ಕೊಚ್ಚಿಯಲ್ಲಿ ತಮ್ಮ ಪತ್ರಿಕಾಗೋಷ್ಠಿಗೆ ಎರಡು ಮಲಯಾಳಂ ಚಾನೆಲ್‌ಗಳನ್ನು ನಿರ್ಬಂಧಿಸಿದ ಕೇರಳ ರಾಜ್ಯಪಾಲರು

ಕೊಚ್ಚಿ : ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಸೋಮವಾರ ಕೊಚ್ಚಿಯಲ್ಲಿ ತಮ್ಮ ಪತ್ರಿಕಾಗೋಷ್ಠಿಗೆ ಎರಡು ಮಲಯಾಳಂ ಚಾನೆಲ್‌ಗಳನ್ನು ನಿಷೇಧಿಸಿದ್ದಾರೆ.
ಕೈರಾಳಿ ನ್ಯೂಸ್ ಮತ್ತು ಮೀಡಿಯಾ ಒನ್ ಚಾನೆಲ್‌ಗಳ ವರದಿಗಾರರನ್ನು ಪತ್ರಿಕಾಗೋಷ್ಠಿಯಿಂದ ಹೊರಹೋಗುವಂತೆ ರಾಜ್ಯಪಾಲರು ಸೂಚಿಸಿದರು ಮತ್ತು ಈ ಎರಡು ಚಾನೆಲ್‌ನವರನ್ನು ಭೇಟಿಯಾಗುವುದಿಲ್ಲ ಎಂದು ಹೇಳಿದರು. ಅಲ್ಲದೆ ಈ ಚಾನೆಲ್‌ನವರು ಪತ್ರಕರ್ತರ ವೇಷದಲ್ಲಿರುವ ರಾಜಕೀಯ ಪಕ್ಷದ ಸದಸ್ಯರು ಎಂದು ಆರೋಪಿಸಿದರು.
ಅವರನ್ನು ಹೊರಗೆ ಹೋಗುವಂತೆ ಕೇಳಿಕೊಂಡ ಅವರು, “ನಾನು ಮಾಧ್ಯಮವನ್ನು ಬಹಳ ಮುಖ್ಯವೆಂದು ಪರಿಗಣಿಸಿದ್ದೇನೆ, ನಾನು ಯಾವಾಗಲೂ ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತೇನೆ ಆದರೆ ಈಗ ಮಾಧ್ಯಮದ ಮುಖವಾಡ ಹೊಂದಿರುವವರಿಗೆ ಮನವೊಲಿಸಲು ನನಗೆ ಸಾಧ್ಯವಾಗುತ್ತಿಲ್ಲ. ಅವರು ಮಾಧ್ಯಮವಲ್ಲ, ಅವರು ಮಾಧ್ಯಮವೆಂದು ವೇಷ ಹಾಕುತ್ತಿದ್ದಾರೆ. ಆದರೆ ಮೂಲತಃ ರಾಜಕೀಯ ವ್ಯಕ್ತಿಗಳು ಎಂದು ರಾಜ್ಯಪಾಲ ಆರಫ್‌ ಮೊಹಮ್ಮದ್‌ ಖಾನ್‌ ಹೇಳಿದ್ದಾರೆ.

ಇಲ್ಲಿ ನಿಜವಾಗಿಯೂ ಪಕ್ಷದ ಸದಸ್ಯರಿದ್ದಾರೆ. ಹಾಗಾಗಿ ಕೈರಾಲಿ ಮತ್ತು ಮೀಡಿಯಾ ಒನ್ ವಾಹಿನಿಗಳವರು ಯಾರಾದರೂ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸುತ್ತಿದ್ದರೆ ದಯವಿಟ್ಟು ಹೊರಗೆ ಹೋಗಿ. ಕೈರಾಲಿ ಮತ್ತು ಮೀಡಿಯಾ ಒನ್ ಪ್ರತಿನಿಧಿಗಳೀದ್ದರೆ ನಾನು ಹೊರನಡೆಯುತ್ತೇನೆ. ನಾನು ಮಾತನಾಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದೆ ಎಂದು ಅವರು ಹೇಳಿದರು.
ಸೋಮವಾರ ಬೆಳಗ್ಗೆ ಕೊಚ್ಚಿಯ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಯಿತು. ಇದಕ್ಕೂ ಮೊದಲು ಅಕ್ಟೋಬರ್ 24 ರಂದು ರಾಜಭವನವು ಈ ಎರಡೂ ಚಾನೆಲ್‌ಗಳು ಸೇರಿದಂತೆ ನಾಲ್ಕು ಮಲಯಾಳಂ ಚಾನೆಲ್‌ಗಳನ್ನು ರಾಜ್ಯಪಾಲರ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸದಂತೆ ನಿರ್ಬಂಧಿಸಿತು.
ಕೈರಾಲಿ ನ್ಯೂಸ್ ಆಡಳಿತಾರೂಢ ಸಿಪಿಐ (ಎಂ) ಪಕ್ಷದ ವಾಹಿನಿಯಾಗಿದೆ. ಅಲ್ಲದೆ, ಮಲಯಾಳಂನ ಉಪಗ್ರಹ ಚಾನೆಲ್ ಮೀಡಿಯಾ ಒನ್ ಭದ್ರತಾ ಕ್ಲಿಯರೆನ್ಸ್ ಸಮಸ್ಯೆಗಳ ಮೇಲೆ ಕೇಂದ್ರ ಸರ್ಕಾರದಿಂದ ನಿಷೇಧವನ್ನು ಎದುರಿಸುತ್ತಿದೆ.
ನಿಷೇಧದ ವಿರುದ್ಧ ಮೀಡಿಯಾ ಒನ್ ಸಲ್ಲಿಸಿದ ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಕಳೆದ ವಾರ ಕಾಯ್ದಿರಿಸಿತ್ತು. ಮಾರ್ಚ್‌ನಲ್ಲಿ ಮಧ್ಯಂತರ ಆದೇಶದಲ್ಲಿ, ಸುಪ್ರೀಂಕೋರ್ಟ್‌ ಪ್ರಸಾರವನ್ನು ಮುಂದುವರಿಸಲು ಚಾನೆಲ್‌ಗೆ ಅವಕಾಶ ನೀಡಿತ್ತು.

ಪ್ರಮುಖ ಸುದ್ದಿ :-   ಪಾಟ್ನಾ ರೈಲ್ವೆ ನಿಲ್ದಾಣದ ಸಮೀಪದ ಹೊಟೇಲ್‌ ನಲ್ಲಿ ಬೆಂಕಿ ಅವಘಡ : 6 ಮಂದಿ ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement