ಆಂಧ್ರಪ್ರದೇಶ ಹೈಕೋರ್ಟ್‌ನಲ್ಲಿ ನಕಲಿ ದಾಖಲೆ ಸಲ್ಲಿಸಿದ ಆರೋಪ: ಟಿಡಿಪಿ ಮಾಜಿ ಸಚಿವ, ಪುತ್ರನ ಬಂಧನ

ಏಲೂರು: ಆಂಧ್ರಪ್ರದೇಶ ಹೈಕೋರ್ಟ್‌ಗೆ ನಕಲಿ ದಾಖಲೆ ಸಲ್ಲಿಸಿದ ಆರೋಪದ ಮೇಲೆ ರಾಜ್ಯದ ಮಾಜಿ ಸಚಿವ ಮತ್ತು ತೆಲುಗು ದೇಶಂ ಪಕ್ಷದ ನಾಯಕ ಅಯ್ಯಣ್ಣ ಪತ್ರುಡು ಮತ್ತು ಅವರ ಪುತ್ರ ರಾಜೇಶ್ ಅವರನ್ನು ಅಪರಾಧ ತನಿಖಾ ವಿಭಾಗ(ಸಿಐಡಿ)ದ ಪೊಲೀಸರು ಬಂಧಿಸಿದ್ದಾರೆ.
ನೀರಾವರಿ ಕಾಲುವೆ ಒತ್ತುವರಿ ಮಾಡಿಕೊಂಡು ಮನೆಯಲ್ಲಿ ಗೋಡೆ ನಿರ್ಮಿಸಲಾಗಿದೆ ಎಂದು ಹೈಕೋರ್ಟ್‌ಗೆ ನಕಲಿ ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂಬ ಆರೋಪದಡಿ ಬುಧವಾರ ರಾತ್ರಿ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದಾರೆ.
ಸಿಐಡಿ ಪೊಲೀಸರು ಅವರಿಗೆ ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 50 ಎ ಅಡಿಯಲ್ಲಿ ನೋಟಿಸ್ ಜಾರಿ ಮಾಡಿದ್ದರು.
ಈ ಸಂಬಂಧ ಮಂಗಳಗಿರಿ ಸಿಐಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇವರ ವಿರುದ್ಧ ಮಂಗಳಗಿರಿ ಸಿಐಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿಸಲಾಗಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಅವರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಲಾಗಿದೆ.ಇಬ್ಬರನ್ನೂ ಏಲೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.

ಟಿಡಿಪಿ ನಾಯಕನ ಬಂಧನಕ್ಕೆ ಖಂಡನೆ
ಮಾಜಿ ಮುಖ್ಯಮಂತ್ರಿ ಹಾಗೂ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಜಗನ್ ಮೋಹನ್ ರೆಡ್ಡಿಗೆ ನೀವು ಮುಖ್ಯಮಂತ್ರಿಗಳೋ ಅಥವಾ ರಾಕ್ಷಸರೋ ಎಂದು ಪ್ರಶ್ನಿಸಿದ್ದಾರೆ.
ಮಾಜಿ ಸಚಿವ ಮತ್ತು ಅವರ ಪುತ್ರನ ಬಂಧನವನ್ನು ಬಲವಾಗಿ ಖಂಡಿಸಿದ ನಾಯ್ಡು, ನರಸೀಪಟ್ಟಣದಲ್ಲಿ ಅವರ ಬಂಧನದ ಬಗ್ಗೆ ತಿಳಿದು ಆಘಾತವಾಯಿತು ಎಂದು ಹೇಳಿದ್ದಾರೆ. ಜಗನ್ ರೆಡ್ಡಿ ಅಧಿಕಾರಕ್ಕೆ ಬಂದಾಗಿನಿಂದಲೂ ಅವರು ಅಯ್ಯಣ್ಣ ಪತ್ರುಡು ಮತ್ತು ಅವರ ಕುಟುಂಬ ಸದಸ್ಯರನ್ನು ಕಾಡುತ್ತಿದ್ದಾರೆ ಎಂದು ಚಂದ್ರಬಾಬು ನಾಯ್ಡು ಹೇಳಿದರು.
ಅಯ್ಯಣ್ಣ ಪತ್ರುಡು ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಈಗಾಗಲೇ 10 ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದ ನಾಯ್ಡು, ಅಯ್ಯಣ್ಣ ಪತ್ರುಡು ಅವರ ಮತ್ತೋರ್ವ ಪುತ್ರ ವಿಜಯ್ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಸಿಐಡಿಯ ತಪ್ಪು ಕಂಡುಹಿಡಿದಿದ್ದರೂ ಪೊಲೀಸರು ತಮ್ಮ ಮಾರ್ಗ ಸರಿಪಡಿಸಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ.
ಪೊಲೀಸರು ಡಕಾಯಿತರಂತೆ ಮನೆಗಳನ್ನು ಬಲವಂತವಾಗಿ ಅತಿಕ್ರಮವಾಗಿ ಪ್ರವೇಶಿಸಿದ ಘಟನೆಗಳನ್ನು ರಾಜ್ಯ ಎಂದಿಗೂ ಕಂಡಿಲ್ಲ ಎಂದು ನಾಯ್ಡು ಹೇಳಿದರು.ಅಯ್ಯಣ್ಣ ಪತ್ರುಡು ಹಾಗೂ ಅವರ ಪುತ್ರನನ್ನು ಬೇಷರತ್ತಾಗಿ ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರಮುಖ ಸುದ್ದಿ :-   ರಾಯಬರೇಲಿಯಿಂದ ಅಕ್ಕನ ವಿರುದ್ಧ ಸ್ಪರ್ಧಿಸಲು ಬಿಜೆಪಿ ನೀಡಿದ್ದ ಆಫರ್‌ ತಿರಸ್ಕರಿಸಿದರೇ ವರುಣ್‌ ಗಾಂಧಿ..?

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement