ಇಸ್ಲಾಮಿಕ್ ಸ್ಟೇಟ್ ಕರಪತ್ರ, ಬಾಂಬ್ ತಯಾರಿಕಾ ಕೈಪಿಡಿ ಸಾಗಿಸುತ್ತಿದ್ದವರ ಬಂಧನ

ಚೆನ್ನೈ: ಇಸ್ಲಾಮಿಕ್ ಸ್ಟೇಟ್ ಸಂಬಂಧಿತ ಕರಪತ್ರಗಳು ಮತ್ತು ಬಾಂಬ್ ತಯಾರಿಕೆ ಕೈಪಿಡಿಯನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ ಆತನ ಇಬ್ಬರು ಸಹಚರರನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ.
ನಾಗೂರ್ ಮೀರನ್ ಬಂಧಿತ ಆರೋಪಿ. ಈತ ಮತ್ತು ಈತನ ಇಬ್ಬರು ಸಹಚರರು ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಮತ್ತು ಸಿರಿಯಾ (ಐಎಸ್‌ಐಎಸ್) ಎಂಬ ಉಗ್ರಗಾಮಿ ಸಂಘಟನೆಯ ಕರಪತ್ರಗಳು ಮತ್ತು ಬಾಂಬ್ ತಯಾರಿಕೆಯ ಟಿಪ್ಪಣಿಗಳನ್ನು ಸಾಗಿಸುತ್ತಿದ್ದರು. ಚೆಕ್ ಪಾಯಿಂಟ್‌ನಲ್ಲಿ ತಪಾಸಣೆ ವೇಳೆ ಮೂವರೂ ತಪ್ಪಿಸಲೆತ್ನಿಸಿದ್ದು, ಈ ವೇಳೆ ಅನುಮಾನಗೊಂಡ ಪೊಲೀಸರು ಬೈಕ್‌ನ ನೋಂದಣಿ ಸಂಖ್ಯೆಯಾಧಾರಿತವಾಗಿ ಅವರನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಯೂ ಟ್ಯೂಬ್ ಟ್ಯುಟೋರಿಯಲ್ ವೀಡಿಯೋಗಳಿಂದ ಸ್ಫೋಟಕಗಳ ತಯಾರಿಗೆ ಬೇಕಾದ ರಾಸಾಯನಿಕಗಳ ಬಗ್ಗೆ ವಿವರ ಹೊಂದಿರುವ ಕರಪತ್ರಗಳು ಬಂಧಿತರ ಬಳಿ ಇತ್ತು. ಇದರ ಜೊತೆಗೆ ಬಾಂಬ್ ತಯಾರಿಕೆ ಟಿಪ್ಪಣಿಯುಳ್ಳ ಬ್ಯಾಗ್‌ನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ವಿರುದ್ದ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 153 ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 505 (1) (ಬಿ) (ದ್ವೇಷವನ್ನು ಉತ್ತೇಜಿಸುವ ಉದ್ದೇಶದಿಂದ ಮಾಡಿದ ಪ್ರಕಟಣೆ), ಮತ್ತು 505 (2) (ಸಾರ್ವಜನಿಕ ಕಿಡಿಗೇಡಿತನದ ಹೇಳಿಕೆಗಳು) ಅಡಿಯಲ್ಲಿ ದೂರು ದಾಖಲಿಸಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೋ..| ಎರಡೂ ಕೈತೋಳುಗಳಿಲ್ಲದೆ ಡ್ರೈವಿಂಗ್‌ ಲೈಸೆನ್ಸ್‌ ಪಡೆದ ಏಷ್ಯಾದ ಮೊದಲ ಮಹಿಳೆ ಇವರು : ಕೇರಳದ ಯುವತಿಯ ಕಾರ್‌ ಚಾಲನೆಗೆ ಬೆರಗಾಗ್ತೀರಾ..!

4 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement