ಶಿವಮೊಗ್ಗ ಮಹಾನಗರ ಪಾಲಿಕೆ: ಮಹಾಪೌರರಾಗಿ ಶಿವಕುಮಾರ, ಉಪಮಹಾಪೌರರಾಗಿ ಲಕ್ಷ್ಮೀ ಆಯ್ಕೆ

ಶಿವಮೊಗ್ಗ: ಇಂದು, ಶುಕ್ರವಾರ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಆಯ್ಕೆಗಾಗಿ ಚುನಾವಣೆ ನಡೆಯಿತು. ಬಿಜೆಪಿ ಪಕ್ಷದಿಂದ ಮೇಯರ್ ಆಗಿ ಬಿಜೆಪಿಯ ಶಿವಕುಮಾರ ಹಾಗೂ ಉಪ ಮೇಯರ್ ಆಗಿ ಲಕ್ಷ್ಮೀ ನಾಯ್ಕ್‌ ಅವರು ಆಯ್ಕೆಯಾಗಿದ್ದಾರೆ.
ಮೇಯರ್ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು ಹಾಗೂ ಬಿಜೆಪಿಯಿಂದ ಗುರುಪುರ-ಪುರಲೆ ವಾರ್ಡ್ ನ ಪಾಲಿಕೆ ಸದಸ್ಯ ಶಿವಕುಮಾರ ಹಾಗೂ ಮಲವಗೊಪ್ಪ ವಾರ್ಡ್ ನ ಕಾಂಗ್ರೆಸ್ ಸದಸ್ಯ ಆರ್ ಸಿ ನಾಯ್ಕ್ ಸ್ಪರ್ಧಿಸಿದ್ದರು. ಬಿಜೆಪಿ ಶಿವಕುಮಾರ್ 26 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ ಕಾಂಗ್ರೆಸ್ ನ ಆರ್ ಸಿ ನಾಯ್ಕ್‌ ಅವರಿಗೆ 11 ಮತಗಳು ಬಿದ್ದವು.

ಉಪಮೇಯರ್‌ ಸ್ಥಾನ ಹಿಂದುಳಿದ ವರ್ಗ ಬಿಸಿಎಂ (ಎ) ವರ್ಗಕ್ಕೆ ಮೀಸಲಾಗಿತ್ತು. ಉಪಮೇಯರ್ ಸ್ಥಾನಕ್ಕೆ ನ್ಯೂ ಮಂಡ್ಲಿ ವಾರ್ಡ್ ನ ಬಿಜೆಪಿ ಸದಸ್ಯೆ ಲಕ್ಷ್ಮೀ ಶಂಕರ ನಾಯ್ಕ್ ಹಾಗೂ ಹೊಸಮನೆ ವಾರ್ಡ್ ಸದಸ್ಯ ಕಾಂಗ್ರೆಸ್‌ನ ರೇಖಾ ರಂಗನಾಥ ಸ್ಪರ್ಧಿಸಿದ್ದರು. ಲಕ್ಷ್ಮೀ ಅವರು 26 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ ರೇಖಾ ರಂಗನಾಥ್ 11 ಮತ ಪಡೆದು ಸೋಲು ಕಂಡರು.
ಒಟ್ಟಾರೆಯಾಗಿ ಶಿವಮೊಗ್ಗ ಮಹಾನಗರ ಪಾಲಿಕೆಯ ಮೇಯರ್ ಆಗಿ ಬಿಜೆಪಿಯ ಶಿವಕುಮಾರ್ ಹಾಗೂ ಉಪ ಮೇಯರ್ ಆಗಿ ಲಕ್ಷ್ಮೀ ಶಂಕರ ನಾಯ್ಕ್ ಆಯ್ಕೆಯಾಗಿದ್ದಾರೆ.

ಪ್ರಮುಖ ಸುದ್ದಿ :-   ಸವದತ್ತಿ | ಸಿಡಿಲು ಬಡಿದು ಇಬ್ಬರು ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement