ಹುಬ್ಬಳ್ಳಿ: ಗೋಮೂತ್ರದಿಂದ ಈದ್ಗಾ ಮೈದಾನ ಶುಚಿಗೊಳಿಸಿ ಕನಕ ಜಯಂತಿ ಆಚರಣೆ

ಹುಬ್ಬಳ್ಳಿ: ಗೋಮೂತ್ರದಿಂದ ಈದ್ಗಾ ಮೈದಾನ ಶುಚಿಗೊಳಿಸಿದ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮತ್ತು ಕಾರ್ಯಕರ್ತರು ಕನಕದಾಸ ಜಯಂತಿ ಆಚರಣೆ ಮಾಡಿದರು. ನಿನ್ನೆ, ಗುರುವಾರ ಇದೇ ಮೈದಾನದಲ್ಲಿ ಎಐಎಂಐಎಂ ಕಾರ್ಯಕರ್ತರು ಟಿಪ್ಪು ಜಯಂತಿ ಆಚರಿಸಿದ್ದರ ಕಾರಣಕ್ಕೆ ಗೋ ಮೂತ್ರ ಸಿಂಪಡಿಸುವ ಮೂಲಕ ಈದ್ಗಾ ಮೈದಾನ ಶುಚಿಗೊಳಿಸಲಾಯಿತು.
ಟಿಪ್ಪು ಜಯಂತಿ ಆಚರಣೆ ಮಾಡಿದ ಹಿನ್ನಲೆ ಮೈದಾನ ಅಪವಿತ್ರವಾಗಿದೆ ಎಂದ ಪ್ರಮೋದ್ ಮುತಾಲಿಕ್, ಕಾರ್ಯಕರ್ತರೊಂದಿಗೆ ಸೇರಿಕೊಂಡು ಕನಕ ಜಯಂತಿ ಆಚರಣೆಗೂ ಮುನ್ನ ಈದ್ಗಾ ಮೈದಾನ ಶುಚಿಗೊಳಿಸಿದರು.
ಈ ವೇಳೆ ಮಾತನಾಡಿದ ಪ್ರಮೋದ ಮುತಾಲಿಕ್, ಟಿಪ್ಪು ಜಯಂತಿ ಆಚರಣೆಗೆ ಅನುಮತಿ ನೀಡಿದ್ದು ದೊಡ್ಡ ತಪ್ಪು, ಟಿಪ್ಪು ವಿಚಾರದಲ್ಲಿ ಬಿಜೆಪಿ ದ್ವಂದ್ವ ನಿಲುವು ಅನುಸರಿಸುತ್ತಿದ್ದು, ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದರು.

ಅಲ್ಲದೆ, ಟಿಪ್ಪು ಒಬ್ಬ ಮತಾಂಧ, ಕನ್ನಡ ದ್ರೋಹಿ, ಸಾವಿರಾರು ದೇವಸ್ಥಾನ ಹಾಳು ಮಾಡಿದ ವ್ಯಕ್ತಿ. ಇಂತಹ ವ್ಯಕ್ತಿಯ ಜಯಂತಿ ಆಚರಣೆ ಮಾಡಿರುವುದು ಅಕ್ಷಮ್ಯ ಅಪರಾಧ. ಹೀಗಾಗಿ ನಾವು ಮೈದಾನವನ್ನು ಗೂ ಮೂತ್ರ ಸಿಂಪರಣೆ ಮಾಡಿ ಶುದ್ಧೀಕರಣ ಮಾಡಿ ಕನಕದಾಸ ಜಯಂತಿ ಆಚರಣೆ ಮಾಡಿದ್ದೇವೆ ಎಂದರು.
ಮೈಸೂರಲ್ಲಿ ಟಿಪ್ಪು ಮೂರ್ತಿ ಪ್ರತಿಷ್ಠಾಪನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಟಿಪ್ಪು ಕರ್ನಾಟಕದ ಕಳಂಕ. ಅಲ್ಲಿ‌ ಮೂರ್ತಿ ಕೂರಿಸಿದರೆ ನಾವ ಒಡೆದು ಹಾಕುತ್ತೇವೆ. 100 ಅಡಿ ಮೂರ್ತಿ ಕೂರಿಸಲು ನಮ್ಮ ವಿರೋಧ ಇದೆ. ಇಂತಹ ಕೆಟ್ಟ ಕೆಲಸ ತನ್ವೀರ್ ಸೇಠ್ ಮಾಡಬಾರದು. ಟಿಪ್ಪು ಬದಲಾಗಿ ಶಿಶುನಾಳ ಶರೀಫರು, ಅಬ್ದುಲ್‌ ಕಲಾಂ ಅವರಂಥವರ ಮೂರ್ತಿ ಕೂರಿಸಲಿ. ಟಿಪ್ಪು ಮೂರ್ತಿ ಕೂರಿಸಿದರೆ ನಾವು ಬಾಬ್ರಿ ಮಸೀದಿ ಒಡೆದು ಹಾಕಿದ ಮಾದರಿಯಲ್ಲಿ ಒಡೆದು ಹಾಕುತ್ತೇವೆ ಎಂದರು.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಕರ್ನಾಟಕದ ಮೊದಲ ಹಂತದಲ್ಲಿ ಶೇ. 69.23 ಮತದಾನ ; 14 ಕ್ಷೇತ್ರಗಳ ಮತದಾನದ ಪ್ರಮಾಣದ ವಿವರ...

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement