ಸಂಬಂಧಿ ಯುವತಿ ಮೇಲೆ ನಿರಂತರ ಅತ್ಯಾಚಾರ ಆರೋಪ: ಸರ್ಕಲ್‌ ಇನ್ಸ್‌ಪೆಕ್ಟರ್‌ ಅಮಾನತು

ಚಿತ್ರದುರ್ಗ: ತಮ್ಮ ಸಂಬಂಧಿ ಯುವತಿಯೊಬ್ಬಳ ಮೇಲೆ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ಚಳ್ಳಕೆರೆ ಪೊಲೀಸ್‌ ಇನ್ಸ್‌ಪೆಕ್ಟರ್‌ ಜಿ.ಬಿ. ಉಮೇಶ ಅವರನ್ನು ದಾವಣಗೆರೆ ವಲಯ ಐಜಿಪಿ ತ್ಯಾಗರಾಜನ್‌ ಅಮಾನತು ಮಾಡಿದ್ದಾರೆ. ನಿವೇಶನ ಸಂಬಂಧ ಸಮಸ್ಯೆ ಪರಿಹಿಸುವಂತೆ ಯುವತಿ ಕುಟುಂಬದವರು ಉಮೇಶ ಅವರ ಬಳಿ ಸಹಾಯ ಕೇಳಿದ್ದರು. ಆದರೆ ಉಮೇಶ್‌ ಸಹಾಯ ಮಾಡುವ ಬದಲು ಯುವತಿಯ ಸಲುಗೆ ಬೆಳೆಸಿಕೊಂಡು ನಿರಂತರ ಅತ್ಯಾಚಾರ ನಡೆಸಿದ್ದ ಎಂದು ಆರೋಪಿಸಲಾಗಿದೆ.
ಎರಡು ಮದುವೆ ಆಗಿದ್ದರೂ ಯುವತಿಯೋರ್ವಳ ಮೇಲೆ ಅತ್ಯಾಚಾರ ನಡೆಸಿರುವ ಚಳ್ಳಕೆರೆ ಠಾಣೆ ಸಿಪಿಐ ಜಿ.ಬಿ.ಉಮೇಶ್ ವಿರುದ್ಧ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ಪ್ರಕರಣ ದಾಖಲಿಸಲಾಗಿದೆ. ಅತ್ಯಾಚಾರಕ್ಕೊಳಗಾದ ಯುವತಿಗೆ ಸೋದರ ಸಂಬಂಧಿಯಾಗಿರುವ ಉಮೇಶ್, ಐದು ವರ್ಷಗಳ ಹಿಂದೆ ದಾವಣಗೆರೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದಾಗ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ನಿವೇಶನ ನೆಪದಲ್ಲಿ ಯುವತಿಯನ್ನು ಕರೆಸಿಕೊಂಡು ನಿರಂತರವಾಗಿ ಅತ್ಯಾಚಾರವೆಸಗಿದ್ದು, ಯುವತಿ ನಿರಾಕರಿಸಿದಾಗ ಮಾನಹಾನಿ ಬೆದರಿಕೆ ಹಾಕಿ ಅತ್ಯಾಚಾರವೆಸಗಿದ್ದಾನೆ, ಯುವತಿಗೆ ಐದು ಬಾರಿ ಗರ್ಭಪಾತ ಮಾಡಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
ಎರಡು ಮದುವೆ ಆಗಿರುವ ಸಿಪಿಐ ಉಮೇಶ್‌ಗೆ ಮೂರನೇ ಹೆಂಡತಿಯಾಗಿರುವಂತೆ ಯುವತಿಗೆ ಒತ್ತಡ ಹಾಕಿದ್ದಾನೆ. ಮದುವೆ ಆಗಲು ನಿರಾಕರಿಸಿದ್ದ ಯುವತಿಗೆ ಬೆದರಿಕೆ ಹಾಕಿದ್ದಾನೆ. ದಾವಣಗೆರೆ ನಿವೇಶನ ಸಿಗದಂತೆ ಮಾಡುತ್ತೇನೆ. ನಿಮ್ಮ ತಂದೆ ತಾಯಿಯ ಬದುಕು ಬೀದಿಗೆ ಬರುವಂತೆ ಮಾಡ್ತೇನೆ ಎಂದು ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
ಸಿಪಿಐ ಉಮೇಶ್ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿರುವ ಚಳ್ಳಕೆರೆ ಮಹಿಳಾ ಠಾಣೆ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು: ರೈಲಿಗೆ ಸಿಲುಕಿ ಮೂವರು ಸಾವು

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement