‘ದೇಶದ್ರೋಹಿ’ ಹೇಳಿಕೆ ನೀಡಿದ ಹಣಕಾಸು ಸಚಿವರನ್ನು ವಜಾಗೊಳಿಸಿ: ಕೇರಳ ಸಿಎಂಗೆ ಪತ್ರ ಬರೆದ ರಾಜ್ಯಪಾಲರು

ತಿರುವನಂತಪುರಂ: ಕೇರಳದಲ್ಲಿ 9 ವಿಶ್ವವಿದ್ಯಾಲಯಗಳ ಉಪ ಕುಲಪತಿಗಳ ವಿರುದ್ಧ ಸಮರ ಸಾರಿರುವ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಈಗ ಅಲ್ಲಿನ ಹಣಕಾಸು ಸಚಿವರ ವಿರುದ್ಧ ಕೆಂಗಣ್ಣು ಬೀರಿದ್ದಾರೆ. ಹಣಕಾಸು ಸಚಿವ ಕೆಎನ್ ಬಾಲಗೋಪಾಲ್ ಅವರು ವಿಶ್ವವಿದ್ಯಾಲಯವೊಂದರಲ್ಲಿ ನೀಡಿದ ಹೇಳಿಕೆ ‘ದೇಶದ್ರೋಹಿ’ಯಾಗಿದ್ದು, ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದಾರೆ.
ತಿರುವನಂತಪುರಂನಲ್ಲಿ ಕಳೆದ ಬುಧವಾರ ವಿವಿಯಲ್ಲಿ ಭಾಷಣ ಮಾಡಿದ್ದ ಬಾಲಗೋಪಾಲ್, ಪ್ರಾದೇಶಿಕತೆ ಮತ್ತು ಪ್ರಾಂತೀಯತೆಯ ಬೆಂಕಿಯನ್ನು ಹಚ್ಚಿ ಹಾಗೂ ಭಾರತದ ಏಕತೆಯನ್ನು ತುಂಡರಿಸಿ” ಎಂದು ಹೇಳಿದ್ದಾಗಿ ರಾಜ್ಯಪಾಲರು ಆರೋಪಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ್ದ ಬಾಲಗೋಪಾಲ್, “ಉತ್ತರ ಪ್ರದೇಶದಂತಹ ಸ್ಥಳಗಳಿಂದ ಬರುವವರು ಕೇರಳದಲ್ಲಿನ ವಿಶ್ವವಿದ್ಯಾಲಯಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಬಹುದು” ಎಂದಿದ್ದರು. ದೇಶದ ಇತರೆ ಭಾಗಗಳಲ್ಲಿ ವಿದ್ಯಾರ್ಥಿಗಳ ಮೇಲೆ ಅಧಿಕಾರಿಗಳು ನಡೆಸಿದ ಹಿಂಸಾತ್ಮಕ ಕ್ರಮಗಳನ್ನು ಅವರು ನೆನಪಿಸಿದ್ದರು ಎನ್ನಲಾಗಿದೆ.

ಹಣಕಾಸು ಸಚಿವ ಕೆಎನ್ ಬಾಲಗೋಪಾಲ್ ಅವರ ಹೇಳಿಕೆಯು ಕೇರಳ ಮತ್ತು ಭಾರತ ಒಕ್ಕೂಟದ ಇತರೆ ರಾಜ್ಯಗಳ ಮಧ್ಯೆ ಅಂತರ ಸೃಷ್ಟಿಸುವ ಹಾಗೂ ಭಾರತದ ವಿಭಿನ್ನ ರಾಜ್ಯಗಳು ವಿಭಿನ್ನ ಉನ್ನತ ಶಿಕ್ಷಣ ವ್ಯವಸ್ಥೆ ಹೊಂದಿವೆ ಎಂಬ ಸುಳ್ಳು ಭಾವನೆ ಬಿತ್ತಲು ಪ್ರಯತ್ನಿಸುವಂತಿದೆ” ಎಂದು ರಾಜ್ಯಪಾಲರು ಆರೋಪಿಸಿದ್ದಾರೆ.
ಶಿಕ್ಷಣ ಸಚಿವರು ಮತ್ತು ಕಾನೂನು ಸಚಿವರಂತಹ ಇತರೆ ಸಚಿವರು ನನ್ನ ಮೇಲಿನ ದಾಳಿಗಳಲ್ಲಿ ಭಾಗಿಯಾಗಿದ್ದರೂ, ಅವು ನನಗೆ ವೈಯಕ್ತಿಕವಾಗಿ ಗಾಸಿ ಮಾಡುವುದರಿಂದ ನಾನು ಅವರನ್ನು ನಿರ್ಲಕ್ಷಿಸುತ್ತೇನೆ. ಆದರೆ ಕೆಎನ್ ಬಾಲಗೋಪಾಲ್ ಅವರ ದೇಶದ್ರೋಹಿ ಹೇಳಿಕೆಯನ್ನು ನಾನು ಗಂಭೀರವಾಗಿ ಪರಿಗಣಿಸದೆ ಹೋದರೆ, ಅದು ನನ್ನ ಪಾಲಿನ ಕರ್ತವ್ಯದ ದೊಡ್ಡ ಲೋಪವಾಗುತ್ತದೆ” ಎಂದು ಪತ್ರದಲ್ಲಿ ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   'ತಾರಕ್ ಮೆಹ್ತಾ' ನಟ ಗುರುಚರಣ್ ಸಿಂಗ್ ಐದು ದಿನಗಳಿಂದ ನಾಪತ್ತೆ ; ಸಿಸಿಟಿವಿಯಲ್ಲಿ ರಸ್ತೆ ದಾಟುತ್ತಿರುವುದು ಸೆರೆ

ರಾಜ್ಯಪಾಲರು, “ಸಾಂವಿಧಾನಿಕವಾಗಿ ಸೂಕ್ತವಾದ” ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗೆ ಸೂಚಿಸಿದ್ದಾರೆ.
ಹಣಕಾಸು ಸಚಿವರು ತಮ್ಮ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಂಡಿರುವಂತೆ ಕಾಣಿಸುತ್ತದೆ. ಅವರ ವಿರುದ್ಧ ಸಂವಿಧಾನಕ್ಕೆ ಸೂಕ್ತವಾದ ಕ್ರಮ ತೆಗೆದುಕೊಳ್ಳಬೇಕು ಎಂದು ಸಿಎಂಗೆ ಒತ್ತಾಯಿಸಿದ್ದಾರೆ.
ಈ ಮನವಿಯನ್ನು ಮುಖ್ಯಮಂತ್ರಿ ಕಚೇರಿ ತಿರಸ್ಕರಿಸಿದೆ ಎಂದು ವರದಿಯಾಗಿದೆ. ರಾಜ್ಯಪಾಲರ ಪತ್ರದ ನಂತರ ರಾಜ್ಯದ ಆಡಳಿತಾರೂಢ ಎಡಪಕ್ಷಗಳ ವಿದ್ಯಾರ್ಥಿ ಘಟಕವು ರಾಜಭವನದ ಹೊರಗೆ ಪ್ರತಿಭಟನಾ ಮೆರವಣಿಗೆ ನಡೆಸಿತು. ವಿಶ್ವವಿದ್ಯಾನಿಲಯದ ಉಪಕುಲಪತಿಗಳ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಮತ್ತು ಎಡಪಕ್ಷಗಳ ನಡುವೆ ನಡೆಯುತ್ತಿರುವ ಜಗಳದ ನಡುವೆ ಈ ವಿನಿಮಯವು ಬಂದಿದೆ. ಎಂಟು ವಿಶ್ವವಿದ್ಯಾನಿಲಯ ಮುಖ್ಯಸ್ಥರ ರಾಜೀನಾಮೆಗೆ ಒತ್ತಾಯಿಸುವ ಖಾನ್ ಅವರ ಆದೇಶವು ಪ್ರಸ್ತುತ ಕೇರಳ ಹೈಕೋರ್ಟ್‌ನಿಂದ ತಡೆಹಿಡಿಯಲ್ಪಟ್ಟಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement