ಹಿಂದೂ ಶಬ್ದದ ಕುರಿತು ಸತೀಶ ಜಾರಕಿಹೊಳಿ ಹೇಳಿಕೆಗೆ ಬೆಳಗಾವಿ ವಕೀಲರ ಸಂಘ ಖಂಡನೆ

ಬೆಳಗಾವಿ: ಹಿಂದೂ ಶಬ್ದದ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಶಾಸಕ ಸತೀಶ ಜಾರಕಿಹೊಳಿ ನೀಡಿರುವ ಹೇಳಿಕೆಯನ್ನು ಬೆಳಗಾವಿ ವಕೀಲರ ಸಂಘ ಖಂಡಿಸಿದೆ.
ಮಂಗಳವಾರ ನಡೆದ ಬೆಳಗಾವಿ ವಕೀಲರ ಸಂಘದ ಆಡಳಿತ ಮಂಡಳಿ ಸಭೆ ಸತೀಶ ಜಾರಕಿಹೊಳಿ ಅವರ ಹೇಳಿಕೆಗೆ
ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಸತೀಶ ಜಾರಕಿಹೊಳಿ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಶಾಸನ ಸಭೆಯ ಸದಸ್ಯರಾಗಿ ಜವಾಬ್ದಾರಿಯುತ ಸ್ಥಾನಮಾನದಲ್ಲಿರುವವರು.
ನವೆಂಬರ್ 6ರಂದು ನಿಪ್ಪಾಣಿಯಲ್ಲಿ ನಡೆದ ವಿಶ್ವ ಮಾನವ ಬಂಧುತ್ವ ವೇದಿಕೆಯ ಹಿಂದೂ ಶಬ್ದದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಸಭೆಯಲ್ಲಿ ಖಂಡಿಸಲಾಯಿತು.

ಅವಹೇಳನಕಾರಿಯಾಗಿ ಮಾತನಾಡಿರುವುದು ಬುದ್ಧ , ಬಸವ , ಡಾ.ಅಂಬೇಡ್ಕರ್ ರವರ ವಿಚಾರಧಾರೆಗಳಿಗೆ ವಿರುದ್ಧವಾಗಿದ್ದು ಯಾವುದೇ ಧರ್ಮದ ಬಗ್ಗೆ ಮಾತನಾಡುವ ಪೂರ್ವದಲ್ಲಿ ಆತ್ಮವಿಮರ್ಶೆ ಮಾಡಿಕೊಳ್ಳುವ ಅವಶ್ಯಕ. ರಾಜಕೀಯ ಪ್ರಚಾರಕ್ಕಾಗಿ ಈ ರೀತಿ ಅವಹೇಳನ ಮಾಡಿರುವುದು ಅತ್ಯಂತ ಕೀಳು ಮಟ್ಟದ ವಿಚಾರವಾಗಿದ್ದು ಹಾಗೂ ಈ ಹೇಳಿಕೆಯ ಕುರಿತು ಕ್ಷಮಾಪಣೆ ಕೇಳದೆ ಹೇಳಿಕೆ ಸಮರ್ಥಿಸಿಕೊಂಡಿರುವುದು ಸಹಿತ ಅತ್ಯಂತ ಖಂಡನೀಯ ವಿಷಯವಾಗಿದೆ ಎಂದು ಹೇಳಿದೆ.
ಆದುದರಿಂದ ಸಂವಿಧಾನ ಬದ್ಧವಾಗಿ ದೊರೆತ ಧಾರ್ಮಿಕ ಹಕ್ಕಿನ ಹೆಸರಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆಯನ್ನು ನೀಡಿ ಅಸಂಬದ್ಧವಾಗಿ ಮಾತನಾಡಿರುವುದು ಅತ್ಯಂತ ಖಂಡನೀಯವೆಂದು ತಿರ್ಮಾನಿಸಿ ಈ ವಿಷಯದಲ್ಲಿ ಕೋಮು ಸಾಮರಸ್ಯ ಕಾಪಾಡಬೇಕಾದ ವ್ಯಕ್ತಿಗಳು ಸ್ವಯಂ ಪ್ರೇರಿತವಾಗಿ ತ್ವರಿತವಾಗಿ ಅವಶ್ಯಕ ಕ್ರಮಗಳನ್ನು ಕೈಗೊಂಡು ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ವಕೀಲರ ಸಂಘ ಆಗ್ರಹಿಸಿದೆ

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement