ಶಿವಮೊಗ್ಗ: ಸೋಮವಾರ ತಡರಾತ್ರಿ ಹಲ್ಲೆ ಪ್ರಕರಣ, ಮೂವರು ಆರೋಪಿಗಳು ವಶಕ್ಕೆ

ಶಿವಮೊಗ್ಗ: ನಗರದಲ್ಲಿ ಯುವಕನ ಮೇಲೆ ಇಟ್ಟಿಗೆ, ಕಲ್ಲಿನಿಂದ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಫೌಝಾನ್ ಆಲಿಯಾಸ್​​ ಮಾರ್ಕೆಟ್ ಫೌಝಾನ್, ಅಸ್ಗರ್​, ಫರಾಜ್​ ಬಂಧಿತರು. ಈ ಹಿಂದೆ ಹಲವು ಪ್ರಕರಣಗಳಲ್ಲಿ ಈ ಮೂವರು ಆರೋಪಿಗಳು ಭಾಗಿಯಾಗಿದ್ದರು ಎಂದು ಶಿವಮೊಗ್ಗ ಎಸ್​​ಪಿ ಜಿ.ಕೆ.ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ. ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಮೂರು ಬೈಕ್​ಲ್ಲಿ ಐವರು ಸೀಗೆಹಟ್ಟಿಗೆ ಬಂದಿದ್ದಾರೆ. ಕ್ಲಾರ್ಕ್ ಪೇಟೆಯಲ್ಲಿ ಪ್ರವೀಣ್ ಎಂಬವರ ಜೊತೆ ಚಕಮಕಿ ಉಂಟಾಗಿದೆ. ನಂತರ ಇಬ್ಬರನ್ನು ಅಲ್ಲಿಯೇ ಬಿಟ್ಟು ಬಂಧಿತ ಆರೋಪಿಗಳು ಭರ್ಮಪ್ಪನಗರಕ್ಕೆ ಹೋಗಿ. ಪ್ರಕಾಶ ಎಂಬವರಿಗೆ ಇಟ್ಟಿಗೆ, ಕಲ್ಲುಗಳಿಂದ ಹಲ್ಲೆ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಪ್ರವೀಣ, ಪ್ರಕಾಶ್ ಮಾರ್ಕೆಟ್ ಫೌಝಾನ್ ಮಧ್ಯೆ ಮಾತಿನ ಚಕಮಕಿಯಾಗಿತ್ತು. ಇದಕ್ಕೆ ಪ್ರತಿಕಾರವಾಗಿ ಹಲ್ಲೆ ಮಾಡಲು ಆರೋಪಿಗಳು ಬಂದಿದ್ದರು ಎಂದು ಅವರು ಹೇಳಿದ್ದಾರೆ.

ಸದ್ಯ ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರಕಾಶ್ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕುರಿತು ಮಾಹಿತಿ ನೀಡಿರುವ ಎಸ್ಪಿ ಮಿಥುನ್, ಯುವಕನಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಚೇತರಿಸಿಕೊಂಡಿದ್ದಾನೆ. ಬೈಕ್ ನಲ್ಲಿ ಬಂದ ಆರೋಪಿಗಳು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಘೋಷಣೆಗಳನ್ನ ಕೂಗಿ ವಾಪಸ್ ಮರಳುವಾಗ ಯುವಕನಿಗೆ ಕಲ್ಲಿನಿಂದ ಹೊಡೆದು ತೆರಳಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ರಸ್ತೆ ಬೇಕಂದ್ರೆ ಗ್ಯಾರಂಟಿ ಯೋಜನೆಗಳು ಬಂದ್ ಆಗ್ತವೆ : ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಹೇಳಿಕೆ ಚರ್ಚೆಗೆ ಗ್ರಾಸ

ಹಿಂದೂ ಕಾರ್ಯಕರ್ತ ಮೃತ ಹರ್ಷನ ಕುಟುಂಬಸ್ಥರಿಗೆ ಅನ್ಯಕೋಮಿನ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದರು. ಅಲ್ಲದೆ ಒಬ್ಬ ಯುವಕನ ಮೇಲೆಯೂ ಕಲ್ಲಿನಿಂದ ಹಲ್ಲೆ ನಡೆಸಿದ್ದರು. ಹೀಗಾಗಿ ನಗರದಲ್ಲಿ ಸೋಮವಾರ ರಾತ್ರಿ ಪುನಃ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.
ತಡರಾತ್ರಿ ಮಾರಕಾಸ್ತ್ರಗಳನ್ನು ಹಿಡಿದು ಬೈಕ್‌ನಲ್ಲಿ ಕೂಗುತ್ತಾ ಓಡಾಡಿದ ಗುಂಪು ಸೀಗೆಹಟ್ಟಿಯ ಹರ್ಷನ ಮನೆ ಬಳಿ ಬೈಕ್ ನಿಲ್ಲಿಸಿ ಹರ್ಷ‌‌ನ ಸಹೋದರಿ ಅಶ್ವಿನಿ ಹಾಗೂ ಕುಟುಂಬದವರಿಗೆ ಬೆದರಿಕೆ ಹಾಕಿತ್ತು. ಆನಂತರ ಸ್ಥಳದಿಂದ ಪರಾರಿಯಾಗಿದ್ದರು. ಸ್ಥಳೀಯ ಯುವಕರ ಗುಂಪು ದುಷ್ಕರ್ಮಿಗಳನ್ನು ಹಿಂಬಾಲಿಸಿದ್ದರು. ಪರಾರಿಯಾಗುವ ವೇಳೆ ಕಿಡಿಗೇಡಿಗಳು ಭರಮಪ್ಪ ನಗರದಲ್ಲಿ ಪ್ರಕಾಶ ಎಂಬ ಯುವಕನಿಗೆ ಕಲ್ಲಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement