ಬಂಟ್ವಾಳ: ಕಾರಣಿಕ ದೈವ ಕೊರಗಜ್ಜನಿಗೆ ಅಗೇಲು ಸೇವೆಯ ಹರಕೆ ತೀರಿಸಿದ ಉಕ್ರೇನ್‌ ಕುಟುಂಬ

ಮಂಗಳೂರು: ತುಳುನಾಡಿನ ಕಾರಣಿಕ ದೈವ ಕೊರಗಜ್ಜ ಮತ್ತೆ ಪವಾಡ ಮೆರೆದಿದೆ. ತಮ್ಮ ಕುಟುಂದ ಕಷ್ಟವನ್ನು ನೀಗಿಸಿದ್ದಕ್ಕೆ ಉಕ್ರೇನ್ ದೇಶದ ಕುಟುಂಬವೊಂದು ದಕ್ಷಿಣ ಕನ್ನಡಕ್ಕೆ ಬಂದು ತಮ್ಮ ಹರಕೆಯನ್ನು ಪೂರೈಸಿದೆ.
ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ಪುದು ಗ್ರಾಮದ ಗೋವಿನತೋಟದಲ್ಲಿರುವ ಕೊರಗಜ್ಜ ದೇವರಿಗೆ ಐಟಿ ವೃತ್ತಿಪರ ಆಂಡ್ರ್ಯೂ, ಅವರ ಪತ್ನಿ ಎಲೆನಾ ಮತ್ತು ಎಂಟು ವರ್ಷದ ಮಗ ಮ್ಯಾಕ್ಸಿಮ್ ಶುಕ್ರವಾರ ರಾತ್ರಿ ಅಗೇಲು ಸೇವೆ ಸಲ್ಲಿಸಿದ್ದಾರೆ. ಅಗೆಲು ಸೇವೆಯು ಬಿದಿರಿನ ತಟ್ಟೆಯಲ್ಲಿ ಮಾಡಿದ ಧಾರ್ಮಿಕ ಅರ್ಪಣೆಯಾಗಿದೆ. ಪ್ರತಿಜ್ಞೆಯನ್ನು ಪೂರೈಸಿದ ನಂತರ ಇದನ್ನು ಸಾಮಾನ್ಯವಾಗಿ ನೀಡಲಾಗುತ್ತದೆ.
ಕೆಲವು ತಿಂಗಳ ಹಿಂದೆ ಉಕ್ರೇನ್ ಪ್ರಜೆ ಆ್ಯಂಡ್ರೋ, ಪತ್ನಿ ಎಲೆನಾ ಮತ್ತು ಮಗ ಮ್ಯಾಕ್ಸಿಂ ಭಾರತಕ್ಕೆ ಬಂದಿದ್ದರು. ಉಕ್ರೇನ್ ದಂಪತಿ ತನ್ನ ಮಗನ ಮ್ಯಾಕ್ಸಿಂಗೆ ಮಧುಮೇಹ ಹಾಗೂ ನರದ ಸಮಸ್ಯೆಯ ಚಿಕಿತ್ಸೆಗಾಗಿ ನಾಡಿ ನೋಡಿ ಔಷದಿ ಕೊಡುವ ಭಕ್ತಿಭೂಷಣ ದಾಸ ಪ್ರಭೂಜಿ ಅವರನ್ನು ಭೇಟಿ ಮಾಡಲು ಆಗಮಿಸಿದ್ದರು.

ಮ್ಯಾಕ್ಸಿಮ್‌ಗೆ ರಕ್ತದಲ್ಲಿನ ಸಕ್ಕರೆ ಹೆಚ್ಚಿದೆ ಮತ್ತು ಉಕ್ರೇನಿಯನ್ ಕುಟುಂಬವು ದೇಸಿ ಹಸು ಉತ್ಪನ್ನಗಳ ಆಧಾರದ ಮೇಲೆ ನೈಸರ್ಗಿಕ ಚಿಕಿತ್ಸೆ ಪ್ರಚಾರ ಮಾಡುವ ಭಕ್ತಿಭೂಷಣ ಪ್ರಭುಜಿ ಅವರನ್ನು ಉಡುಪಿಯ ಮಲ್ಪೆ ಪೇಟೆಯಲ್ಲಿರುವ ಅವರ ಗೋಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಭೇಟಿಯಾಯಿತು ಎಂದು ಗೋವಿನತೋಟ ಗೋ ಶಾಲೆಯ ಸದಸ್ಯರಾದ ತಾರಾನಾಥ ಕೊಟ್ಟಾರಿ ಅವರನ್ನು ಉಲ್ಲೇಖಿಸಿ ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.
ವರದಿ ಪ್ರಕಾರ, ಆರೋಗ್ಯದಲ್ಲಿ ಏರುಪೇರಾಗಿ ದೈಹಿಕವಾಗಿ ದುರ್ಬಲವಾಗಿದ್ದ ಮಗು ಪ್ರಭುಜಿ ಸೂಚಿಸಿದ ಪ್ರಕೃತಿ ಚಿಕಿತ್ಸೆ ನಂತರ ಚೇತರಿಸಿಕೊಂಡಿದೆ. ಚಿಕಿತ್ಸೆಯ ಅವಧಿಯಲ್ಲಿ ಕುಟುಂಬವು ಮೂರು ತಿಂಗಳ ಕಾಲ ಗೋ ಶಾಲೆಯ ಪಕ್ಕದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿತ್ತು.
ಸುಮಾರು ಒಂದು ತಿಂಗಳ ಹಿಂದೆ, ಆಂಡ್ರ್ಯೂ ಮತ್ತು ಅವರ ಕುಟುಂಬವು ಜನ್ಮಾಷ್ಟಮಿ ಸಮಯದಲ್ಲಿ ಗೋವಿನತೋಟದ ಕೊರಗಜ್ಜ ದೇಗುಲದಲ್ಲಿ ನಡೆದ ಅಗೇಲು ಸೇವೆಯಲ್ಲಿ ಭಾಗವಹಿಸಿದ್ದರು. ಕೊರಗಜ್ಜನ ಮುಂದೆ ಮಗನ ಆನಾರೋಗ್ಯ ಸಮಸ್ಯೆ ಪರಿಹಾರವಾಗಲಿ ಎಂದು ಕೋರಿಕೊಂಡಿದ್ದರು.

ಪ್ರಮುಖ ಸುದ್ದಿ :-   ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲು

ಮಗ ಹುಷಾರದಾರೆ ಕೊರಗಜ್ಜನಿಗೆ ಅಗೇಲು ಸೇವೆ ನೀಡೋದಾಗಿ ಹರಕೆ ಹೊತ್ತಿದ್ದರು. ಕೊರಗಜ್ಜ ದೈವವು ಮಗುವಿಗೆ ಗುಣಪಡಿಸುವ ಭರವಸೆಯನ್ನು ಕುಟುಂಬಕ್ಕೆ ನೀಡಿತ್ತು. ಮಗ ಮಾಕ್ಸಿಂ ಚೇತರಿಸಿಕೊಂಡಿದ್ದು ಉಕ್ರೇನ್ ದಂಪತಿ ಪುದು ಗ್ರಾಮದ ಕೊಡ್ಮಣ್ಣು ಎಂಬಲ್ಲಿ ಕೊರಗಜ್ಜನಿಗೆ ಅಗೇಲು ಸೇವೆ ಸಮರ್ಪಿಸಿದ್ದಾರೆ.
‘ದೇವರು ಹೇಳಿದಂತೆ ಮಗು ಗುಣಮುಖವಾಗಿದ್ದು, ಶುಕ್ರವಾರ ಗೋವಿನತೋಟದಲ್ಲಿ ಕೊರಗಜ್ಜನಿಗೆ ಅಗೇಲು ಸೇವೆ ಸಲ್ಲಿಸಿದ ಕುಟುಂಬ ಶನಿವಾರ ಉಕ್ರೇನ್‌ಗೆ ತೆರಳಿದೆ’ ಎಂದು ಕೊಟ್ಟಾರಿ ಹೇಳಿದರು.
ಕೊರಗಜ್ಜ ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗದಲ್ಲಿ ಜನಪ್ರಿಯ ದೈವವಾಗಿದ್ದು, ಯಾವುದೇ ಬೆಲೆಬಾಳುವ ವಸ್ತು ಕಳೆದು ಹೋದರೆ, ಆರೋಗ್ಯ ಸಮಸ್ಯೆ ಎದುರಾದರೆ ಅಲ್ಲಿನ ಜನರು ಕೊರಗಜ್ಜನಿಗೆ ಹರಕೆ ಹೊತ್ತುಕೊಳ್ಳುತ್ತಾರೆ. ಬಹುಪಾಲು ಬೇಡಿಕೆಗಳು ಈಡೇರಿವೆ ಎಂದು ತುಳುನಾಡಿ ಕೊರಗಜ್ಜನ ನಂಬಿರುವ ಭಕ್ತರು ಹೇಳುತ್ತಾರೆ.

3.8 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement