ಹಿಂದೂ ಪದದ ಬಗ್ಗೆ ಸತೀಶ ಜಾರಕಿಹೊಳಿ ಹೇಳಿಕೆ ಅಕ್ಷಮ್ಯ ಅಪರಾಧ, ಕ್ಷಮೆ ಕೇಳಲಿ : ಪ್ರಮೋದ ಮುತಾಲಿಕ್‌

ಶಿರಸಿ : ಸ್ಮಶಾನದಲ್ಲಿ ಪೂಜೆ , ಸ್ಮಶಾನದಲ್ಲಿ ಮದುವೆ, ಸ್ಮಶಾನದಲ್ಲಿ ಊಟ ಮಾಡುವ ನಾಸ್ತಿಕತೆ ಇರುವವರಿಗೆ ಹಿಂದೂ ಶಬ್ದದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸತೀಶ್ ಜಾರಕಿಹೊಳಿ ಒಬ್ಬ ನಾಸ್ತಿಕ ಎಂದು ಹೇಳಿದ ಅವರು, ಸತೀಶ ಜಾರಕಿಹೊಳಿ ಹೇಳಿಕೆಯನ್ನು ಖಂಡಿಸುವುದಾಗಿ ತಿಳಿಸಿದರು. ಸತೀಶ್ ಜಾರಕಿಹೊಳಿ ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕು,ಹಿಂದೂಗಳ ಕ್ಷಮೆ ಕೇಳಬೇಕು ಆಗ್ರಹಿಸಿದರು.
ಸತೀಶ ಜಾರಕಿಹೊಳಿ ಅಕ್ಷಮ್ಯ ಅಪರಾಧ ಮಾಡಿದ್ದಾರೆ. ಕಾಂಗ್ರೆಸ್ ನವರಿಗೆ ಇನ್ನೂ ಕೂಡ ಬುದ್ಧಿಬಂದಿಲ್ಲ, ಹಿಂದುತ್ವ, ಹಿಂದುಗಳನ್ನು ಹಾಗೂ ಹಿಂದು ಧರ್ಮ, ಹಿಂದು ಸಂಘಟನೆಗಳನ್ನ ಅವಹೇಳನ ಮಾಡುವುದು ಸರಿಯಲ್ಲ ಎಂದರು.

ಕುವೆಂಪು ಅವರು ಹಿಂದು, ಜೈನ, ಸಿಖ್, ಕ್ರೈಸ್ತ ಎಂಬ ಶಬ್ದವನ್ನ ನಾಡಗೀತೆಯಲ್ಲಿ ಬಳಸಿದ್ದಾರೆ. ಆಜಾದ್ ಹಿಂದ್ ಫೌಜ್‌ ಎಂದು ಸುಭಾಷ್ ಚಂದ್ರಬೋಸ್ ಬಳಸಿದ್ದಾರೆ. ಅನೇಕ ಸಂದರ್ಭದಲ್ಲಿ ಭಗತ್ ಸಿಂಗ್ , ಸಾವರ್ಕರ್ ಕೂಡ ಈ ಶಬ್ದವನ್ನು ಬಳಸಿದ್ದಾರೆ. ಸುಪ್ರೀಂ ಕೋರ್ಟ ಕೂಡ 25 ವರ್ಷದ ಹಿಂದೆ ಹಿಂದೂ ಧರ್ಮ “ವೇ ಆಫ್ ಲೈಫ್ ” ಅತ್ಯಂತ ಒಳ್ಳೆಯ ಜೀವನದ ಪದ್ಧತಿ ಎಂದು ಹೇಳಿದೆ.
ಹಾಗಾದರೆ ಇವರೆಲ್ಲ ಮೂರ್ಖರೇ ಎಂದು ಪ್ರಶ್ನಿಸಿದರು.
ಹಿಂದು ಶಬ್ದ ಜಾತಿ ಸೂಚಕವಲ್ಲ, ಮತ ಸೂಚಕವಲ್ಲ ,ಇದು ಜೀವನದ ಪದ್ಧತಿ. ಈ ಶಬ್ದಕ್ಕೆ ಅಪಮಾನ ಮಾಡುತ್ತಿರುವುದು ಸರಿಯಲ್ಲ, ಇದನ್ನು ಖಂಡಿಸುತ್ತೇನೆ ಎಂದರು.

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement