ದೇವಸ್ಥಾನದ ತೀರ್ಥ ಕುಡಿಯಬೇಡಿ, ಕಿಲುಬು ಇರುತ್ತದೆ : ಬಿ.ಟಿ. ಲಲಿತಾ ನಾಯಕ್‌

ಗದಗ: ದೇವಸ್ಥಾನದಲ್ಲಿ ಕೊಡುವ ತೀರ್ಥವನ್ನು ಕುಡಿಯುವುದರಿಂದ ರೋಗಗಳು ಹರಡುತ್ತವೆ. ತೀರ್ಥ ಕೊಡುವವರು ಶುದ್ಧವಾಗಿ ಕೈ ತೊಳೆದಿರುವುದಿಲ್ಲ. ಅದರಲ್ಲಿ ಕಿಲುಬು ಇರುತ್ತದೆ,ಇದರಿಂದ ಎಷ್ಟೋ ಜನರು ವಾಂತಿ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲರ ಮನೆಯಲ್ಲಿಯೂ ನೀರು ಇದೆ. ಹೀಗಿದ್ದಾಗ ತೀರ್ಥ ಯಾಕೆ ಕುಡಿಯಬೇಕು ಎಂದು ಪ್ರಶ್ನಿಸಿದ್ದಾರೆ.
ಕಾಣದ ದೇವರಿಗೆ ಪೂಜೆ ಮಾಡುವಾಗ ಹೂವು, ಬಟ್ಟೆ ಯಾಕೆ ಹಾಕಬೇಕು. ಪೂಜೆ ಎಂದರೆ ದೇಹ, ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳುವುದು. ಇದನ್ನು ಸರ್ಕಾರಗಳು, ಸಂಘಸಂಸ್ಥೆಗಳು ಜನರಿಗೆ ಮನವರಿಕೆ ಮಾಡಿಕೊಡಬೇಕು. ವೈಜ್ಞಾನಿಕ ಸತ್ಯ ಏನಿವೆಯೋ ಅದನ್ನು ಜನರಿಗೆ ತಲುಪಿಸುವ ಕೆಲಸ ಆಗಬೇಕು ಎಂದು ಲಲಿತಾ ನಾಯಕ್  ಹೇಳಿದ್ದಾರೆ.

ದೇವರ ಹೆಸರು ಹೇಳಿಕೊಂಡು ಕುಣಿಯುತ್ತಾರೆ. ಇದು ಆವೇಶವಾಗಿದೆ. ಇದನ್ನು ಜನರ ಮುಂದೆ ಇಡುವ ಕೆಲಸ ಮಾಡಬೇಕು. ಅವರಿಗೆ ಸರ್ಕಾರ ಮಾಸಾಶನ ಹೆಸರಲ್ಲಿ 2 ಸಾವಿರ ರೂಪಾಯಿ ಹಣ ಕೊಡಬಾರದು. ಅವರಿಗೆ ಉದ್ಯೋಗ ನೀಡಬೇಕು. ದೈವ ಎನ್ನುವುದು ಒಬ್ಬೊಬ್ಬರ ದೃಷ್ಟಿಯಲ್ಲಿ ಒಂದು ತರನಾಗಿರುತ್ತದೆ. ಕಾಂತಾರ (Kantara) ಚಿತ್ರ ನೋಡಿದರೆ ಗೊತ್ತಾಗುತ್ತದೆ. ಚುಚ್ಚಿ ಹಿಂಸೆ ಕೊಡುತ್ತಾರೆ. ಯಾವುದೇ ಕಾಲದಲ್ಲಿ ನೋವಿನಿಂದ ಕೂಗಿದವರನ್ನು ದೇವರೆಂದು ಕರೆದರು. ಅದನ್ನು ಮುಗ್ಧ ಕಾಡು ಜನ ದೇವರು ಎಂದು ನಂಬುತ್ತಾರೆ. ಅವರು ದೇವರು ಎನ್ನುವುದನ್ನು ಉಳಿಸಿಕೊಳ್ಳಲು ಸಹಿಸಿಕೊಂಡು ಜೋರಾಗಿ ಕೂಗುತ್ತಾರೆ. ಅದನ್ನು ವಂಶದವರು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಇಂತಹ ಸುಳ್ಳು, ಬೋಗಸ್ಸನ್ನು ನಿಲ್ಲಿಸಬೇಕು. ಜನರ ಮುಂದೆ ಸತ್ಯ ತೆರೆದಿಡಬೇಕು. ದುಡಿದು ತಿನ್ನುವಂತಹ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಮುಖ ಸುದ್ದಿ :-   ಏಪ್ರಿಲ್‌ 18, 19ರಂದು ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ

2.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement