ಮುಂದಿನ ಮೂರು ತಿಂಗಳು ಭಾರೀ ಗಂಡಾಂತರವಿದೆ: ಕೋಡಿಮಠ ಶ್ರೀಗಳ ಭವಿಷ್ಯ

ಹಾಸನ: ಮುಂದಿನ ಮೂರು ತಿಂಗಳಲ್ಲಿ ಭಾರತ ಸೇರಿದಂತೆ ಜಗತ್ತಿಗೆ ಭಾರಿ ಕಂಟಕ ಎದುರಾಗಲಿದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಜಿಲ್ಲೆಯ ಅರಸೀಕೆರೆ ತಾಲೂಕಿನ ಹಾರನಳ್ಳಿಯಲ್ಲಿರುವ ಕೋಡಿ ಮಠದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಧ್ಯಬಾಗಿಲಿನಿಂದ ಪ್ರಾರಂಭವಾಗಿ ಕಾರ್ತಿಕ ಮಾರ್ಗಶಿರ, ಜನವರಿ ಪ್ರಥಮದಲ್ಲಿಯೂ ಲೋಕಕ್ಕೆ ಕಂಟಕವಿದೆ. ಪ್ರಾಕೃತಿಕವಾಗಿ, ಪ್ರಾದೇಶಿಕವಾಗಿ, ಇರಬಹುದು, ಭೂಕಂಟಕ ಇರಬಹುದು, ರಾಜಬೀದಿ ಇರಬಹುದು, ಜನ ಜನರ ಮೇಲೆ ನಿಯಂತ್ರಣ ಕಳೆದುಕೊಂಡು ಹುಚ್ಚರಾಗಬಹುದು, ದೇಹ ಅಶಕ್ತತೆಯಿಂದ ದಾರಿಯಲ್ಲಿ ಬಿದ್ದು ಸಾಯಬಹುದು ಎಂದು ಹೇಳಿದರು.
ಯುದ್ಧ ಭೀತಿ ಹೆಚ್ಚಾಗಲಿದೆ. ಬಾಂಬ್‍ಗಳು, ಭೂಕಂಪ ಹೆಚ್ಚಾಗಲಿದೆ, ಜಾಗತಿಕ ಅಶಾಂತಿ, ರಾಷ್ಟ್ರೀಯವಾಗಿ ಅಶಾಂತಿ ಹೆಚ್ಚಾಗಲಿದೆ. ಈ ಎರಡು, ಮೂರು ತಿಂಗಳಲ್ಲಿ ಮನುಷ್ಯರು ದೈವ ಭಕ್ತಿಯಿಂದ, ನಂಬಿಕೆಯಿಂದ ಇರುವುದು ಬಹಳ ಮುಖ್ಯ ಎಂದು ಹೇಳಿದರು.

4.3 / 5. 3

ನಿಮ್ಮ ಕಾಮೆಂಟ್ ಬರೆಯಿರಿ

advertisement