯಾಪಕ ಮತದಾರರು ಕಡಿಮೆ ಒಲವು ಹೊಂದಿದ್ದರೂ, ಅವರು ಕನ್ಸರ್ವೇಟಿವ್ ಸಂಸದರು ಮತ್ತು ಪಕ್ಷದ ಒಂದು ವಿಭಾಗದಲ್ಲಿ ಜನಪ್ರಿಯರಾಗಿದ್ದಾರೆ.
58 ವರ್ಷ ವಯಸ್ಸಿನ ಜಾನ್ಸನ್‌ ಲಿಜ್ ಟ್ರಸ್‌ಗಿಂತ ಹೆಚ್ಚು ಜನಪ್ರಿಯರಾಗಿದ್ದಾರೆ ಎಂದು ಪ್ರಮುಖ ಏಜೆನ್ಸಿಯ ಇತ್ತೀಚಿನ ಸಮೀಕ್ಷೆಯು ತೋರಿಸಿದೆ – ಆದರೂ ಹೆಚ್ಚಿನ ಪ್ರತಿಕ್ರಿಯಿಸಿದವರು ಅವನ ಬಗ್ಗೆ ಪ್ರತಿಕೂಲ ಅಭಿಪ್ರಾಯವನ್ನೇ ಹೊಂದಿದ್ದರು.ಆದರೆ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಹಣಕಾಸು ಸಚಿವರಾಗಿದ್ದ ಉದ್ಯಮಿ ರಿಷಿ ಸುನಕ್ ಮೇಲೆ ಎಲ್ಲರ ಕಣ್ಣುಗಳಿವೆ.
ರಿಷಿ ಸುನಕ್‌ ಭಾರತೀಯ ಮೂಲದ ಪೋಷಕರ ಮಗ, ಅವರು ಭಾರತೀಯ ತಂತ್ರಜ್ಞಾನದ ಉತ್ತರಾಧಿಕಾರಿ ಅಕ್ಷತಾ ಮೂರ್ತಿ ಅವರನ್ನು ವಿವಾಹವಾದರು, ಅವರ ತಂದೆ ಎನ್ಆರ್ ನಾರಾಯಣ ಮೂರ್ತಿ ಅವರು ಇನ್ಫೋಸಿಸ್ ಸ್ಥಾಪಕರಲ್ಲಿ ಒಬ್ಬರು.

ಪ್ರಮುಖ ಸುದ್ದಿ :-   ಚುನಾವಣಾ ಭಾಷಣ ಮಾಡುವ ವೇಳೆ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement