ಎಸ್‌ಸಿ, ಎಸ್‌ಟಿ ಸಮುದಾಯದ ಮೀಸಲಾತಿ ಹೆಚ್ಚಳ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ

ಬೆಂಗಳೂರು: ಕರ್ನಾಟಕದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ (SC/ST Reservation) ಹೆಚ್ಚಳ ಮಾಡುವ ಸುಗ್ರೀವಾಜ್ಞೆಗೆ ರಾಜ್ಯಪಾಲರು ಭಾನುವಾರ ಅನುಮೋದನೆ ನೀಡಿದ್ದಾರೆ.
ಈ ಕುರಿತು ಅಧಿಕೃತ ವಿಶೇಷ ರಾಜ್ಯಪತ್ರ (ಗೆಜೆಟ್‌) ಪ್ರಕಟಿಸಲಾಗಿದೆ. ಇನ್ನು ಮುಂದೆ ಪರಿಶಿಷ್ಟರ ಜಾತಿಯ ಮೀಸಲಾತಿ ಪ್ರಮಾಣ ಶೇ. 15 ರಿಂದ 17ಕ್ಕೆ ಏರಲಿದ್ದು, ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಶೇ. 3 ರಿಂದ 7ಕ್ಕೆ ಹೆಚ್ಚಳವಾಗಲಿದೆ.
ನಮ್ಮ ಸರ್ಕಾರವು ಮೀಸಲಾತಿ ಪ್ರಮಾಣ ಹೆಚ್ಚಿಸಿ ಬದ್ಧತೆಯಿಂದ ನಡೆದುಕೊಂಡಿದೆ. ಈ ಮೂಲಕ ಅನುಸೂಚಿತ ಜಾತಿ ಮತ್ತು ಪಂಗಡಗಳ ಜನಾಂಗಕ್ಕೆ ನಮ್ಮ ಸರ್ಕಾರ ದೀಪಾವಳಿ ಕೊಡುಗೆ ಕೊಟ್ಟಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರಾಜ್ಯ ಸರಕಾರದ ಸುಗ್ರೀವಾಜ್ಞೆಗೆ ಅಂಕಿತ ಹಾಕಿರುವ ರಾಜ್ಯಪಾಲರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಈ ಆಧ್ಯಾದೇಶಕ್ಕೆ ವಿಧಾನ ಮಂಡಲದ ಎರಡೂ ಸದನದಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.
ಪರಿಶಿಷ್ಟರ ಮೀಸಲು ಪ್ರಮಾಣವನ್ನು ಶೇ.18 ರಿಂದ ಶೇ.24ಕ್ಕೆ ಹೆಚ್ಚಿಸುವ ಸಂಬಂಧ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು.
103 ಉಪ ಜಾತಿ ಒಳಗೊಂಡ ಪರಿಶಿಷ್ಟರ ಜಾತಿಯ ಮೀಸಲು ಪ್ರಮಾಣವನ್ನು ಶೇ.15 ರಿಂದ ಶೇ.17ಕ್ಕೆ ಹಾಗೂ 56 ಉಪ ಪಂಗಡ ಒಳಗೊಂಡ ಪರಿಶಿಷ್ಟ ಪಂಗಡದ ಮೀಸಲನ್ನು ಶೇ.3 ರಿಂದ ಶೇ.7ಕ್ಕೆ ಹೆಚ್ಚಿಸುವ ಮಹತ್ವದ ನಿರ್ಧಾರ ರಾಜ್ಯ ಸಂಪುಟ ಸಭೆ ಕೈಗೊಂಡಿತ್ತು.
ಆದರೆ ಮೀಸಲು ಹೆಚ್ಚಳಕ್ಕೆ ಕಾನೂನು ಬದ್ಧತೆ ಬರಬೇಕೆಂದರೆ ಅದು ಸಂವಿಧಾನದ ಶೆಡ್ಯೂಲ್‌-9ಕ್ಕೆ ಸೇರಿಸಬೇಕು. ಆದರೆ ಈ ಪ್ರಕ್ರಿಯೆ ಸುದೀರ್ಘ ಸಮಯ ಹಿಡಿಯಲಿದೆ ಎಂಬ ಕಾರಣಕ್ಕಾಗಿ, ಶೆಡ್ಯೂಲ್‌-9ರಲ್ಲಿ ಸೇರ್ಪಡೆಗೊಳಿಸುವ ತೀರ್ಮಾನ ಮುಂದೂಡಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಶ್ರೀರಂಗಪಟ್ಟಣ : ಫೋಟೊಕ್ಕೆ ಪೋಸ್ ನೀಡುವಾಗ ಸೇತುವೆಯಿಂದ ನದಿಗೆ ಬಿದ್ದು ಕೊಚ್ಚಿ ಹೋದ ವ್ಯಕ್ತಿ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement