ವರನ ಕಡೆಯವರು ‘ಅಗ್ಗದ’ ಲೆಹೆಂಗಾ ಕಳುಹಿಸಿದ್ದಾರೆಂದು ಮದುವೆಯನ್ನೇ ರದ್ದುಗೊಳಿಸಿದ ವಧು…!

ವಿಲಕ್ಷಣ ಘಟನೆಯೊಂದರಲ್ಲಿ, ವರನ ಮನೆಯವರು ಕಳುಹಿಸಿದ ಲೆಹೆಂಗಾ ಇಷ್ಟವಾಗಲಿಲ್ಲವೆಂದು ಮದುಮಗಳೊಬ್ಬಳು ತನ್ನ ಮದುವೆಯನ್ನೇ ರದ್ದುಗೊಳಿಸಿದ್ದಾಳೆ…! ಲೆಹೆಂಗಾ ತುಂಬಾ ಕಳಪೆಯಾಗಿದೆ ಎಂದು ಮದುಮಗಳು ಹೇಳಿದ್ದಾಳೆ.
ಉತ್ತರಾಖಂಡದ ಹಲ್ದ್ವಾನಿ ಜಿಲ್ಲೆಯಲ್ಲಿ ಈ ಘಟನೆ ನಡೆದ ಬಗ್ಗೆ ವರದಿಯಾಗಿದೆ. ಆದರೆ, ವರನ ಕುಟುಂಬದವರು ಲೆಹೆಂಗಾದ ಬೆಲೆ 10,000 ರೂ. ಇದನ್ನು ವಿಶೇಷವಾಗಿ ವಧುವಿಗಾಗಿ ಲಕ್ನೋದಿಂದ ಖರೀದಿಸಲಾಗಿದೆ ಎಂದು ಹೇಳಿದ್ದಾರೆ.
ಮೂಲಗಳ ಪ್ರಕಾರ, ವರನ ತಂದೆ 10,000 ರೂ.ಗಳಿಗೆ ಲಕ್ನೋದಿಂದ ಲೆಹೆಂಗಾವನ್ನು ಆರ್ಡರ್ ಮಾಡಿದ್ದರು. ನಂತರ ವರನ ಕುಟುಂಬದವರು ಅದನ್ನು ವಧುವಿನ ಕುಟುಂಬಕ್ಕೆ ಕಳುಹಿಸಿದ್ದಾರೆ.

ಆದರೆ, ವಧುವಿಗೆ ಅದು ಇಷ್ಟವಾಗಲಿಲ್ಲ. ಆಕೆಯು ತುಂಬಾ ಅಸಮಾಧಾನಗೊಂಡಿದ್ದಳು, ಸಮಾರಂಭಕ್ಕೆ ಕೆಲವೇ ದಿನಗಳ ಮೊದಲು ಅವಳು ಮದುವೆಯನ್ನೇ ರದ್ದುಗೊಳಿಸಿದಳು.
ಈ ವರ್ಷ ಜೂನ್‌ನಲ್ಲಿ ಇವರಿಬ್ಬರ ನಿಶ್ಚಿತಾರ್ಥ ನಡೆದಿತ್ತು. ವರನ ಕುಟುಂಬ ಈಗಾಗಲೇ ಕಾರ್ಡ್‌ಗಳನ್ನು ಮುದ್ರಿಸಿತ್ತು. ಎರಡೂ ಕುಟುಂಬಗಳು ಪದೇ ಪದೇ ಪ್ರಯತ್ನಿಸಿದರೂ, ಎಲ್ಲಾ ಸಿದ್ಧತೆಗಳನ್ನು ಮಾಡಿ ಅವರ ನಿಶ್ಚಿತಾರ್ಥ ನಡೆದಿದ್ದರೂ ಹುಡುಗಿ ತನ್ನ ಭಾವಿ ಪತಿಯನ್ನು ಮದುವೆಯಾಗಲು ಒಪ್ಪಲಿಲ್ಲ.
ಇಂತಹ ಘಟನೆ ನಡೆದಿರುವುದು ಇದೇ ಮೊದಲಲ್ಲ. ಭಾರತೀಯ ವಿವಾಹಗಳು ಕೆಲವೊಮ್ಮೆ ನಾಟಕೀಯವಾಗಿ ಇಂತಹ ಯಡವಟ್ಟುಗಳು ನಡೆಯುತ್ತಲೇ ಇರುತ್ತವೆ.
ಇತ್ತೀಚೆಗಷ್ಟೇ ವರ ಕುಡಿದ ಮತ್ತಿನಲ್ಲಿ ಬಂದ ಹಿನ್ನೆಲೆಯಲ್ಲಿ ವಧು ತನ್ನ ಮದುವೆಯನ್ನು ರದ್ದುಗೊಳಿಸಿದ್ದರು. ಮತ್ತೊಂದೆಡೆ, ಮದುವೆಗೆ ಮುನ್ನ ವಧುವಿಗೆ ಬಾಯ್ ಫ್ರೆಂಡ್ ಇದ್ದಾನೆ ಎಂದು ತಿಳಿದ ವರನೊಬ್ಬ ತನ್ನ ಮದುವೆಯನ್ನು ರದ್ದುಗೊಳಿಸಿದ್ದಾನೆ.

ಪ್ರಮುಖ ಸುದ್ದಿ :-   26/11ರ ಮುಂಬೈ ಭಯೋತ್ಪಾಕ ದಾಳಿ: ಹೇಮಂತ್ ಕರ್ಕರೆ ಕೊಂದಿದ್ದು ಉಗ್ರ ಕಸಬ್‌ ಅಲ್ಲ, ಕೊಂದಿದ್ದು ಆರ್‌ ಎಸ್‌ ಎಸ್ ನಂಟಿನ ಪೊಲೀಸ್‌ ಅಧಿಕಾರಿ ; ಕಾಂಗ್ರೆಸ್​ ನಾಯಕನ ವಿವಾದಿತ ಹೇಳಿಕೆ

 

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement